Chikmagalur: ಇದೆಂಥಾ ವೈದ್ಯರ ಎಡವಟ್ಟು : ಕಂಠಪೂರ್ತಿ ಕುಡಿದು ಶಸ್ತ್ರಚಿಕಿತ್ಸೆ ಮಾಡಲು ಬಂದ ವೈದ್ಯ :ಕುಸಿದು ಬಿದ್ದು ಹೈಡ್ರಾಮಾ

Doctor got drunk after collapsing and creating hydrama

Share the Article

Chikmagalur: ಚಿಕ್ಕಮಗಳೂರು : ಕಳಸ ತಾಲೂಕು ಆಸ್ಪತ್ರೆಯಲ್ಲಿ ವೈದ್ಯನೊಬ್ಬ ಕಂಠಪೂರ್ತಿ ಕುಡಿದು ಶಸ್ತ್ರಚಿಕಿತ್ಸೆ ಮಾಡಲು ಬಂದಾಗ ಕುಸಿದು ಬಿದ್ದು ಹೈಡ್ರಾಮಾ ಸೃಷ್ಟಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ನಿನ್ನೆ ಕಳಸ ತಾಲೂಕು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕಾದ ವೈದ್ಯರು‌ ಆಪರೇಷನ್ ಥಿಯೇಟರ್​ಗೆ ಕಂಠ ಪೂರ್ತಿ ಕುಡಿದು ಬಂದಿದ್ದು, ಚಿಕಿತ್ಸೆಗೆ ಮುಂದಾಗುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಅಷ್ಟರಲ್ಲೇ ಆಸ್ಪತ್ರೆಯ ಸಿಬ್ಬಂದಿಗಳು ಶಸ್ತ್ರ ಚಿಕಿತ್ಸೆ ನಡೆಸಬೇಕಾದ ವೈದ್ಯರ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಕುಸಿದು ಬಿದ್ದ ವೈದ್ಯನನ್ನ ಸಿಬ್ಬಂದಿಗಳು ಕೊಪ್ಪ (Chikmagalur) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲದೇ ಬೆಳ್ಳಂ ಬೆಳಗ್ಗೆಯೇ ರೋಗಿಗಳನ್ನು ಚಿಕಿತ್ಸೆ ನೀಡಬೇಕಾದ ವೈದ್ಯರೇ ಮದ್ಯ ಸೇವನೆ ಮಾಡಿ ಬಂದಿರುವುದು ಕಂಡು ಜನರು ಶಾಕ್‌ ಆಗಿದ್ದರು, ಮದ್ಯ ಅಮಲಿನಲ್ಲೇ ಬೆಳಗ್ಗೆಯೇ ವಾರ್ಡ್‌ಗೆ ಬಂದು ರೋಗಿಗಳಿಗೆ ಅನಸ್ತೇಷಿಯಾ ನೀಡಿ ಹೋದ ವೈದ್ಯರು ನಿದ್ರೆ ಮಾಡಿದ್ದಾರು. ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಕರೆದಾಗ ಬಂದು ಶಸ್ತ್ರ ಚಿಕಿತ್ಸೆ ಮುಂದಾಗಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ವೈದ್ಯರಿಲ್ಲದೆ ಅನಸ್ತೇಷಿಯಾ ಪಡೆದ 9 ಮಂದಿ ಮಹಿಳೆಯರ ಪರದಾಟ ನಡೆಸಿದ್ದಾರೆ, ಈ ಘಟನೆ ಸಂಬಂಧ ರೋಗಿಗಳು ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ತಕ್ತಪಡಿಸಿದ್ದಾರೆ.

 

ಇದನ್ನು ಓದಿ: Madhya Pradesh: ಶಾಕಿಂಗ್ ನ್ಯೂಸ್: ಮಧ್ಯಪ್ರದೇಶದಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೂ ಹಿಜಾಬ್ ಕಡ್ಡಾಯ ಮಾಡಿದ ಶಾಲೆ !

Leave A Reply