K. S Eshwarappa: ಪ್ರಿಯಾಂಕಾ ಖರ್ಗೆ ಇನ್ನೂ ಬಚ್ಚಾ ಅವನೇನು ಮಾಡಲು ಸಾಧ್ಯ ?- ಈಶ್ವರಪ್ಪ ಹೇಳಿಕೆ

KS Eshwarappa condemn to Priyanka Kharge statement to RSS Ban

KS Eshwarappa: ರಾಜ್ಯದಲ್ಲಿ ಶಾಂತಿ ಕದಡಿದರೆ ಭಜರಂಗದಳ (Bajarangdal) ಮತ್ತು ಆರ್‌ಎಸ್‌ಎಸ್‌ ನಂತಹ (RSS) ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ (BJP) ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ (Pakisthan) ಹೋಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆ ಬೆನ್ನಲ್ಲೆ ಪ್ರಿಯಾಂಕ್ ಖರ್ಗೆ (Priyank kharge) ಹಿಜಾಬ್ (Hijab), ಗೋಹತ್ಯೆ ನಿಷೇಧ ಸೇರಿ ವಿವಾದಾತ್ಮಕ ಕಾಯ್ದೆಗಳನ್ನು ಪರಿಶೀಲಿಸಿ ವಾಪಸ್ ಪಡೆಯುತ್ತೇವೆ ಎಂದು ಮತ್ತೊಂದು ಹೇಳಿಕೆಯನ್ನು ನೀಡಿ ಚರ್ಚೆಗೆ ಗ್ರಾಸವಾಗಿದ್ದರು. ಸಚಿವರು ಪದೇ ಪದೇ ಆರ್‌ಎಸ್‌ಎಸ್‌ ನಿಷೇಧಿಸುವುದಾಗಿ ಹೇಳುತ್ತಿದ್ದು, ಇದೀಗ ಈ ಹೇಳಿಕೆಗೆ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ (KS Eshwarappa) ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ದೇಶಭಕ್ತರ ಸಂಘಟನೆಯಾಗಿದೆ. ಈ ಸಂಘಟನೆ ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಆದರೂ, ಆರ್‌ಎಸ್‌ಎಸ್‌ ನಿಷೇಧಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದಾರೆ. ಅವರಿನ್ನೂ ಇನ್ನೂ ಬಚ್ಚಾ. ಅವನೇನು ಮಾಡಲು ಸಾಧ್ಯ? ಎಂದು ಈಶ್ವರಪ್ಪ ಖಾರವಾಗಿ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, “ಆರ್‌ಎಸ್‌ಎಸ್‌ ದೇಶದ್ರೋಹಿಗಳಿಗೆ ಸಿಂಹ ಸ್ವಪ್ನವಾಗಿದೆ. ಆದ್ದರಿಂದಲೇ ಈ ಸಂಘಟನೆ ದೇಶದಾದ್ಯಂತ ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿದೆ. ಮುಖ್ಯಮಂತ್ರಿಯವರು ಆರ್‌ಎಸ್‌ಎಸ್‌ ನಿಷೇಧ ಮಾಡುವುದಿಲ್ಲ ಎಂದು ಹೇಳಿದ ಬಳಿಕವೂ
ಪ್ರಿಯಾಂಕ್ ಪದೇ ಪದೇ ನಿಷೇಧಿಸುತ್ತೇವೆ ಎಂದು ಹೇಳುವ ಮೂಲಕ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಸಿಎಂ (cm) ಸ್ಪಷ್ಟನೆ ನಂತರವೂ ಮತ್ತೆ‌ ಮತ್ತೆ ನಿಷೇಧದ ಮಾತನ್ನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇದು ಸರಿಯಲ್ಲ” ಎಂದು ಹೇಳಿದರು.

“ಪ್ರಿಯಾಂಕ್ ಅವರ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (mallikarjuna kharge) ಅವರು ರಾಜ್ಯದಲ್ಲಿ ಮಾದರಿಯಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸ್ಥಾನದಲ್ಲಿದ್ದು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರು ಈ ರೀತಿಯ ಮಾತುಗಳನ್ನಾಡಿಲ್ಲ ” ಎಂದು ಹೇಳಿದರು.

“ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ಹೇಳಿದ್ದರು. ಇದೀಗ ಎರಡು ಕ್ಯಾಬಿನೆಟ್ ಸಭೆಗಳಾಗಿದೆ. ಆದರೆ, ಗ್ಯಾರಂಟಿಗಳಿಗೆ ಅನುಮೋದನೆ ಸಿಕ್ಕಿಲ್ಲ. ನಾವು ಒಂದು ತಿಂಗಳುಗಳ ಕಾಲ ಕಾಯುತ್ತೇವೆ. ನಂತರವೂ ಗ್ಯಾರಂಟಿ ಜಾರಿಯಾಗದಿದ್ದರೆ ಪ್ರತಿಭಟನೆ ನಡೆಸುತ್ತೇವೆ” ಎಂದು ಈಶ್ವರಪ್ಪ ಹೇಳಿದರು.

ಗ್ಯಾರಂಟಿ ಗಳಲ್ಲಿ ಒಂದಾದ ನಿರುದ್ಯೋಗಿ ಭತ್ಯೆಯನ್ನು ಹೇಳಿದಂತೆ ನೀಡಬೇಕು. ರಾಜ್ಯದ ಎಲ್ಲ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದಿತ್ತು ಕಾಂಗ್ರೇಸ್ ಸರ್ಕಾರ. ಆದರೆ, ಇದೀಗ ಈ ಬಾರಿ ಪಾಸಾದವರಿಗೆ ಮಾತ್ರ ಕೊಡುತ್ತೇನೆ ಎನ್ನುತ್ತಿದ್ದಾರೆ. ಇದು ದ್ರೋಹ ಮಾಡಿದಂತೆ. ಗ್ಯಾರಂಟಿಯ ಭರವಸೆಯಿಂದಲೇ ಜನರು ವೋಟ್ ನೀಡಿದ್ದಾರೆ. ಇದೀಗ ದ್ರೋಹ ಬಗೆಯುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Actor Naresh: ‘ ಮಕ್ಕಳು ಮಾಡ್ಕೊಬಹುದು, ಆದ್ರೆ ಅದೊಂದು ಸಮಸ್ಯೆ ಉಂಟಲ್ಲಾ’ ಎಂದ ಪವಿತ್ರಾ ಲೋಕೇಶ್ ಗೆಳೆಯ ನರೇಶ್ !

Leave A Reply

Your email address will not be published.