ʻನಿಧಿಸಿಕ್ಕಿದೆʼ ಎಂದು ನಂಬಿಸಿ ದೋಖಾ ..!ಉಡುಪಿ ಮೂಲಕ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ

Udupi :ನಮ್ಮ ಮನೆಯ ಅಡಿಪಾಯ ತೆಗೆಯುವಾಗ ʻನಿಧಿಸಿಕ್ಕಿದೆʼ ಎಂದು ನಂಬಿಸಿ ಉಡುಪಿ (Udupi)ಮೂಲದ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಿಧ ರೀತಿಯ ವಂಚನೆ ನಡೆಯುತ್ತಿದ್ದು, ಅದರಲ್ಲೂ ದಾವಣಗೆರೆಯಲ್ಲಿ ನಕಲಿ ಚಿನ್ನದ ದೋಖಾ ಜಾಲಾ ಪತ್ತೆಯಾಗಿದೆ. ಇದೇ ರೀತಿಯ ಪ್ರಕರಣವೊಂದು ಮತ್ತೊಂದು ಬೆಳಕಿಗೆ ಬಂದಿದ್ದು, ಪೊಲೀಸರು ಜನರನ್ನು ಮೋಸದ ಬಲೆಗೆ ಬೀಳದಂತೆ ಎಚ್ಚರ ವಹಿಸಿದ್ರೂ ನಿರ್ಲಕ್ಷ್ಯವಹಿಸುವುದು ಮೇಲ್ನೋಟಕ್ಕೆ ತಿಳಿಯಲಾಗಿದೆ.

ಮನೆಯ ಪಾಯ ತೆಗೆಯುವಾಗ ದೊಡ್ಡ ನಿಕ್ಷೇಪವೊಂದು ಪತ್ತೆಯಾಗಿದೆ. ಅದರಲ್ಲಿ ಸಿಕ್ಕಿದ ಚಿನ್ನದ ನಾಣ್ಯಗಳು ಸಿಕ್ಕಿದೆ ಅದನ್ನು ನಿಮಗೆ ಕಡಿಮೆ ದರದಲ್ಲಿ ನೀಡುತ್ತೇನೆ ಎಂದು ಉಡುಪಿ ಜಿಲ್ಲೆಯ ಪೇಡೂರು ‌ಮೂಲದ ಸಂತೋಷ ಶೆಟ್ಟಿ ಎಂಬುವರಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ವ್ಯಕ್ತಿ ನೋರ್ವ ನಂಬಿಸಿದ್ದಾನೆ. ಇದನ್ನು ನಂಬಿದ್ದ ಉಡುಪಿ ಮೂಲಕ ಸಂತೋಷ ಶೆಟ್ಟಿಯವರಿಗೆ ಪುಸಲಾಯಿಸಿ 5.20 ಲಕ್ಷ ಹಣ ಪಡೆದು ಖದೀಮರು ವಂಚನೆ ಮಾಡಿದ್ದಾರೆ. ಅಲ್ಲದೇ 20 ಲಕ್ಷ ಇದ್ರೆ ಹೇಳಿ ಕೆಜಿ ಗಂಟಲೇ ಚಿನ್ನದ ನಾಣ್ಯ ಕೊಡುವೆ ಎಂದು ನಂಬಿಸಿ ವಂಚನೆ ಮಾಡಿದ್ದಾರೆ. ಬಳಿಕ ಠಾಣೆಗೆ ದೂರು ನೀಡಿದಾಗ ವಂಚನೆ ಮಾಡಿರುವುದಾಗಿ ಘಟನೆ ಬೆಳಕಿಗೆ ಬಂದಿದೆ. ಈ ರೀತಿಯ ಪ್ರಕರಣ ಗಳು ದಾವಣಗೆರೆ ಭಾಗದಲ್ಲಿ ಹೆಚ್ಚಾಗಿದ್ದು, ಈ ಹಿಂದೆಯೂ ಆನೇಕ ಪ್ರಕರಣಗಳು ದಾಖಲಾಗಿದೆ. ಇದೇ ರೀತಿಯ ಪ್ರಕರಣಗಳು ತಮಿಳುನಾಡಿನಲ್ಲಿ 34, ಕೇರಳದಲ್ಲಿ 18 ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು ತಿಳಿದು ಬಂದಿದೆ.

ಇದನ್ನೂ ಓದಿ :ʻಗೃಹಲಕ್ಷ್ಮೀ ಯೋಜನೆʼಗೆ ಲಕ್ಷ್ಮಿ ಹೆಬ್ಬಾಳ್ಕರ್ ತವರೂರು ಬೆಳಗಾವಿಯಲ್ಲಿ ಚಾಲನೆ ..!

 

Leave A Reply

Your email address will not be published.