Home Latest Health Updates Kannada Cloth Cleaning Tips: ಬಟ್ಟೆಯ ಮೇಲಿನ ಚಹಾದ ಕಠಿಣ ಕಲೆಗಳನ್ನು ಅಳಿಸಿ ಹಾಕೋದು ಸುಲಭ, ಇಲ್ಲಿದೆ...

Cloth Cleaning Tips: ಬಟ್ಟೆಯ ಮೇಲಿನ ಚಹಾದ ಕಠಿಣ ಕಲೆಗಳನ್ನು ಅಳಿಸಿ ಹಾಕೋದು ಸುಲಭ, ಇಲ್ಲಿದೆ ಸಿಂಪಲ್ ಟ್ರಿಕ್ಸ್ !

Cloth Cleaning Tips
Image Source: news 18

Hindu neighbor gifts plot of land

Hindu neighbour gifts land to Muslim journalist

Cloth cleaning tips : ಬಟ್ಟೆಯಲ್ಲಿ ಕಲೆ ಆಗೋದು ಸಾಮಾನ್ಯ. ತಿನ್ನುವಾಗ ಅಥವಾ ಕೆಲಸ ಮಾಡುವಾಗ ಬಟ್ಟೆಯಲ್ಲಿ ಕಲೆ ಆಗುತ್ತದೆ. ಈ ಕಲೆ ಬಟ್ಟೆ ಒಗೆದಾಗ ಮಾಯವಾಗುತ್ತದೆ. ಆದರೆ ಬಟ್ಟೆಯ ಮೇಲೆ ಚಹಾ ಚೆಲ್ಲಿದರೆ ಆ ಕಲೆಯನ್ನು ತೆಗೆಯೋದು ಬಹಳ ಕಷ್ಟ. ಎಷ್ಟು ಒಗೆದರೂ ಚಹಾದ ಕಲೆ ಮಾಸೋದಿಲ್ವಾ? ಹಾಗಾದ್ರೆ ಈ ಕಠಿಣ ಕಲೆಗಳನ್ನು ಅಳಿಸಿ ಹಾಕೋದಕ್ಕೆ ಇಲ್ಲಿದೆ ಸಿಂಪಲ್ ಟ್ರಿಕ್ಸ್ ! (Simple Tricks To Remove Tea Stain).

ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ಬಟ್ಟೆಗಳ ಮೇಲಾಗುವ ಹಠಮಾರಿ ಕಲೆಗಳನ್ನು ತೆಗೆದುಹಾಕಬಹುದು (Cloth cleaning tips). ಹೌದು, ಈ ವಸ್ತುಗಳನ್ನು ಬಳಸಿದರೆ ಬಟ್ಟೆಯ ಮೇಲಿನ ಕಲೆಗಳನ್ನು ಸುಲಭವಾಗಿ ತೊಡೆದು ಹಾಕಬಹುದು.

ನಿಂಬೆರಸ ಮತ್ತು ಉಪ್ಪು: ಬಟ್ಟೆಯ ಮೇಲಿನ ಯಾವುದೇ ರೀತಿಯ ಕಲೆಗಳನ್ನು ತೆಗೆದುಹಾಕಲು ನಿಂಬೆ ರಸ ತುಂಬಾ ಪ್ರಯೋಜನಕಾರಿ. ಕಲೆ ಇರುವ ಜಾಗಕ್ಕೆ ನಿಂಬೆರಸ ಹಾಕಿ. ನಂತರ ಅದನ್ನು ಉಪ್ಪು ಮತ್ತು ಸೋಪಿನಿಂದ ತೊಳೆಯಿರಿ. ಇದರಿಂದ ಕಲೆ ಹೋಗುತ್ತದೆ.
ಕಲೆಯಾದ ಜಾಗದಲ್ಲಿ ನಿಂಬೆಯನ್ನು ಚೆನ್ನಾಗಿ ಉಜ್ಜುವುದರಿಂದ ಕೂಡ ಕಲೆಗಳು ಮಾಯವಾಗುತ್ತದೆ. ಅಲ್ಲದೆ, ಬಟ್ಟೆ ಒಗೆಯುವಾಗ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕಲೆಯಾದ ಜಾಗಕ್ಕೆ ನೀರು ಹಾಕಿ ಉಜ್ಜುವುದರಿಂದಲೂ ಕಲೆ ನಿವಾರಣೆಯಾಗುತ್ತದೆ.

