Bengaluru: ನೆರೆಮನೆಯ ಮಹಿಳೆ ಸ್ನಾನ ಮಾಡುವಾಗ ನೋಡಿ ಮಜಾ ತಗೋತ್ತಿದ್ದ ವ್ಯಕ್ತಿ, ಪೊಲೀಸರಿಗೊಪ್ಪಿಸಿದ ಸ್ಥಳೀಯರು!

Karnataka crime news Bengaluru news a man arrested for looking woman bathing at Bengaluru

Share the Article

Bengaluru: ನೆರೆಮನೆಯ ಮಹಿಳೆಯೋರ್ವಳು ಸ್ನಾನ ಮಾಡುವುದನ್ನು ಇಣುಕಿ ನೋಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿರುವ ಘಟನೆಯೊಂದು ಬೆಂಗಳೂರಿನ(Bengaluru) ಮಾರತ್ತಹಳ್ಳಿಯ ಮುನ್ನೇಕೊಳಲುನಲ್ಲಿ ನಡೆದಿದೆ. ಈಗ ಈತನನ್ನು ಪೊಲೀಸರು ಬಂಧಿಸಿದ್ದಾರೆ. ನಿತಿನ್‌ ಬಂಧಿತ ಕಾಮುಕ. ಈತ ಬಾಡಿಗೆ ಮನೆಯಲ್ಲಿದ್ದು ತನ್ನ ಪಕ್ಕದ ಮನೆ ಮಹಿಳೆ ಸ್ನಾನ ಮಾಡುವುದನ್ನು ಕಿಟಕಿಯಲ್ಲಿ ನೋಡಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ನಿತೀನ್‌ರನ್ನು ಹಿಡಿದು ಮಾರತ್‌ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿತಿನ್‌ ಕಿಟಕಿಯಿಂದ ಪಕ್ಕದ ಮಹಿಳೆ ಸ್ನಾನ ಮಾಡುವುದನ್ನು ಮಹಿಳೆ ಗಮನಿಸಿರಲಿಲ್ಲ. ಆದರೆ ಇಂದು ಮತ್ತೆ ಇಣುಕಿ ನೋಡುತ್ತಿದ್ದಾಗ ಆಕೆ ಕಿರುಚಿಕೊಂಡಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಮಾರತ್‌ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Pension: ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್!

Leave A Reply