Home Breaking Entertainment News Kannada Bhoomika Vasishtha : ಬಟ್ಟೆಬಿಚ್ಚಿ, ಆ ಒಂದು ಕೆಲಸದಿಂದ ಸಾಲ ತೀರಿಸಲು ಮುಂದಾಗಿದ್ದೆ!! ಆದರೆ ಅಷ್ಟರಲ್ಲಿ...

Bhoomika Vasishtha : ಬಟ್ಟೆಬಿಚ್ಚಿ, ಆ ಒಂದು ಕೆಲಸದಿಂದ ಸಾಲ ತೀರಿಸಲು ಮುಂದಾಗಿದ್ದೆ!! ಆದರೆ ಅಷ್ಟರಲ್ಲಿ ವಿಡಿಯೋ ಲೀಕ್ ಆಗಿ ಡಿಪ್ರೆಷನ್ ಹೋದೆ- ಭೂಮಿಕಾ ವಸಿಷ್ಟ್!

Bhoomika Vasishtha
Image source- Filmibeat kannada

Hindu neighbor gifts plot of land

Hindu neighbour gifts land to Muslim journalist

Bhoomika Vasishtha: ಸಿನಿಮಾ ಜಗತ್ತು, ಕಿರುತೆರೆ ಲೋಕ ಎಂಬುದು ಬಣ್ಣದ ಲೋಕವಿದ್ದಂತೆ. ಇಲ್ಲಿ ರಾತ್ರಿ ಬೆಳಗಾಗೋದ್ರೊಳಗೆ ಎಲ್ಲವನ್ನೂ ಗಳಿಸಿ ಸೂಪರ್ ಹಿಟ್ ಆಗಬಹುದು, ಇಲ್ಲ ಎಲ್ಲವನ್ನೂ ಕಳೆದುಕೊಂಡು ಬೀದಿಗೂ ಬರಬಹುದು. ಅದೃಷ್ಟ ಹೇಗಿರುತ್ತದೋ ಹಾಗೆ. ಇಲ್ಲಿ ಹಲವರಿಗೆ ಅಭೂತಪೂರ್ವ ಅನುಭವಗಳಾದರೆ ಕೆಲವರಿಗೆ ಕೆಲವು ಭಯಾನಕವಾದ ಕಹಿ ಅನುಭವಗಳೂ ಆಗುವುದುಂಟು. ಆಗಿದೆ. ಇತ್ತೀಚೆಗಂತೂ ಹಲವು ನಟಿಯರು ಈ ಬಗ್ಗೆ ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ಲೋಕದಲ್ಲಿ ಡ್ಯಾನ್ಸ್ ಶೋಗಳ ಮೂಲಕ ಜನಪ್ರಿಯಳಾದ ಭೂಮಿಕಾ ವಸಿಷ್ಟ್(Bhoomika Vasishtha) ತನ್ನ ಕಹಿ ಘಟನೆಯೊಂದನ್ನು ತೆರೆದಿಟ್ಟಿದ್ದಾರೆ.

ಹೌದು, ಕಳೆದ ಶನಿವಾರ(last Saturday)ಎಂಟಿವಿ(MTV) ರೋಡೀಸ್‌ನ ಹೊಸ ಸೀಸನ್ ಪ್ರಾರಂಭವಾಗಿದೆ. ಸ್ಪ್ಲಿಟ್ಸ್(Splits villa) ವಿಲ್ಲಾದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಭೂಮಿಕಾ ವಶಿಷ್ಟ್ ಕೂಡ ಈ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಡ್ಯಾನ್ಸ್ ಶೋಗಳ(Dance show) ಮೂಲಕ ಜನಪ್ರಿಯಳಾದ ನಂತರ ಆಕೆ ತನ್ನ ಗ್ಲಾಮರ್(Glamar) ಹಾಗೂ ಇಮೇಜ್ ಉಳಿಸಿಕೊಳ್ಳಲು ಹಣದ ಅಗತ್ಯವಿತ್ತು. ಹಣಕ್ಕಾಗಿ ಏನೆಲ್ಲಾ ಮಾಡಿದೆ. ಅದರಿಂದ ಎಡವಟ್ಟು ಆಗಿ ಮುಂದೆ ಏನಾಯಿತು. ಇದರಿಂದ ತಮ್ಮ ಜೀವನದಲ್ಲಿ ಏನೆಲ್ಲಾ ನಡೀತು ಎಂದು ಹೇಳಿಕೊಂಡಿದ್ದಾರೆ.

