Free bus pass: ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪಾಸ್ : ಸಚಿವ ರಾಮಲಿಂಗಾರೆಡ್ಡಿ ಘೋಷಣೆ
Free bus pass for women in karnataka
Free bus pass : ಬೆಂಗಳೂರು : ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ʻಮಹಿಳೆಯರಿಗೆ ಉಚಿತ ಬಸ್ (Free bus pass) ಪ್ರಯಾಣವನ್ನು ಜಾರಿʼ ಮಾಡಲಾಗಿದೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ
ಇಂದು (ಮೇ.30) ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಹತ್ವದ ಘೋಷಣೆ ಮಾಡಿದ್ದು,ಇನ್ಮುಂದೆ ರಾಜ್ಯಾದ್ಯಂತ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿಧಾನ ಸಭೆ ಚುನಾವಣಾ ಮತ ಪ್ರಚಾರ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೂ ಇಂದು ಜಾರಿಯಾಗಿದ್ದು, ಮಹಿಳೆಯರಿಗೆ ಸಿಹಿಸುದ್ದಿ ನೀಡಿದಂತೂ ನಿಜ. APL,BPL ಎಂದು ಯಾವುದೇ ನಿಯಮ ಇಲ್ಲ. ಎಲ್ಲ ಮಹಿಳೆಯರಿಗೆ ಇದು ಅನ್ವಯಿಸುತ್ತದೆ. ಅಂತಿಮ ನಿರ್ಧಾರ ಮುಖ್ಯಮಂತ್ರಿ ಹೇಳುತ್ತಾರೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ರಾಜ್ಯದ ಎಲ್ಲ ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಹಾಗೂ ಬಿಪಿಎಲ್, ಎಪಿಎಲ್ ಸೇರಿದಂತೆ ಇನ್ಯಾವುದೇ ಷರತ್ತುಗಳಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.
ನಾಳೆ ಸಿಎಂ ಸಿದ್ದರಾಮಯ್ಯ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು. ನಾವು ನಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಷರತ್ತು ಹಾಕಿಲ್ಲ. ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಖಚಿತ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಘೋಷಣೆ ಮಾಡಿದ ಆ ಐದು ಘೋಷಣೆಗಳ್ಯಾವುವು ಅನ್ನೋದನ್ನು ನೋಡುವುದಾದರೆ ಇಲ್ಲಿದೆ ಓದಿ,..
ಏನು ಆ ಗ್ಯಾರೆಂಟಿಗಳು?
1. ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವ ‘ಗೃಹಜ್ಯೋತಿ’ ಯೋಜನೆ
2. ಕುಟುಂಬದ ಪ್ರತಿಯೊಬ್ಬ ಮಹಿಳೆಗೆ 2,000 ರೂʻಗೃಹ ಲಕ್ಷ್ಮಿ’ ಯೋಜನೆ
3. ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ವಿತರಿಸೋ ‘ಅನ್ನ ಭಾಗ್ಯ’ ಯೋಜನೆ
4. ನಿರುದ್ಯೋಗಿ ಪದವೀಧರರಿಗೆ 3,000 ರೂ., ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ಎರಡು ವರ್ಷಗಳವರೆಗೆ (18-25 ವಯೋಮಾನದವರಿಗೆ) 1,500 ರೂ. ಎಂಬ ‘ಯುವ ನಿಧಿ’ಯೋಜನೆ ಜಾರಿ
5. ಕರ್ನಾಟಕದಾದ್ಯಂತ ಮಹಿಳೆಯರಿಗೆ ರಾಜ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾದ ʻನಾರಿ ಶಕ್ತಿʼ ಯೋಜನೆ
ಕರ್ನಾಟಕದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಿಸಿ ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿಗಳ ಜಾರಿಗಾಗಿ ವಾರ್ಷಿಕವಾಗಿ 68000 ಕೋಟಿ ಖರ್ಚಾಗಲಿದೆ ಎನ್ನಲಾಗಿದೆ. ಈ ಎಲ್ಲಾ ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಮೂರು ಲಕ್ಷ ಕೋಟಿ ಖರ್ಚಾಗಲಿದ್ದು, ಇದೀಗ ಒಂದು ಗ್ಯಾರಂಟಿಯನ್ನು ಜಾರಿಗೆ ತಂದಿದ್ದು ಇನ್ನುಳಿದ ಗ್ಯಾರಂಟಿಗಳನ್ನು ರಾಜ್ಯದ ಬಜೆಟ್ ನಲ್ಲಿ ಪೂರೈಸಲಾಗುತ್ತಾ ಎನ್ನುವುದು ಯಕ್ಷಪ್ರಶ್ನೆಯಾಗಿದೆ.