Satish jarakiholi: RSS ಬ್ಯಾನ್ ಮಾಡಲ್ಲ, ಅಲ್ಲಿರೋ ದಲಿತ, ಶೂದ್ರರನ್ನು ಸೆಳೆಯುತ್ತೇವೆ – ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ

Needs to attract Dalits Shudras and lower castes from RSS Satish Jarakiholi

Satish jarakiholi: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಅಧಿಕಾರಕ್ಕೆ ಬಂದ ಕೂಡಲೇ RSS ಹಾಗೂ ಬಜರಂಗದಳ(Bajarangdal) ನಿಷೇಧದ ವಿಚಾರವಾಗಿ ಚರ್ಚೆ ಜೋರಾಗಿದೆ. ಆದರೆ ಈ ನಡುವೆ ಸತೀಶ್ ಜಾರಕಿಹೊಳಿ(Satish jarakiholi) ಅಚ್ಚರಿಯ ಹೇಳಿಕೆ ನೀಡಿದ್ದು, ರಾಜ್ಯದ್ಯಂತ ಸಂಚಲನ ಸೃಷ್ಟಿಸಿದೆ.

ಹೌದು, ಆರ್‌ಎಸ್‌ಎಸ್ (RSS) ಮತ್ತು ಬಜರಂಗದಳ (Bajarang Dal) ನಿಷೇಧ ಚರ್ಚೆ ವಿಚಾರವಾಗಿ ನೂತನ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

RSS ಅಥವಾ ಬಜರಂಗದಳದಂತಹ ಸಂಘಟನೆಗಳನ್ನು ನಾವು ಬ್ಯಾನ್ ಮಾಡುವುದಿಲ್ಲ. ಸಂಘಟನೆ ನಿಷೇಧ ಮಾಡಿದರೆ ಇನ್ನೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ ಆರ್‌ಎಸ್‌ಎಸ್‌ನಲ್ಲಿರುವ ದಲಿತರು, ಶೂದ್ರರು ಮತ್ತು ಕೆಳವರ್ಗದವರನ್ನು ಸೆಳೆಯಬೇಕಿದೆ. ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ. ಆರ್‌ಎಸ್‌ಎಸ್‌(RSS)ನಲ್ಲಿರುವ ದಲಿತರನ್ನು ಸೆಳೆಯುವ ಮೂಲಕ ಅಹಿಂದಾಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ಯಾವುದೇ ಸಂಘಟನೆ ಬ್ಯಾನ್ ಮಾಡುವುದು ನಮಗೆ ಪರಿಹಾರವಲ್ಲ ಎಂದಿದ್ದಾರೆ.

ಅಲ್ಲದೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ದು ವಿಚಾರ, ಈ ಎಲ್ಲ ಕಾಯ್ದೆಗಳ ಬಗ್ಗೆ ಚರ್ಚೆ ಆಗಬೇಕು, ತಕ್ಷಣವೇ ನಿಷೇಧ ಕಾಯ್ದೆ ಜಾರಿ ಅಸಾಧ್ಯ. ಈ ಬಗ್ಗೆ ಸರ್ಕಾರ ಹಾಗೂ ಪಕ್ಷದಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆಗಬೇಕು. ಸಂಪೂರ್ಣ ಚರ್ಚೆ ಆದ ಮೇಲೆಯೇ ಈ ಸಂಬಂಧ ಸರ್ಕಾರದಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Karnataka cabinet: ಅಂತೂ ಫೈನಲ್ ಆಯ್ತು ನೂತನ ಸಚಿವರ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

Leave A Reply

Your email address will not be published.