Shakti scheme: ಮಹಿಳೆಯರಿಗೆ ಚೀಟಿ ಹರಿದ ಸಿಎಂ!!ರೈಯ ರೈಯ….ಕಂಡಕ್ಟರ್ ಸಿದ್ರಾಮಯ್ಯ

Karnataka news Congress guarantee Shakti scheme launched live updatesCM Siddramaiah inaugurate free bus travel for women

Shakti scheme inaugurate: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government)ನುಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇವುಗಳ ಪೈಕಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆಗೆ)ಕ್ಕೆ ಇದೀಗ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು (Shakti scheme inaugurate), ಸ್ವತಃ ಸಿಎಂ ಸಿದ್ದರಾಮಯ್ಯನವರೇ ಬಸ್ ಹತ್ತಿ, ಕಂಡಕ್ಟರ್ ಆಗಿ ರೈಟ್ ರೈಟ್ ಹೇಳಿಕ್ಕೆ ಸಜ್ಜಾಗಿದ್ದಾರೆ.

ಹೌದು, ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ನೀಡುವ ಶಕ್ತಿ ಯೋಜನೆಗೆ (Shakti Scheme) ಇಂದು (ಜೂನ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮುಂಭಾಗದಲ್ಲಿ ಚಾಲನೆ ನೀಡಿದ್ದು, 5 ಗ್ಯಾರಂಟಿಗಳ ಪೈಕಿ ಒಂದು ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಂತಾಗಿದೆ. ಹೀಗಾಗಿ ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಕರ್ನಾಟಕದ ನಾರಿಮಣಿಯರು ಉಚಿತವಾಗಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಬೆಳಸಬಹುದು.

ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಮಾದರಿ ಬಿಡುಗಡೆ ಮಾಡಿದ ಸಿಎಂ ಅವರು, ಇಂದಿನ ಶಕ್ತಿ ಸಮಾರಂಭದಲ್ಲಿ ಐವರು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ್ದಾರೆ. ಸಾಂಕೇತಿಕವಾಗಿ ಐವರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿದ ಸಿಎಂ, ಡಿಸಿಎಂ, ಸುಮಿತ್ರಾ, ರಾಧಾ, ಪ್ರೇಮಾ, ಕಲಾವತಿ, ಪವಿತ್ರಾಗೆ ಸ್ಮಾರ್ಟ್ ಕಾರ್ಡ್ ವಿತರಿಸಿದ್ದಾರೆ.

ಅಂದಹಾಗೆ ವಿಧಾನ ಸೌಧದ ಮುಂಭಾಗ 4 ನಿಗಮದ (BMTC, KSRTC, NWKRTC, KKRTC) ಸಾಮಾನ್ಯ ಬಸ್ ನಿಲ್ಲಿಸಿ, ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕವನ್ನು ಆರಂಭಿಸಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಲೋಗೋ ಅನಾವರಣಗೊಳಿಸಿದರು.

ಶಕ್ತಿ ಯೋಜನೆಗೆ ಚಾಲನೆ ಬಳಿಕ ಸಿದ್ದರಾಮಯ್ಯ ಅವರು, ಶಕ್ತಿ ಯೋಜನೆಯನ್ನು ಎಲ್ಲರೂ ಸಂತೋಷದಿಂದ ಉದ್ಘಾಟಿಸಿದ್ದೇವೆ. ಶಕ್ತಿ ಯೋಜನೆ ಮಹಿಳೆಯರಿಗೆ ಮಾಡಿರುವ ಕಾರ್ಯಕ್ರಮ, ಮಹಿಳೆಯರು ಶತಮಾನದಿಂದ ಅವಕಾಶದಿಂದ ವಂಚಿತರಾಗಿದ್ದಾರೆ. ಮಹಿಳೆಯರು ಸಮಾಜದಲ್ಲಿ ಸದೃಢವಾಗಿ ನಿಲ್ಲಲು ಮಾಡಿದ ಯೋಜನೆ, ಸಾಮಾಜಿಕ, ಆರ್ಥಿಕ ಅಸಮಾನತೆಗೆ ಮಹಿಳೆಯರು ಒಳಗಾಗಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ನಾವು ಜಾರಿಗೆ ತಂದ ಐದು ಯೋಜನೆಯಲ್ಲಿ ನಾಲ್ಕು ಮಹಿಳೆಯರಿಗೆ ಸಂಬಂಧಪಟ್ಟದ್ದಾಗಿದೆ. ಐದು ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಈಡೇರಿಸಿಯೇ ತೀರಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಗ್ಯಾರಂಟಿ ಯೋಜನೆ ಕೊಡುವಾಗ ಯೋಚನೆ ಮಾಡಿಲ್ಲ, ಆದರೆ ಕೊಟ್ಟ ಮಾತು ಉಳಿಸ್ಕೊಂಡೇ ಉಳಿಸ್ತೀವಿ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ರಾಮಲಿಂಗಾ ರೆಡ್ಡಿ ಅವರು ಬಸ್‌ನ ರಿಬ್ಬನ್‌ ಕಟ್‌ ಮಾಡಿ, ಬಸ್‌ನಲ್ಲಿದ್ದ ಮಹಿಳೆಯರಿಗೆ ಜೀರೋ ಟಿಕೆಟ್‌ ನೀಡಿ, ಬಸ್‌ ವಿಧಾನಸೌಧದಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಬಿಎಂಟಿಸಿ ಬಸ್‌ನಲ್ಲಿ ಸಿಎಂ, ಡಿಸಿಎಂ ಮೆಜೆಸ್ಟಿಕ್‌ ಗೆ ಆಗಮನ. ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗ ರೆಡ್ಡಿ, ಕೆಜೆ ಜಾರ್ಜ್‌, ಕೃಷ್ನಭೈರೇಗೌಡ, ಶಾಸಕರು ಎಂಎಲ್‌ಸಿಗಳು ಸಾರಿಗೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಯನ್ನು ಅಪ್ಡೇಟ್‌ ಮಾಡಲಾಗುತ್ತಿದೆ

