ನೆಲ್ಯಾಡಿ: ಬೆಂಗಳೂರ್ ಮಂಗಳೂರು ಹೆದ್ದಾರಿಯಲ್ಲಿ ಕಾರು ಹೊಳೆಗೆ ಬಿದ್ದು ಓರ್ವ ಸಾವು, ಇನ್ನೋರ್ವ ಗಂಭೀರ
Nelyadi car drawn and one death
ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮುಖ್ಯ ರಸ್ತೆಯಿಂದ ಹರಿದು ನದಿಗೆ ಬಿದ್ದ ಘಟನೆ ನಡೆದಿದೆ.
ಕಾರೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು. ಅಲ್ಲಿ ಅಡ್ಡಹೊಳೆ ಎಂಬಲ್ಲಿಗೆ ಬರುವಾಗ ರಸ್ತೆ ಬದಿಯ ಹೊಳೆಗೆ ಉರುಳಿ ಬಿದ್ದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.
ಮಾರುತಿ ಎರ್ಟಿಗಾ ಕಾರು ಅದಾಗಿದ್ದು, ಕಾರಿನಲ್ಲಿದ್ದ ಹೊಸೂರು ನಿವಾಸಿ ಮೃತಪಟ್ಟಿದ್ದು, ಇನ್ನೋರ್ವ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ದಾಖಲಿಸಲಾಗಿದೆ. ಕಾರು ನೀರಿನಲ್ಲಿ ಮುಳುಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕಳೆದ ವರ್ಷ ಸುಳ್ಯ ಸಮೀಪ ಮಳೆಯ ಸಮೀಪ ವೇಗವಾಗಿ ಬರುತ್ತಿದ್ದ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ತುಂಬಿ ಹರಿಯುತ್ತಿದ್ದ ಒಳಗೆ ಮಗುಚಿ ಬಿದ್ದಿತ್ತು. ಆ ಘಟನೆಯಲ್ಲಿ ಕಾರಿನ ಜತೆಗೆ ಇಬ್ಬರು ಯುವಕರು ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದರು. ಕೊನೆಗೆ ಎರಡು ದಿನಗಳ ನಿರಂತರ ಹುಡುಕಾಟದ ನಂತರ ಅವರಿಬ್ಬರ ಹೆಣ ನದಿಯ ಇನ್ನೊಂದು ಕಡೆಯಲ್ಲಿ ಪತ್ತೆಯಾಗಿತ್ತು. ಒಟ್ಟಾರೆ ಎಲ್ಲಾ ಘಟನಾವಳಿಗಳು ಅಂದು ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿತ್ತು.