ವಿನೆಗರ್: ಅರ್ಧ ಕಪ್ ನೀರು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಕಪ್ ವಿನೆಗರ್ ಮಿಶ್ರಣ ಮಾಡಿ. ಇದನ್ನು ಒಂದು ಸ್ಪೇಯರ್‌ ಬಾಟಲಿಗೆ ಹಾಕಿ. ಬಳಿಕ ವಿನೆಗರ್‌ ನೀರನ್ನು ಟೀ ಅಥವಾ ಚಹಾ ಕಲೆ ಇರುವ ಬಟ್ಟೆಯ ಮೇಲೆ ಸಿಂಪಡಿಸಿ. ಏಳು ನಿಮಿಷದ ನಂತರ ಮತ್ತೆ ಸಿಂಪಡಿಸಿ ಮತ್ತು ಬಟ್ಟೆಯನ್ನು ನೀರಿನಲ್ಲಿ ಅದ್ದಿ, ನೀರಿನಿಂದ ತೊಳೆಯಿರಿ. ಇದು ಬಟ್ಟೆಗಳ ಮೇಲಿನ ಚಹಾ ಕಲೆಯನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತೆ (Clean) ಮತ್ತು ಒಂದೂ ಕಲೆಯು ಇರೋದಿಲ್ಲ.

ಅಡಿಗೆ ಸೋಡಾ: ಅಡುಗೆ ಸೋಡಾವನ್ನು ನೈಸರ್ಗಿಕ ಕ್ಲೆನ್ಸರ್ ಮತ್ತು ಡಿಯೋಡರೈಸರ್ ಎಂದು ಕರೆಯಲಾಗುತ್ತದೆ. ಸಾಮಾನ್ಯ ಡಿಟರ್ಜೆಂಟ್‌ನಲ್ಲಿ ಅಡುಗೆ ಸೋಡಾವನ್ನು ಸೇರಿಸಿದರೆ ಅದು ಬಟ್ಟೆಗಳಿಗೆ ಹೊಳಪು ತರುತ್ತದೆ ಮತ್ತು ಅದನ್ನು ಮೃದುಗೊಳಿಸುತ್ತದೆ.
ಒಂದು ಬಕೆಟ್ ನಲ್ಲಿ ನೀರು ತೆಗೆದುಕೊಳ್ಳಿ. ಅದಕ್ಕೆ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ಕಲೆಯಾದ ಬಟ್ಟೆಯನ್ನು ಆ ನೀರಿನಲ್ಲಿ ನೆನೆಸಿಡಿ. ಕೆಲ ಸಮಯದ ನಂತರ ಬಟ್ಟೆ ಒಗೆಯಿರಿ. ಕಲೆ ಮಾಯವಾಗುತ್ತದೆ.

ಬಿಸಿನೀರು: ಬಿಸಿನೀರು (hot water) ಆರೋಗ್ಯಕ್ಕೆ ಮಾತ್ರ ಒಳ್ಳೆಯದಲ್ಲ. ಬಟ್ಟೆಯ ಮೇಲಿನ ಚಹಾದ ಕಲೆ ತೆಗೆಯಲು ಕೂಡ ಪ್ರಯೋಜನಕಾರಿ. ಬಿಸಿನೀರು ಪರಿಣಾಮಕಾರಿ ಶುಚಿಗೊಳಿಸುವ ಗುಣಗಳನ್ನು ಹೊಂದಿದೆ. ಇದು ಅದರ ಗುಣಮಟ್ಟಕ್ಕೆ ಅಡ್ಡಿಯಾಗದಂತೆ ಬಟ್ಟೆಯಿಂದ ಕೆಲವು ಕಲೆಗಳನ್ನು ತೆಗೆದುಹಾಕಬಹುದು. ಕಲೆಯಾದ ಜಾಗದ ಮೇಲೆ ಸ್ವಲ್ಪ ಬಿಸಿ ನೀರು ಹಾಕಿ. ನಂತರ ಸ್ವಲ್ಪ ಡಿರ್ಟಜೆಂಟ್‌ ಸೇರಿಸಿ ಉಜ್ಜಿರಿ. ಕಲೆ ಮಾಸಿದ ನಂತರ ತಣ್ಣಿರಿನಿಂದ ತೊಳೆಯಿರಿ.

ಇದನ್ನೂ ಓದಿ: Asha negi: ಸಿನಿ ರಂಗದಲ್ಲಿ ಫೇಮಸ್ ಆಗ್ಬೇಕಾದ್ರೆ ಅವರೊಂದಿಗೆ ಮಲಗಬೇಕು!! ಮನದ ತೋವನ್ನು ತೆರೆದಿಟ್ಟ ನಟಿ ಆಶಾ ನೇಗಿ