Home Karnataka State Politics Updates Kota Srinivas poojary: ಸೂಲಿಬೆಲೆಯರನ್ನು ಜೈಲಿಗಟ್ಟುತ್ತೇವೆ ಎಂದ ಎಂ ಬಿ ಪಾಟೀಲ್ ಗೆ ಕೋಟ ಶ್ರೀನಿವಾಸ...

Kota Srinivas poojary: ಸೂಲಿಬೆಲೆಯರನ್ನು ಜೈಲಿಗಟ್ಟುತ್ತೇವೆ ಎಂದ ಎಂ ಬಿ ಪಾಟೀಲ್ ಗೆ ಕೋಟ ಶ್ರೀನಿವಾಸ ಪೂಜಾರಿ ಕೌಂಟರ್!! ಮಾಜಿ ಸಚಿವರು ಹೇಳಿದ್ದೇನು?

Kota shreenivas poojary
Image source- The hindu, The hans India

Hindu neighbor gifts plot of land

Hindu neighbour gifts land to Muslim journalist

Kota Srinivas poojary: ಕೆಲವು ದಿನಗಳ ಹಿಂದಷ್ಟೇ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (Minister MB Patil) ಅವರು “ಗಲಾಟೆ ಮಾಡಿದ್ರೆ ಜೈಲು ಪಾಲಾಗ್ತೀರಾ ಹುಷಾರ್” ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೀಗ ಎಂ ಬಿ ಪಾಟೀಲ್ ರಿಗೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ(Kota Srinivas poojary) ಅವರು ತಿರುಗೇಟು ನೀಡಿದ್ದಾರೆ.

ಹೌದು, ಮಾಧ್ಯಮಗಳ ಜೊತೆ ಮಾತನಾಡಿದ ಎಂಬಿ ಪಾಟೀಲ್, ರಾಜ್ಯದಲ್ಲಿ ಹಿಟ್ಲರ್ ಸರಕಾರ ಇದೆ ಎಂದಿದ್ದ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ತಿರುಗೇಟು ನೀಡಿದ್ದರು. ಸೂಲಿಬೆಲೆಯವರೇ ಈ ಹಿಂದೆ ಹಿಜಾಬ್ (Hijab), ಹಲಾಲ್ (Halal) ಎಂದು ಗಲಾಟೆ ಮಾಡಿದ್ದೀರಿ. ಇದಕ್ಕೆಲ್ಲ ಬ್ರೇಕ್ ಹಾಕುತ್ತೇವೆ. ಇನ್ನು ಮುಂದೆ ಅದೆಲ್ಲ ನಡೆಯಲ್ಲ. ಏನಾದರೂ ಗಲಾಟೆ ಮಾಡಿದರೆ, ಹಿಂದಿನಂತೆ ನಾಟ ಆಡಿದ್ರೆ ಜೈಲು ಕಂಬಿ ಏಣಿಸ್ತೀರಾ ಹುಷಾರ್ ಎಂದು ಹೇಳಿದ್ದರು.

ಇದೀಗ, ಸೂಲಿಬೆಲೆಯರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿರುವ ಎಂ ಬಿ ಪಾಟೀಲ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರೋ ಕೋಟಾ ಶ್ರೀನಿವಾಸ ಪೂಜಾರಿಯವರು ಸಚಿವರ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಸೂಲಿಬೆಲೆರವರು ರಾಷ್ಟ್ರಭಕ್ತರ ಸಾಲಿಗೆ ಸೇರುತ್ತಾರೆ ಹೊರತು ಭಯೋತ್ಪಾದಕರ ಸಾಲಿಗೆ ಸೇರುವುದಿಲ್ಲ ಎಂದಿದ್ದಾರೆ.

ಅಲ್ಲದೆ ಜನಸಾಮಾನ್ಯರಲ್ಲಿ ರಾಷ್ಟ್ರ ಭಕ್ತಿ ಹೆಚ್ಟಿಸುತ್ತಿರುವ, ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತಿರುವ ಸೂಲಿಬೆಲೆಯವರುನ್ನು ಜೈಲಿಗೆ ಹಾಕುತ್ತೇವೆ ಎಂದು ಆಡಳಿತ ಪಕ್ಷದವರು ಆಡುವ ಮಾತುಗಳನ್ನು ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತವೆ. ಇದಕ್ಕಾಗಿ ಬಿಜೆಪಿ ಉಗ್ರ ಹೋರಾಟ ನಡೆಸುತ್ತದೆ ಎಂದು ಹೇಳೀದ್ದಾರೆ.

ಇದನ್ನೂ ಓದಿ: Odisha Train Accident: ಅಪಘಾತ ಸಂತ್ರಸ್ತ ಕುಟುಂಬಕ್ಕೆ 6 ತಿಂಗಳು ಉಚಿತ ಪಡಿತರದ ಜೊತೆಗೆ ಉದ್ಯೋಗ; ಹಲವು ಪರಿಹಾರ ಘೋಷಣೆ ಮಾಡಿದ ರಿಲಯನ್ಸ್‌