Home latest Madhyapradesh: ಸರ್ಕಾರದಿಂದ ಸಾಮೂಹಿಕ ವಿವಾಹ ಆಯೋಜನೆ : ನವ ದಂಪತಿಗಳಿಗೆ ಕೊಟ್ಟ ಉಡುಗೊರೆಯಲ್ಲಿ ಕಾಂಡೋಮ್‌, ಗರ್ಭ...

Madhyapradesh: ಸರ್ಕಾರದಿಂದ ಸಾಮೂಹಿಕ ವಿವಾಹ ಆಯೋಜನೆ : ನವ ದಂಪತಿಗಳಿಗೆ ಕೊಟ್ಟ ಉಡುಗೊರೆಯಲ್ಲಿ ಕಾಂಡೋಮ್‌, ಗರ್ಭ ವಿರೋಧಕ ಮಾತ್ರೆ ಪತ್ತೆ!!

Madhyapradesh
Image source- Kannada news TV9 kannada

Hindu neighbor gifts plot of land

Hindu neighbour gifts land to Muslim journalist

Madhyapradesh: ಮದುವೆ(Marriage) ಆಗುವುದೇ ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹಂಚಿಕೊಂಡು, ಸುಂದರ ಸಂಸಾರ ನಡೆಸುತ್ತಾ, ಮಕ್ಕಳು-ಮರಿಗಳನ್ನು ಪಡೆದು ನೆಮ್ಮದಿಯ ಬಾಳುವೆ ನಡೆಸುವುದಕ್ಕಾಗಿ. ಆದರೆ ಇಲ್ಲೊಂದೆಡೆ ವಿವಾಹ ಮಹೋತ್ಸವ ದಿನವೆ ನವ ವಧು- ವರರಿಗೆ ಜನನ ನಿಯಂತ್ರಣಕ್ಕೆ ಕಾಂಡೋಮ್(Condoms) ಮತ್ತು ಗರ್ಭನಿರೋದಕ(Contraception) ಮಾತ್ರೆಗಳನ್ನು ನೀಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹೌದು, ಮಧ್ಯಪ್ರದೇಶದ(Madhyapradesh) ಜಬುವಾ ಜಿಲ್ಲೆಯ(Jbuva district) ತಾಂಡ್ಲಾದಲ್ಲಿ(Tandla) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್(CM Shivraj sing chowhan) ಅವರ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಕಾಹ್ ಯೋಜನೆಯಡಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸೋಮವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧುಗಳಿಗೆ ನೀಡಲಾದ ಮೇಕಪ್ ಬಾಕ್ಸ್‌ಗಳಲ್ಲಿ(Makeup box) ಕಾಂಡೋಮ್‌ಗಳು ಮತ್ತು ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿವೆ.

ಸದ್ಯ ಈ ವಿಚಾರವೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು ಹೀಗೇಕೆ ಮಾಡಿದರು? ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಅಧಿಕಾರಿ ಭೂರಸಿಂಗ್ ರಾವತ್ (DC Bhurasing ravat) ಅವರು “ಕುಟುಂಬ ಯೋಜನೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ಅಧಿಕಾರಿಗಳು ಕಾಂಡೋಮ್ ಮತ್ತು ಗರ್ಭನಿರೋಧಕಗಳನ್ನು ವಿತರಿಸಿರುವ ಸಾಧ್ಯತೆಯಿದೆ. ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ವಿತರಿಸಲು ನಾವು ಜವಾಬ್ದಾರರಲ್ಲ” ಎಂದಿದ್ದಾರೆ.

ಅಲ್ಲದೆ ” ಆರೋಗ್ಯ ಇಲಾಖೆಯು ತನ್ನ ಕುಟುಂಬ ಯೋಜನೆ ಜಾಗೃತಿ ಕಾರ್ಯಕ್ರಮದ ಭಾಗವಾಗಿ ವಸ್ತುಗಳನ್ನು ನೀಡಿರುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ, ನಾವು ನೇರವಾಗಿ ₹ 49,000 ಅನ್ನು ವರ್ಗಾಯಿಸುತ್ತೇವೆ. ಫಲಾನುಭವಿಯ ಬ್ಯಾಂಕ್ ಖಾತೆ. ಆಹಾರ, ನೀರು ಮತ್ತು ಟೆಂಟ್ ಒದಗಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ, ಅದು ₹ 6,000 ಆಗಿದೆ. ವಿತರಿಸಿದ ಪ್ಯಾಕೆಟ್‌ಗಳಲ್ಲಿ ಏನಿದೆ ಎಂದು ನನಗೆ ತಿಳಿದಿರಲಿಲ್ಲ, ‘ಎಂದು ಹೇಳಿದ್ದಾರೆ.

ಅಂದಹಾಗೆ ಮಧ್ಯಪ್ರದೇಶ ಸರ್ಕಾರವು ಏಪ್ರಿಲ್ 2006 ರಲ್ಲಿ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಕಾಹ್ ಯೋಜನೆಯನ್ನು ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರ ವಿವಾಹಗಳಿಗೆ ಹಣಕಾಸಿನ ನೆರವು ನೀಡಲು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ವಧುವಿನ ಕುಟುಂಬಕ್ಕೆ ₹ 55,000 ನೀಡುತ್ತದೆ.

 

ಇದನ್ನು ಓದಿ: Griha lakshmi Scheme: ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೆ ಸಿಗಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