Tamilnadu: ಶವದ ಎದೆಯ ಮೇಲೆ ಕುಳಿತು ಹೆಣದ ಪೂಜೆ ಮಾಡಿದ ಅಘೋರಿ – ತಮಿಳುನಾಡಿನಲ್ಲೊಂದು ಸಂಚಲನ ಮೂಡಿಸೋ ಆಚರಣೆ

Aghori Puja performed on the dead body of a friend in Tamilnadu

Tamilnadu: ಮನೆಯಲ್ಲಿ ಸಾವು ಸಂಭವಿಸಿದಾಗ ಸಂಸ್ಕಾರ ಕಾರ್ಯಗಳು ಆಯಾ ಮನೆಯ ಸಂಪ್ರದಾಯಗಳಂತೆ, ಪೂಜೆ-ಪುನಸ್ಕಾರಗಳೊಂದಿಗೆ ನಡೆಯುತ್ತವೆ. ಆದರೆ ತಮಿಳುನಾಡಿನಲ್ಲಿ(Tamilnadu) ಒಂದೆಡೆ ನಡೆದ ಶವಸಂಸ್ಕಾರದ ವಿಧಿವಿಧಾನ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ.

ಹೌದು, ತಮಿಳುನಾಡಿನ ಕೊಯಮತ್ತೂರಿನಲ್ಲಿ (Koyamattur) ನಡೆದಿರುವ ಅಘೋರಿ ಪೂಜೆಯೊಂದು (Aghori Puja) ಸಂಚಲನ ಮೂಡಿಸಿದೆ. ಯಾಕೆಂದರೆ ಶವದ ಎದೆಯ ಮೇಲೆ ಪದ್ಮಾಸನ ಹಾಕಿ ಕುಳಿತು ಅಘೋರಿಯು ಶವದ ಪೂಜೆ ಮಾಡಿರೋ ಘಟನೆ ಕೊಯಮತ್ತೂರಿನಲ್ಲಿ ನಡೆದಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಅಂದಹಾಗೆ ಮಣಿಕಂಠನ್(Manikantan) ಮತ್ತು ಅವರ ಪತ್ನಿ ತಮಿಳುನಾಡಿನ ಕೊಯಮತ್ತೂರು (Coimbatore) ಜಿಲ್ಲೆಯ ಸುಲ್ಲೂರಿನಲ್ಲಿ (Sulur) ನೆಲೆಸಿದ್ದಾರೆ. ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮಣಿಕಂಠನ್ ಸಿಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಣಿಕಂಠನ್ ಅವರ ಕುಟುಂಬಸ್ಥರು ಮೃತದೇಹವನ್ನು (dead body) ಸೂಲೂರಿಗೆ ತಂದು ಅಂತಿಮಸಂಸ್ಕಾರಕ್ಕೆ (Last rites) ವ್ಯವಸ್ಥೆ ಮಾಡಿದ್ದಾರೆ. ಅದೇ ಸಮಯಕ್ಕೆ ಮಣಿಕಂಠನ ಗೆಳೆಯರಾಗಿದ್ದ ಕೆಲವು ಅಘೋರಿಗಳು ಸ್ಥಳಕ್ಕೆ ಬಂದಿದ್ದಾರೆ.

ಮಣಿಕಂಠನ್ ಮನಃಶಾಂತಿಗಾಗಿ ಸ್ವಲ್ಪ ಕಾಲ ಪೂಜೆ ಮಾಡುವಂತೆ ಅಘೋರಿಗಳು ಹೇಳಿದರು. ಅದಕ್ಕೆ ಕುಟುಂಬಸ್ಥರು ಒಪ್ಪಿದಾಗ ಮಣಿಕಂಠನ್ ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾ ಮಂತ್ರಗಳನ್ನು ಪಠಿಸುತ್ತಾ ಕಟ್ಟುಮಸ್ತಾದ ಒಬ್ಬ ಯುವ ಅಘೋರಿ ಓ ಅಘೋರಾ.. ಅಘೋರ ಎನ್ನುತ್ತಾ ಮಣಿಕಂಠನ ಶವದ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತು ಜೋರಾಗಿ ಕೂಗಿದ್ದಾನೆ.

ಬಳಿಕ ಪೂಜೆ ಮಾಡುವಾಗ, ಆತನ ಅನುಯಾಯಿಗಳು ಸಹ ಜೋರಾಗಿಯೇ ಮಂತ್ರಗಳನ್ನು ಪಠಿಸಿ, ಗಲಾಟೆ ಮಾಡಿದರು. ಡೋಲು ಬಾರಿಸುವುದರ ಜೊತೆಗೆ ಶಂಖಗಳನ್ನು ಸಹ ಊದಿದರು. ಆದರೆ ಈ ಎಲ್ಲಾ ಗಲಾಟೆ ನೋಡುಗರನ್ನು ಭಯಭೀತಗೊಳಿಸಿತು. ಕೆಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಪೂಜೆ ಮಾಡಲು ಸತ್ತ ವ್ಯಕ್ತಿಯ ಮೇಲೆ ಕುಳಿತಿರುವುದು ವಿಚಿತ್ರವಾಗಿದೆ. ಸತ್ತ ಸ್ನೇಹಿತನ ಶವವನ್ನು ಪೂಜಿಸುವುದು ಹೀಗಾ? ಎಂದು ಆಕ್ರೋಶ, ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Pavitra lokesh: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ PHD ಮಾಡಲು ಮುಂದಾದ ಪವಿತ್ರ ಲೋಕೇಶ್! ಪ್ರವೇಶ ಪರೀಕ್ಷೆ ಬರೆಯಲು ನರೇಶ್ ಸಾಥ್!!

Leave A Reply

Your email address will not be published.