ಉಚಿತ ಪ್ರಯಾಣ ಅಂತ ಬರೀ ಕೈಯಲ್ಲಿ ಹೋದರೆ ಫ್ರೀ ಸಂಚಾರಕ್ಕಿಲ್ಲ ಅವಕಾಶ.!
ನಾವು ಮಹಿಳೆಯರು ಎಂದು ಖಾಲಿ ಕೈಯಲ್ಲಿ ಬಸ್ಸು ಹತ್ತಿ ಫ್ರೀ ಯಾಗಿ ಪ್ರಯಾಣ ಮಾಡುವುದು ಅಸಾಧ್ಯ. ಹೌದು, ನಿಮ್ಮಲ್ಲಿ ಬಸ್ ಸಂಚಾರದ ವೇಳೆ ಸರ್ಕಾರಿ ದಾಖಲೆ ಇಲ್ಲದೇ ಹೋದಲ್ಲಿ ನೀವು ಟಿಕೆಟ್ ಖರೀದಿ ಮಾಡಲೇಬೇಕಾಗುತ್ತದೆ. ನಿಮ್ಮ ಪ್ರಯಾಣ ಉಚಿತವಾಗಲು ಕಡ್ಡಾಯವಾಗಿ ಸರ್ಕಾರಿ ದಾಖಲೆ ತೋರಿಸಲೇ ಬೇಕು.ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಾಸಸ್ಥಳ ಧೃಡಿಕರಣಪತ್ರ ಗಳಲ್ಲಿ ಯಾವುದಾದರೂ ಒಂದನ್ನು ನಿರ್ವಾಹಕರಿಗೆ ತೋರಿಸಿದರೂ ಸಾಕು. ಮಹಿಳೆಯರ ಪ್ರಯಾಣ ಉಚಿತವಾಗಲಿದೆ. ಅಲ್ಲದೆ ಈ ವ್ಯವಸ್ಥೆ ತಾತ್ಕಾಲಿಕವಾಗಿರಲಿದ್ದು ಮೂರು ತಿಂಗಳ ಒಳಗಾಗಿ ಉಚಿತ ಬಸ್ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆಯಲು ಅಪ್ಲೈ ಮಾಡಬೇಕು. ನಂತರ ಸ್ಮಾರ್ಟ್ ಕಾರ್ಡ್ ಇಲ್ಲದಿದ್ದಲ್ಲಿ ಟಿಕೆಟ್ ಖರೀದಿಸಲೇ ಬೇಕು.

ಅದಲ್ಲದೇ ಐಷಾರಾಮಿ ಬಸ್, ಎಸಿ ಬಸ್, ನಾನ್‌ ಎಸಿ ಬಸ್, ರಾಜಹಂಸ, ಸ್ಲೀಪರ್ ಕೋಚ್, ವಜ್ರ, ವಾಯುವಜ್ರ, ಐರಾವತ, ಅಂಬಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.

ಶಕ್ತಿ ಯೋಜನೆಯಲ್ಲಿ ಕಂಡಕ್ಟರ್ಗಳ ಜವಾಬ್ದಾರಿಗಳೇನು..?
-ಅಂತರಾಜ್ಯಬಸ್ ಗಳಲ್ಲಿ ಸೌಲಭ್ಯ ಇಲ್ಲದನ್ನ ಮಹಿಳೆಯರಿಗೆ ನಯವಾಗಿ ಹೇಳಬೇಕು..!
-ಬಸ್ ನಲ್ಲಿ ಎಲ್ಲಾ ಮಹಿಳೆಯರಿಗೆ ಶೂನ್ಯ ಟಿಕೆಟ್ ನೀಡಬೇಕು
-ಪ್ರಯಾಣದ ವೇಳೆ ಗುರುತಿನ ಚೀಟಿ ಕಂಡಕ್ಟರ್ ಗಳು ಮಾನ್ಯ ಮಾಡಬೇಕು
-ಮಹಿಳೆಯರಿಗೆ ಶೂನ್ಯ ಟಿಕೆಟ್ ನೀಡಿ. ಹಣ ಪಡೆದುಕೊಳ್ಳಬಾರದು
– ಮಹಿಳಾ ಪ್ರಯಾಣಿಕರ ಜೊತೆ ವಿನಯ ದಿಂದ ನಡೆದುಕೊಳ್ಳಬೇಕು.ದೂರು ಬರದಂತೆ ಕಾರ್ಯ ನಿರ್ವಹಿಸಬೇಕು.

ಇದನ್ನೂ ಓದಿ: Bus Ticket: ಮಹಿಳೆಯರೇ, ನಿಮ್ಮ ಉಚಿತ ಬಸ್ ಟಿಕೆಟ್ ಹೇಗಿರುತ್ತೆ ನೋಡ್ಬೇಕಾ ?

Leave A Reply

Your email address will not be published.