MBBS ವಿದ್ಯಾರ್ಥಿ ಆತ್ಮಹತ್ಯೆ, ತುಮಕೂರಿನ ಕುಣಿಗಲ್ ಜಲಾಶಯಕ್ಕೆ ಧುಮುಕಿದ ವೈದ್ಯ !

Chennai Death news Chennai MBBS student death by sucide jumps into Kunigal reservoir in Tumkur Karnataka latest news

MBBS student death in Tumkur: ಎಂಬಿಬಿಎಸ್ ವೈದ್ಯ ವಿದ್ಯಾರ್ಥಿ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಶವ ಪತ್ತೆಯಾಗಿದೆ.

ಮೃತನನ್ನು ಚೆನ್ನೈನ ಅಶೋಕನಗರ ನಾಗತಮ್ಮನ್ ಕೋಯಿಲ್ ಸ್ಟ್ರೀಟ್ ನಿವಾಸಿ ಪ್ರವೀಣ್ ಕಾರ್ತೀಕ್ ಎಂದು ಗುರುತಿಸಲಾಗಿದೆ. ಆತ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ(MBBS student death in Tumkur) ಮಾಡಿಕೊಂಡಿದ್ದಾನೆ.

ಮೂಲತಃ ಚೆನ್ನೈನವನಾದ ಪ್ರವೀಣ್ ಕಾರ್ತೀಕ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜೂನ್ 9 ರಂದು ಟಿಕೆಟ್ ಬುಕ್ ಮಾಡಿ ಚೆನ್ನೈಗೆ ಮರಳಲು ಪೋಷಕರು ಮನವಿ ಮಾಡಿದ್ದರು. ಎಲ್ಲ ಸರಿ ಇದ್ದಿದ್ದರೆ ಕೆಲವೇ ಗಂಟೆಗಳಲ್ಲಿ ಆತ ತನ್ನ ಮನೆಗೆ ಹಿಂದಿರುಗುತ್ತಿದ್ದ. ಆದರೆ ಮಗ ಚೆನ್ನೈಗೆ ಬಂದೇ ಇಲ್ಲ.

ಚೆನ್ನೈ ಬಸ್ ನಿಲ್ದಾಣದಲ್ಲಿ ಮಗನನ್ನು ಕರದುಕೊಂಡು ಬರಲು ಹೋದ ತಂದೆ ಚಂದ್ರಶೇಖರನ್ ಮಗನಿಗಾಗಿ ಕಾದು ಕಾದು.ಸುಸ್ತಾಗಿದ್ದರು. ಮಗ ಬರದಿರುವುದನ್ನು ಕಂಡು ಅವರು ಆತಂಕಕ್ಕೊಳಗಾಗಿದ್ದರು. ಅದೇ ಸಮಯದಲ್ಲಿ ತಾಯಿಯ ಮೊಬೈಲ್‌ಗೆ ‘ಮಿಸ್ ಯು ಮಮ್ಮಿ’ ಎನ್ನುವ ಸಂದೇಶ ಬಂದಿತ್ತು. ಆಗ ಆತಂಕಗೊಂಡ ಚಂದ್ರಶೇಖರನ್ ತುಮಕೂರು ಕಡೆ ಪ್ರಯಾಣ ಬೆಳೆಸಿದ್ದರು. ಆದರೆ ಅಷ್ಟರಲ್ಲಿ ಅನಾಹುತ ಸಂಭವಿಸಿತ್ತು.

ಕುಣಿಗಲ್ ನ ಮಾರ್ಕೋನಹಳ್ಳಿ ಜಲಾಶಯದ ಸಿಬ್ಬಂದಿಗೆ ಜಲಾಶಯದ ಬಳಿ ಬ್ಯಾಗ್, ಬೈಕ್, ಚಪ್ಪಲಿ ಮತ್ತು ಮೊಬೈಲ್ ದೊರೆತ್ತಿದ್ದು, ಕಾಲೇಜು ಸಿಬ್ಬಂದಿ ಸುದ್ಧಿ ಆತನ ಅಪ್ಪ ಚಂದ್ರಶೇಖರನ್ ಗೆ ಸುದ್ದಿ ಮುಟ್ಟಿಸಿದ್ದರು. ಅಲ್ಲದೆ ಪೊಲೀಸರನ್ನು ಸಂಪರ್ಕಿಸಿದ ಸಿಬ್ಬಂದಿ ಭಾನುವಾರ ಬೆಳಿಗ್ಗೆ ಶವ ತೇಲುತ್ತಿರುವುದು ಕಂಡು ಮಾಹಿತಿ ನೀಡಿದ್ದಾರೆ..ಈಗ ಪೋಷಕರು ಶವವನ್ನು ಗುರುತಿಸಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೈದ್ಯರುಗಳು ಮತ್ತು ವೈದ್ಯ ವಿದ್ಯಾರ್ಥಿಗಳು ಕೂಡಾ ಆತ್ಮಹತ್ಯೆಗೆಯುತ್ತಿರುವ ಹೊಸ ಪಿಡುಗು ಸೃಷ್ಟಿಯಾಗಿರುವುದು ದುರಂತವೇ ಸರಿ.

ಇದನ್ನೂ ಓದಿ: SHOCKING NEWS: 4 ನೇ ಮಹಡಿಯಿಂದ ನೇರವಾಗಿ ಮಡಿಲಿಗೆ ಬಂದು ಬಿದ್ದ ಮಗು, ಅದೃಷ್ಟ ಅಂದರೆ ಇದು !

Leave A Reply

Your email address will not be published.