Egg Price: ಮರಹತ್ತಿ ಕುಳಿತ ಕೋಳಿ – ಮೊಟ್ಟೆ ದರಗಳು, ಇಂದು ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ?
Egg price hike in karnataka
Egg Price Hike: ಬಿಸಿಲ ಬೇಗೆ ವಿಪರೀತ ಏರಿಕೆ ಆಗಿರುವ ಹಿನ್ನೆಲೆ ಕೋಳಿ ಮೊಟ್ಟೆ ಉತ್ಪಾದನೆಯ ಮೇಲೆ ಪರಿಣಾಮ ಬೀರುವುದರಿಂದ ಕೋಳಿ ಮತ್ತು ಮೊಟ್ಟೆಯ ದರ ತೀವ್ರ ಏರಿಕೆಯಾಗಿದೆ.
ಈಗಾಗಲೇ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿಗೆ, ಕೋಳಿಗಳು ಶಾಖದ ಒತ್ತಡವನ್ನು ಅನುಭವಿಸಿದ್ದು, ಉತ್ಪಾದನೆಯ ವೆಚ್ಚವು ಹೆಚ್ಚಿದೆ. ಕೋಳಿಗಳು ಆಹಾರ ಸೇವನೆ ಕಡಿಮೆ ಮಾಡಿ ಹೆಚ್ಚಿನ ಪ್ರಮಾಣದ ನೀರು ಕುಡಿಯುತ್ತವೆ. ಇವುಗಳಿಗೆ ಬೆವರುವ ಸಾಮರ್ಥ್ಯ ಇರುವುದಿಲ್ಲ. ಗರಿಗಳು ಇರುವ ಕಾರಣ ದೇಹದ ಶಾಖ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ
ಕಡಿಮೆ ತೂಕ, ಕಳಪೆ ಚಿಪ್ಪಿನ, ಕಡಿಮೆ ಗುಣಮಟ್ಟದ ಮೊಟ್ಟೆಗಳು ಉತ್ಪತ್ತಿಯಾಗುತ್ತಿವೆ. ಉತ್ಪಾದನಾ ಸಾಮರ್ಥ್ಯ ಕೂಡ ಕಡಿಮೆಯಾಗಿದೆ.
ಒಟ್ಟಿನಲ್ಲಿ ಉತ್ಪಾದನೆಯಲ್ಲಿ ಇಳಿಕೆಯಾದ ಪರಿಣಾಮ ಮೊಟ್ಟೆಗಳ ದರ ಏರಿಕೆ ಕಂಡಿದೆ.
ರಾಜ್ಯದಲ್ಲಿ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 1.8 ಕೋಟಿ ಅಧಿಕ ಮೊಟ್ಟೆ ಉತ್ಪಾದನೆಯಾಗಿದ್ದು, ಮೇ ತಿಂಗಳಿನಲ್ಲಿ 1.6 ಕೋಟಿಗೆ ಇಳಿಕೆಯಾಗಿದೆ. ಬೇಸಿಗೆ ಕಾರಣಕ್ಕೆ ಅನೇಕ ಕೋಳಿ ಸಾಕಾಣಿಕೆದಾರರು ಹೊಸ ಮರಿಗಳು ಸಾಕಲು ಮುಂದಾಗಿಲ್ಲ. ಇದು ಕೂಡ ಕೋಳಿ ಮತ್ತು ಮೊಟ್ಟೆ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ.
ಮೊಟ್ಟೆ ಬೆಲೆ ಏರಿಕೆಯ ಜೊತೆಗೆ ಚಿಕನ್ ದರ ಕೂಡ ಏರಿಕೆ ಕಂಡಿದೆ. ಉತ್ಪಾದನೆ ಕಡಿಮೆ ಮತ್ತು ಆಹಾರದ ಬೆಲೆಯ ಪರಿಣಾಮ ಚಿಕನ್ ಬೆಲೆ ಗಗನಕ್ಕೇರಿದ್ದು, ಮಾಂಸಪ್ರಿಯರಿಗೆ ಹೊರೆಯಾಗಿದೆ.
ಸದ್ಯ ರೆಡಿ ಚಿಕನ್ ಕೆಜಿಗೆ 200 ರಿಂದ 250 ರೂ., ಸ್ಕಿನ್ ಲೆಸ್ ಚಿಕನ್ 230 ರಿಂದ 280 ರೂ., ನಾಟಿ ಕೋಳಿ ಚಿಕನ್ ಕೆಜಿಗೆ 500 ರಿಂದ 600 ರೂ.ವರೆಗೆ ಏರಿಕೆಯಾಗಿದೆ. ಮೊಟ್ಟೆ ಸಗಟು 5.50 ರೂಪಾಯಿ, ರಿಟೇಲ್ 5.65 ರಿಂದ 7 ರೂ.ವರೆಗೆ ದರ ಏರಿಕೆಯಾಗಿದೆ.
ಇದನ್ನೂ ಓದಿ: Salumarada Thimmakka: ವ್ಯಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ಗೌರವ ಮುಂದುವರಿಕೆ; ಬಿಜೆಪಿ ಸರ್ಕಾರ ನೀಡಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಕೆಗೆ CM ಆದೇಶ