“ಸ್ಪ್ಲಿಟ್ಸ್ ವಿಲ್ಲಾ ಶೋ ನಂತರ ತನ್ನ ಗ್ಲಾಮರ್, ಇಮೇಜ್ ಉಳಿಸಿಕೊಳ್ಳಲು ಬಹಳ ಸಾಲ ಮಾಡಿದ್ದೆ. ಒಮ್ಮೆ ಆ ಸಾಲ ಹೆಚ್ಚಾಯಿತು. ನನ್ನ ಸಂಪಾದನೆಯಿಂದ ಆ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಅಂತಹ ಸಮಯದಲ್ಲಿ ಒಂದು ತಪ್ಪು ಮಾಡಿದೆ. ಅದೇನೆಂದರೆ ನಾನು ಬಟ್ಟೆ ಬಿಚ್ಚುವ ವಿಡಿಯೋವನ್ನು ಆಪ್‌ ವೊಂದರಲ್ಲಿ ಪೋಸ್ಟ್ ಮಾಡಿ ಹಣ ಗಳಿಸಲು ಮುಂದಾಗಿದ್ದೆ. ಆದರೆ ಆ ವಿಡಿಯೋ ಆನ್‌ಲೈನ್‌ನಲ್ಲಿ ಲೀಕ್ ಆಗಿ ಎಡವಟ್ಟಾಯಿತು. ಈ ಕಾರಣಕ್ಕೆ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದೆ” ಎಂದು ಭೂಮಿಕಾ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.

ಭೂಮಿಕಾ ವಶಿಷ್ಟ್ ಮಾತು ಕೇಳಿ ತೀರ್ಪುಗಾರರು, ಉಳಿದ ಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದರು. ತೀರ್ಪುಗಾರ್ತಿ ರಿಯಾ ಚಕ್ರವರ್ತಿ ಕೂಡಲೇ ಭೂಮಿಕಾ ಅವರಿಗೆ ಸಾಂತ್ವನ ಹೇಳಿದರು. ಸಹ ಸ್ಪರ್ಧಿಗಳು ಇದನ್ನೆಲ್ಲಾ ಮೀರಿ ಮುಂದೆ ನಡೆಯಬೇಕು ಎಂದು ಆಕೆಗೆ ಧೈರ್ಯ ತುಂಬಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಅಂದಹಾಗೆ ಸಾಮಾನ್ಯವಾಗಿ ರಿಯಾಲಿಟಿ ಶೋಗಳು ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆರಂಭದಲ್ಲಿ ಮಾತನಾಡುತ್ತಾರೆ. ಅಪ್ಪ, ಅಮ್ಮ ಹೀಗೆ ಇಡೀ ಕುಟುಂಬದ ಸದಸ್ಯರು, ಕುಟುಂಬದ ಸ್ಥಿತಿಗತಿ ಹೇಗಿದೆ ಅನ್ನೋದರ ಬಗ್ಗೆ ವಿವರಿಸುತ್ತಾರೆ. ಇತ್ತೀಚೆಗೆ ಕೆಲವರು ತಮ್ಮ ಗರ್ಲ್ ಫ್ರೆಂಡ್, ಬಾಯ್‌ಫ್ರೆಂಡ್‌ಗಳ ಬಗ್ಗೆ ಕೂಡ ಮಾತನಾಡುತ್ತಾರೆ. ಅಲ್ಲಿಗೆ ನಿಂತರೆ ಪರವಾಗಿಲ್ಲ. ಇದೀಗ ಕೆಲವರು ಮತ್ತಷ್ಟು ಮುಂದೆ ಹೋಗಿ ಸಾರ್ವಜನಿಕವಾಗಿ ಹೇಳಬಾರದ ವಿಚಾರಗಳನ್ನು ಹೇಳುತ್ತಿರೋದು ವಿಪರ್ಯಾಸ. ನಾವು ಸಿಕ್ಕಾಪಟ್ಟೆ ಬೋಲ್ಡ್(Bold) ಎಂದು ತೋರಿಸಿಕೊಳ್ಳುವುದಕ್ಕೋ ಏನೋ ಜೀವನದ ರಹಸ್ಯ ಸಂಗತಿಗಳನ್ನು ಬಿಚ್ಚಿಡುತ್ತಿದ್ದಾರೆ. ಇದೀಗ ಭೂಮಿಕಾ ವಶಿಷ್ಟ್ ಅಂತದ್ದೇ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Dharmastala Sowjanya murder case: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ: ಜೂನ್ 16ರಂದು CBI ಕೋರ್ಟಿನಿಂದ ತೀರ್ಪು!!