Benglore: ಬೆಂಗಳೂರಿಗೆ ಬಂದಿದ್ದ ನೆದರ್ಲ್ಯಾಂಡ್ ಯೂಟ್ಯೂಬರ್ ಮೇಲೆ ನವಾಬ್ ದರ್ಪ, ಪೋಲೀಸ್ ಅತಿಥಿಯಾದ ಪುಂಡ !!

Nawab assaulted a Dutch YouTuber who had come to Benglore police arrested

Benglore: ಭಾರತದಲ್ಲಿ(India) ಅತಿಥಿಯನ್ನು ದೇವರ ರೂಪದಲ್ಲಿ ನೋಡುವ ಪರಿಪಾಠವಿದೆ. ಆದರೆ ಬೆಂಗಳೂರಿನಲ್ಲೊಬ್ಬ(Benglore) ಸ್ಥಳೀಯ ವರ್ತಕ, ಪ್ರವಾಸಕ್ಕೆಂದು ಬಂದ ವಿದೇಶಿ ಪ್ರಜೆಗೆ ಕಿರುಕುಳ ನೀಡಿ ಸದ್ಯ ಪೋಲೀಸರ ಅತಿಥಿಯಾಗಿದ್ದಾನೆ.

ಹೌದು, ಕರ್ನಾಟಕದ ಡಾಕ್ಟರ್‌ ಬ್ರೋ(Dr.bro) ರೀತಿಯಲ್ಲಿ ನೆದರ್ಲ್ಯಾಂಡ್ ಮೂಲದ ಮ್ಯಾಡ್ಲಿ ರೋವರ್ (Madly Rover) ಎಂಬ ಯೂಟ್ಯೂಬರ್(Youtuber) ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೀಡಿಯೋ ಮಾಡುತ್ತಾ ಸುತ್ತುತ್ತಿದ್ದರು. ಸಂಡೇ ಬಜಾರ್‌ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮಾಡದಂತೆ ಹಲ್ಲೆಗೆ ಯತ್ನಿಸಿದ್ದಾನೆ. ಇದರಿಂದ ಭೀತಿಗೊಳಗಾದ ವಿದೇಶಿಗ, ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರೀಗ ಈ ವಿದೇಶಿ ಯೂಟ್ಯೂಬರ್ ಗೆ ಧಮ್ಕಿ ಹಾಕಿದಾತನ್ನು ಪೋಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ ಬಂಧಿತ ಆರೋಪಿಯನ್ನು ನವಾಬ್ ಹಯಾತ್ ಶರೀಫ್(Nawab Hayat sharif) ಎಂದು ಗುರುತಿಸಲಾಗಿದೆ. ಈತನ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್‌, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪ್ರವಾಸಿಗರೊಂದಿಗೆ ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಈ ವಿಡಿಯೋ ವಿದೇಶಿ ಯೂಟ್ಯೂಬರ್ ನ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಅವರು ಅದನ್ನು ತಮ್ಮ ಚ್ಯಾನಲ್‌ಅಲ್ಲಿ ಅಪ್ಲೋಡ್ ಮಾಡಿದ್ದಾರೆ. ಚಿಕ್ಕಪೇಟೆಯಲ್ಲಿ(Chikkapete) ನಡೆದ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ತಕ್ಷಣ ಪ್ರಕರಣವನ್ನು ಡಿಸಿಪಿ ಗಮನಕ್ಕೆ ಸ್ಥಳೀಯರು ತಂದಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ (Social Meida) ವೀಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್‌ ಮಾಡಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಒಂದು ಘಟನೆಯಿಂದ ಬೆಂಗಳೂರಿನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜು ಆದಂತಾಗಿದೆ.

ಹಳೆ ಬಟ್ಟೆ ವ್ಯಾಪಾರಕ್ಕೆ ತೊಂದರೆ ಆಗುತ್ತೆಂದು ವೀಡಿಯೋ ತಡೆಯಲು ಯತ್ನ: ನೆದರ್‌ಲ್ಯಾಂಡ್‌ ಯೂಟ್ಯೂಬರ್‌ ಮೇಲೆ ಹಲ್ಲೆಗೆ ಯತ್ನಿಸಿದ 58ರ ಪ್ರಾಯದ ನಾವಾಬ್ ಬಿನ್ ಹಯಾತ್ ಷರೀಫ್ ಹಳೇ ಗುಡ್ಡದಹಳ್ಳಿಯಲ್ಲಿ ಆಟೋ ಡ್ರೈವರ್ ಆಗಿದ್ದು, ಜೊತೆಗೆ ಹಳೇ ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾನೆ. ಈತನು ಈಗ್ಗೆ ಸುಮಾರು 2 ತಿಂಗಳ ಹಿಂದೆ ಸುಲ್ತಾನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿರುವಾಗ ವಿದೇಶಿ ವ್ಯಕ್ತಿ, Pedro moto ರಸ್ತೆಯಲ್ಲಿ ವಿಡಿಯೋ ಮಾಡುತ್ತಿರುವಾಗತನ್ನ ಹಳೇ ಬಟ್ಟೆ ವ್ಯಾಪಾರಕ್ಕೆ ತೊಂದರೆಯಾಗುತ್ತಾದೆಂದು ಅಥವಾ ಪೊಲೀಸ್ ನವರಿಗೆ ಏನಾದರೂ ಮಾಹಿತಿ ನೀಡಬಹುದೆಂದು ವಿಡಿಯೋ ಮಾಡದಂತೆ ತಡೆದು ಅಡ್ಡಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡುತ್ತಿದ್ದ ವಿದೇಶಿಗನಿಗೆ ತೊಂದರೆ ಮಾಡಿರುತ್ತಾನೆ. ಈ ಸಂಬಂಧ ಮುದಸ್ಸಿರ್ ಅಹಮದ್ ರವರು Twitter ನಲ್ಲಿ ದೂರು ದಾಖಲಿಸಿದ್ದು, ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಯಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: Snake Viral Video: ಗುಂಗುರು ಕೂದಲಿನಲ್ಲಿ ಹಾವಿನ ಹರಿದಾಟ; ಎಳೆದರೂ ಹೊರಬರಲ್ಲ, ವಿಡಿಯೋ ನೋಡಿದ್ರೆ ಎದೆ ಝಲ್ !! 

 

Leave A Reply

Your email address will not be published.