Watch video: ಆಟೋ ಚಾಲಕನಿಗೆ ಥಳಿಸಿ, ದರ್ಪತೋರಿದ ಪೇದೆ ಸಸ್ಪೆಂಡ್ : ಕಾರಣವೇನು ಗೊತ್ತಾ?

Cop thrashes auto driver in Mandya

Share the Article

ಮಂಡ್ಯ: ಮಂಡ್ಯ ನಗರದಲ್ಲಿ ಪೊಲೀಸ್‌ ಪೇದೆಯೊಬ್ಬ ಆಟೋ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಸೋಷಿಯಲ್‌ ಮಿಡಿಯಾಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಪೇದೆಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

ಆಟೋ ಚಾಲಕನಿಗೆ ಹೊಡೆದಿದ್ದು, ಯಾಕೆ ಗೊತ್ತಾ?

ನಗರದ ರಸ್ತೆಯಲ್ಲಿ ಆಟೋ ಚಾಲಕನೊಬ್ಬ ಬೈಕ್ ನಲ್ಲಿ ತೆರಳುತ್ತಿದ್ದ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದ ಪರಿಣಾಮ, ಪೇದೆ ಕಾಲಿಗೆ ಗಂಭೀರ ಗಾಯಗೊಂಡಿತ್ತು. ಅಲ್ಲಿ ಸೇರಿದ್ದ ಜನರು ಪೇದೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ರು ಆಟೋ ಚಾಲಕನಿಗೆ ತಿಳಿಸಿದ್ರು ಅಷ್ಟರಲ್ಲೇ ‘ಬನ್ನಿ ಸರ್‌’ ಎಂದು ಚಾಲಕ ಕರೆದಾಗ ಸಿಟ್ಟುಗೊಂಡ ಪೊಲೀಸ್‌ ಏಕಾಏಕಿ ಚಾಲಕನೊಂದಿಗೆ ಗಲಾಟೆ ನಡೆಸಿದ್ದಾನೆ.

ಚಾಲಕನಿಗೆ ಹಿಗ್ಗಾಮುಗ್ಗಾ ಕಪಾಳಮೋಕ್ಷ ಮಾಡಿದ್ದು, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾನೆ. ಈ ಘಟನೆ ವಿಡಿಯೋವನ್ನುಅಲ್ಲಿ ಸೇರಿದ್ದ ಹಲವು ಜನರು ರೆಕಾರ್ಡ್‌ ಮಾಡಿ, ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಗಂಭೀರ ಘಟನೆಯ ಸಂಬಂಧ ಯಾರು ಠಾಣೆ ದೂರು ನೀಡಿರಲಿಲ್ಲ ಆದ್ರೂ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸ್‌ ಅಧಿಕಾರಿ ದರ್ಪ ಬಹಿರಂಗವಾಗಿದ್ದು, ಕೆಲಸದಿಂದ ಪೊಲೀಸ್‌ ಪೇದೆಯನ್ನು ಅಮಾನತು ಮಾಡಲಾಗಿದೆ.

 

ಇದನ್ನು ಓದಿ: Ranchi: ‘ ಹೆಲ್ಪ್ ಮೀ ಮೋದಿ, ಲವ್ ಜಿಹಾದ್ ಬಲೆಯಲ್ಲಿ ಸಿಕ್ಕಿಹಾಕಿ ಕೊಂಡಿದ್ದೇನೆ, ಇದರಿಂದ ಬಿಡಿಸಿ ‘ ಎಂದು ಪ್ರಧಾನಿಗೆ ಪತ್ರ ಬರೆದ ನಟಿ! 

Leave A Reply