Home ಬೆಂಗಳೂರು Benglore: ಬೆಂಗ್ಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ!! ಸ್ಥಳಕ್ಕೆ ದೌಡಾಯಿಸಿದ, ಪೋಲೀಸ್ ಹಾಗೂ ಬಾಂಬ್...

Benglore: ಬೆಂಗ್ಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ!! ಸ್ಥಳಕ್ಕೆ ದೌಡಾಯಿಸಿದ, ಪೋಲೀಸ್ ಹಾಗೂ ಬಾಂಬ್ ನಿಷ್ಕ್ರಿಯದಳ!!

Benglore
Image soure:BDO digital

Hindu neighbor gifts plot of land

Hindu neighbour gifts land to Muslim journalist

Benglore:ಬೆಂಗಳೂರಿನ bengloreಬೆಳ್ಳಂದೂರಿನ ಇಕೋ ಸ್ಪೇಸ್ ನ (Ecospace Business Park) IBDO ಅನ್ನೋ ಐಟಿಬಿಟಿ (ITBT) ಕಂಪನಿಯೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.

2 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯಿಂದ ಫೋನ್ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ದೌಡಾಯಿಸಿದ್ದಾರೆ.

 

ಅಂದಹಾಗೆ ಕರೆ ಮಾಡಿದ ವ್ಯಕ್ತಿಯು, ಕಂಪೆನಿಗೆ ಬಾಂಬ್(Bomb) ಇಟ್ಟಿದ್ದೀವಿ, ಸ್ವಲ್ಪ ಸಮಯದಲ್ಲಿ ಬ್ಲಾಸ್ಟ್(Blast) ಆಗುತ್ತೆ ಎಂದು ತಿಳಿಸಿದ್ದಾನೆ. ಕರೆ ಬಂದಿದ್ದೇ ಸ್ಥಳೀಯ ಪೊಲೀಸರಿಗೆ ಕಂಪನಿ ಮಾಹಿತಿ ನೀಡಿದೆ. ನಂತರ ಬಾಂಬ್ ನಿಷ್ಕ್ರಿಯಕ್ಕೆ ಬೇಕಾದ ಸಕಲ ಸಿದ್ದತೆಮಾಡಿಕೊಳ್ಳಲಾಗಿದೆ. ಆದರೆ ಎಷ್ಟೇ ಹುಡುಕಿದರೂ ಬಾಂಬ್ ಪತ್ತೆಯಾಗಿಲ್ಲ.

 

ಈ ನಡುವೆ ಕಂಪನಿಯ ಹಳೇ ಉದ್ಯೋಗಿಯಿಂದ ಹುಸಿ ಬಾಂಬ್ ಕರೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲವೇ ದಿನಗಳ ಹಿಂದೆ ನವನೀತ್ ಪ್ರಸಾದ್ ಎಂಬಾತನನ್ನು ಅಸಭ್ಯ ವರ್ತನೆ ಹಿನ್ನಲೆ ಕೆಲಸದಿಂದ ವಜಾ ಮಾಡಲಾಗಿತ್ತು. ಇದೇ ಕಾರಣಕ್ಕೆ ಆರೋಪಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಹೀಗಾಗಿ ಇಡೀ ಕಟ್ಟಡವನ್ನು ಪೊಲೀಸರು,ಬಾಂಬ್ ಸ್ಕ್ವಾಂಡ್ ಚೆಕ್ ಮಾಡುತ್ತಿದ್ದಾರೆ.

 

ಕೆಲಸ ಬಿಟ್ಟ ಉದ್ಯೋಗಿಯ ಮೇಲೆ ಅನುಮಾನ ಹೆಚ್ಚಿದ್ದು, ಇತ್ತೀಚೆಗಷ್ಟೇ ಈತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆತನೇ ಬಾಂಬ್ ಬೆದರಿಕೆ ಕರೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಫೋನ್ ಕರೆ ಸ್ವೀಕರಿಸಿದ ಉದ್ಯೋಗಿಯಿಂದಲೂ ಹಳೇ ಉದ್ಯೋಗಿಯ ಹೆಸರು ಹೇಳಿದ್ದಾನೆ. ಹೀಗಾಗಿ ಹಳೇ ಉದ್ಯೋಗಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ :ಹೊಸ ಸಿನಿಮಾ ಹೆಸರು ರಿಲೀಸ್‌ ಮಾಡಿದ ರಾಜ್‌ ಬಿ ಶೆಟ್ಟಿ ಟೋಬಿʼ ಮೂಲಕ ಮತ್ತೊಮ್ಮೆ ತೆರೆಗೆ!