Bengaluru: ಖರ್ಚಿಗೆ ಹಣ ಬೇಕೆಂದು ಮನೆಮೂಲೆಯಲ್ಲಿದ್ದ ಪೇಪರ್ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆಯೇ FIR!!!
Bengaluru crime news fake scale scam in Bengaluru FIR on Gujuri shop in Bengaluru due to fake scale scam
Bengaluru: ಖರ್ಚಿಗೆ ಹಣ ಬೇಕೆಂದು ಮನೆಯಲ್ಲಿದ್ದ ನ್ಯೂಸ್ ಪೇಪರ್ (News Paper) ಮಾರಲು ಹೋದ ಯುವಕನೋರ್ವ ಈಗ ಆ ಗುಜರಿ ಅಂಗಡಿ ಮೇಲೆನೇ ಎಫ್ಐಆರ್ ದಾಖಲು ಮಾಡಿದ ಘಟನೆಯೊಂದು ನಡೆದಿದೆ. ನಗರದಲ್ಲಿ ನಡೆಯುವ ಫೇಕ್ ಸ್ಕೇಲ್ ದಂಧೆ (Fake Scale Scam)ಯಿಂದ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಹೋಗಿದ್ದೇ ಈ ಎಲ್ಲಾ ಘಟನೆಗೆ ಕಾರಣ. ಈ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ.
ಜೀವನ್ ಎಂಬ ಯುವಕ ತನ್ನ ಮನೆಯಲ್ಲಿದ್ದ ನ್ಯೂಸ್ ಪೇಪರ್ನ್ನು ನಾಗೇಂದ್ರ ಬ್ಲಾಕ್ ಬಳಿ ಇರುವ ಮಾರಮ್ಮ ಪೇಪರ್ ಮಾರ್ಟ್ಗೆ ತೆಗೆದುಕೊಂಡು ಹೋಗಿದ್ದ. ಸುಮಾರು ಎಂಟು ಕೆಜಿ ಪೇಪರ್ ಇತ್ತು. ಆದರೆ ಪೇಪರ್ ಸ್ಕೇಲ್ನಲ್ಲಿ ಕೇವಲ 6.900ಕೆಜಿ ಎಂದು ತೋರಿಸಿದೆ. ಆದರೆ ಅದೇ ಬಂಡಲನ್ನು ಮನೆಯ ಬಳಿಯ ಅಂಗಡಿಯಲ್ಲಿ ತೂಕ ಮಾಡಿದಾಗ, 8.700ಕೆಜಿ ಎಂದು ತೋರಿಸಿದೆ. ಇಲ್ಲಿ ಏನೋ ಮೋಸ ಆಗಿದೆ ಎಂದು ಯುವಕನಿಗೆ ತಿಳಿಯಿತು. ನಂತರ ಮತ್ತೊಮ್ಮೆ ಮಾರಮ್ಮ ಪೇಪರ್ ಮಾರ್ಟ್ಗೆ ಹೋದ ಜೀವನ್ ಮತ್ತೊಮ್ಮೆ ತೂಕ ಮಾಡಿಸಿದಾಗ, ಅಲ್ಲಿ ಮತ್ತೆ ಕಮ್ಮಿ ತೂಕ ತೋರಿಸಿತು. ಇದನ್ನು ಪ್ರಶ್ನಿಸಿದ್ದಕ್ಕೆ, ನಿನಗೆ ಇಷ್ಟವಿದ್ದರೆ ಮಾರು, ಈ ವಿಚಾರ ಎಲ್ಲೂ ಹೇಳಬೇಡ, ಜೊತೆಗೆ ಯುವಕನಿಗೆ ಬೆದರಿಕೆ ಕೂಡಾ ಹಾಕಿದ್ದು, ಈ ಕಾರಣದಿಂದ ಯುವಕ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಸಂಬಂಧ Legal Metrology Act ನಡಿ ಗಿರಿನಗರ ಪೊಲೀಸರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: School Holiday: ಹೆಚ್ಚಿದ ಬಿಸಿಲಿನ ತಾಪಮಾನ, ಈ ರಾಜ್ಯದ ಮಕ್ಕಳಿಗೆ ಇಂದು ಶಾಲಾ ರಜೆ ಘೋಷಣೆ!