Home Karnataka State Politics Updates CM Siddaramaiah: 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು..? ಉಚಿತ ವಿದ್ಯುತ್ ಯೋಜನೆ...

CM Siddaramaiah: 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು..? ಉಚಿತ ವಿದ್ಯುತ್ ಯೋಜನೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ!!

CM Siddaramaiah
Image source- Hindustan Times

Hindu neighbor gifts plot of land

Hindu neighbour gifts land to Muslim journalist

CM Siddaramaiah: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government)ನುಡಿದಂತೆ 5 ಗ್ಯಾರಂಟಗಳ ಅನುಷ್ಠಾನಗೊಳಿಸಿದೆ. ಆದರೆ ಪ್ರತಿದಿನ ಕೂಡ ಈ ವಿಚಾರವಾಗಿ ಜನರಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿವೆ. ದಿನಬೆಳಗಾದಂತೆ ಒಬ್ಬೊಬ್ಬ ನಾಯಕರು, ಸಚಿವರುಗಳು ಗ್ಯಾರಂಟಿಗಳ ಬಗ್ಗೆ ಒಂದೊಂದು ರೀತಿಯಲ್ಲಿ ಮಾತನಾಡಿ ಜನರಲ್ಲಿ ಸಾಕಷ್ಟು ಗೊಂದಲ ಉಂಟುಮಾಡುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ (CM Siddaramaiah) ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಮಾತನಾಡಿ, ಒಂದು ವರ್ಷದಲ್ಲಿ 100 ಯೂನಿಟ್ ವಿದ್ಯುತ್ (200 Unit Electricity) ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು. ಇದು ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದ್ದಾರೆ.

ಹೌದು, ಚುನಾವಣೆಯಲ್ಲಿ ಗೆದ್ದು, ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ವಿಧಾನಸಭಾ ಕ್ಷೇತ್ರವಾದ ವರುಣಾಕ್ಕೆ(Varuna) ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯನವರು(Siddaramaiah) ಎಲ್ಲರೂ 200 ಯೂನಿಟ್ ಫ್ರೀ ಕೊಡಿ ಅಂತಿದ್ದಾರೆ. ಯಾರು 190, 180, 70 ಯೂನಿಟ್ ಬಳಸುತ್ತಾರೋ ಅವೆಲ್ಲರಿಗೂ ಉಚಿತ ಇದೆ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರ ಜೊತೆಗೆ ಶೇ.10 ಹೆಚ್ಚುವರಿ ಫ್ರೀ ಇರುತ್ತೆ. ಒಂದು ವರ್ಷದಲ್ಲಿ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು? ಇದು ದುರುಪಯೋಗ ಅಲ್ವಾ ಎಂದು ಪ್ರಶ್ನಿಸಿದರು.

ಅಲ್ಲದೆ ನಮ್ಮ ಸರ್ಕಾರ ಜಾರಿಗೆ ತಂದಿರೋ ಗ್ಯಾರಂಟಿ (Congress Guarantees) ಯೋಜನೆಗಳಿಗೆ ವಾರ್ಷಿಕವಾಗಿ ಬರೋಬ್ಬರಿ 59 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಉಳಿದ ಅವಧಿಗೆ ಬೇಕಾಗಿರುವ ಹಣ 41 ಸಾವಿರ ಕೋಟಿ ರೂ. ಎಂದರು. ಇದರೊಂದಿಗೆ ಪ್ರಧಾನಿ ಮೋದಿ (Narendra Modi) ಅವರನ್ನು ಮಾತಿನಲ್ಲೇ ತಿವಿದ ಸಿದ್ಧು, ಮೋದಿಯವರು ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ, ರಾಜ್ಯ ದಿವಾಳಿಯಾಗುತ್ತೆ ಅಂತಾ ಹೇಳಿದ್ರು. ಇದರ ಬದಲಾಗಿ ಅವರು ನಮ್ಮೊಂದಿಗೆ ಕೈ ಜೋಡಿಸುವ ಮಾತನ್ನಾಡಬೇಕಿತ್ತು ಎಂದು ಹೇಳಿದರು.

ಇದನ್ನೂ ಓದಿ: Sakshi agarwal: ‘ಬರೀ ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್ ನಟಿಯರಿಗಿಲ್ಲ ಬಿಡಿ’ ಎಂದ ನೆಟ್ಟಿಗ!! ಮುಟ್ಟಿ ನೋಡ್ಕೊಳುವಂತೆ ರಿಪ್ಲೇ ಕೊಟ್ಟ ನಟಿ ಸಾಕ್ಷಿ!!