Home Breaking Entertainment News Kannada Nitin Gopi is no more: ವಿಷ್ಣುವರ್ಧನ್ ಜತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿದ್ದ ನಿತಿನ್‌...

Nitin Gopi is no more: ವಿಷ್ಣುವರ್ಧನ್ ಜತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿದ್ದ ನಿತಿನ್‌ ಗೋಪಿ ನಿಧನ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ನಟ

Nitin Gopi
Image source- TV9 kannada

Hindu neighbor gifts plot of land

Hindu neighbour gifts land to Muslim journalist

Nitin Gopi: 1996 ರಲ್ಲಿ ತೆರೆ ಕಂಡಿದ್ದ ಹಲೋ ಡ್ಯಾಡಿ ಚಿತ್ರದಲ್ಲಿ ನಿತಿನ್‌ ಗೋಪಿ ಡಾ. ವಿಷ್ಣುವರ್ಧನ್‌(Visnuvardhan) ಅವರ ಪುತ್ರನಾಗಿ ನಟಿಸಿದ್ದ ನಿತಿನ್‌ ಗೋಪಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೌದು, ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದ ನಿತಿನ್​ ಗೋಪಿ (Nitin Gopi) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ (heart attack) ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯಿಸುವ ಮೂಲಕ ನಿತಿನ್ ಗೋಪಿ ಅವರು ಖ್ಯಾತಿ ಪಡೆದಿದ್ದರು. ಶುಕ್ರವಾರ (ಜೂನ್​ 2) ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎಂಬುದು ನೋವಿನ ಸಂಗತಿ.

ನಿತಿನ್‌ ಬೆಂಗಳೂರಿನ ಇಟ್ಟಮಡುವಿನ ಅಪಾರ್ಟ್‌ಮೆಂಟ್‌ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದರು. ಇಂದು( ಶುಕ್ರವಾರ) ಬೆಳಗಿನ ಜಾವ 4 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ನೆರೆಹೊರೆಯವರ ಸಹಾಯದಿಂದ ಹೆತ್ತವರು ನಿತಿನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ನಿತಿನ್‌ ಕೊನೆಯುಸಿರೆಳೆದಿದ್ದಾರೆ. ನಿತಿನ್‌ ತಂದೆ, ಗೋಪಿ ಖ್ಯಾತ ಕೊಳಲು ವಾದಕರು. ನಿತಿನ್‌ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ ಹಾಗೂ ಕಿರುತೆರೆ ಆಘಾತ ವ್ಯಕ್ತಪಡಿಸಿದೆ.

ನಿತಿನ್ ಗೋಪಿ(Nithin gopi) ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ. ‘ಕೆರಳಿದ ಕೇಸರಿ’, ‘ಮುತ್ತಿನಂಥ ಹೆಂಡತಿ’, ‘ನಿಶ್ಯಬ್ಧ’, ‘ಚಿರಬಾಂಧವ್ಯ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್​ ಗೋಪಿ ಅವರು ನಟಿಸಿದ್ದರು. ವಿಷ್ಣುವರ್ಧನ್ ಜೊತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ಅವರು ಮಾಡಿದ್ದ ಪಾತ್ರ ಗಮನ ಸೆಳೆದಿತ್ತು.

ಇದನ್ನೂ ಓದಿ: Uttarpradesh: 42 ವರ್ಷಗಳ ಹಿಂದಿನ ಪ್ರಕರಣಕ್ಕೆ ಇಂದು ತೀರ್ಪಿತ್ತು 90 ರ ವೃದ್ಧನಿಗೆ ಜೀವಾವದಿ ಶಿಕ್ಷೆ ವಿಧಿಸಿದ ನ್ಯಾಯಾಲಯ! ಅಷ್ಟಕ್ಕೂ ಅಂದು ನಡೆದದ್ದೇನು?