Bangalore-Mysore Toll: ಜೂನ್ 1ರಿಂದಲೇ ʻಬೆಂ-ಮೈ ದಶಪಥ ರಸ್ತೆʼಯ ಟೋಲ್‌ ದರ ಏರಿಕೆ..!

karnataka news politics toll rate Bangalore-Mysore road toll rate hike from 1st June

ಹೊಸಗನ್ನಡ : ಜೂನ್ 1ರಿಂದಲೇ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್‌ ದರ ಮತ್ತೆ ಹೆಚ್ಚಳ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಆದೇಶ ನೀಡಲಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ವಾಹನ ಸವಾರರು ಫಾಸ್ಟ್​ಟ್ಯಾಗ್ ಮೂಲಕ ಟೋಲ್​ ಶುಲ್ಕವನ್ನು ​ಪಾವತಿಸಬಹುದಾಗಿರೋದ್ರಿಂದ ಅದೇಷ್ಟು ವಾಹನ ಸವಾರರ ಗಮನಕ್ಕೆ ತಿಳಿದು ಬಂದಿಲ್ಲ. ಆದ್ರೆ ಜೂನ್ 1ರಿಂದಲೇ ಶೇ.22ರಷ್ಟು ದುಬಾರಿ ಶುಲ್ಕ ಅನ್ವಯವಾಗುತ್ತಿದೆ.

ದುಬಾರಿ ಟೋಲ್‌ ದರ ಇಲ್ಲಿದೆ ಓದಿ :

ಏಕಮುಖ ಸಂಚಾರವಾಗಿ ಕಾರು, ವ್ಯಾನ್‌, ಜೀಪ್‌ ದರ 135-165ಕ್ಕೆ ಏರಿಕೆ ಮಾಡಿದ್ದು 30 ರೂ. ಹೆಚ್ಚಳ
ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ದರ 220-270ಕ್ಕೆ ಏರಿಕೆ (50 ರೂ. ಹೆಚ್ಚಳ)
ಟ್ರಕ್‌, ಬಸ್, 2 ಆ್ಯಕ್ಸೆಲ್‌ ವಾಹನ ಏಕಮುಖ ಸಂಚಾರ ಟೋಲ್ ದರ ₹460-565ಕ್ಕೆ ಏರಿಕೆ (105 ಹೆಚ್ಚಳ)
3 ಆ್ಯಕ್ಸೆಲ್‌ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹500-615ಕ್ಕೆ ಏರಿಕೆ (115 ರೂ. ಹೆಚ್ಚಳ)
ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹720ರಿಂದ ₹885ಕ್ಕೇರಿಕೆ (165 ರೂ.ಗೆ ಹೆಚ್ಚಳ)
7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್‌ ವಾಹನಗಳ ಟೋಲ್‌ ₹880-1,080ಕ್ಕೇರಿಕೆ (200 ಹೆಚ್ಚಳ)

ಕಳೆದ ಹಲವು ದಿನಗಳ ಹಿಂದೆ ಟೋಲ್‌ ದರವನ್ನು ಹೆಚ್ಚಳ ಮಾಡಿದಕ್ಕೆ ರಾಜ್ಯಾದ್ಯಂತ ಆಕ್ರೋಶಗೊಂಡವರಿಗೆ ಮತ್ತೊಮ್ಮೆಟೋಲ್‌ ದರ ಏರಿಕೆಯ ಬಿಗ್‌ ಶಾಕಿಂಗ್‌ ಎದುರಾಗಿದ್ದಂತೂ ನಿಜ.

Leave A Reply

Your email address will not be published.