Home Education ಮತ್ತೆ 2 ವಾರಗಳ ರಜೆ ವಿಸ್ತರಣೆ, ಪದವಿ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ, ತರಗತಿ ಪ್ರಾರಂಭದ...

ಮತ್ತೆ 2 ವಾರಗಳ ರಜೆ ವಿಸ್ತರಣೆ, ಪದವಿ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ, ತರಗತಿ ಪ್ರಾರಂಭದ ದಿನಾಂಕ ಗಮನಿಸಿ

Degree colleges academic schedule
Image source: Bangalore mirror

Hindu neighbor gifts plot of land

Hindu neighbour gifts land to Muslim journalist

Degree colleges academic schedule: 2023-24 ನೇ ಸಾಲಿನ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ ಕೋರ್ಸುಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಏಕರೂಪ ಶೈಕ್ಷಣಿಕ (Education) ವೇಳಾಪಟ್ಟಿಯನ್ನು (Degree colleges academic schedule) ಉನ್ನತ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.

2023 -24ನೇ ಶೈಕ್ಷಣಿಕ ಸಾಲಿನಲ್ಲಿ ಮೇ.22 ರಿಂದ ಜುಲೈ 15 ರೊಳಗೆ ಪದವಿ ಕಾಲೇಜುಗಳ ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜು.17 ರಿಂದ ತರಗತಿಗಳನ್ನು ಆರಂಭಿಸಿ, ನವೆಂಬರ್ 18 ಕ್ಕೆ ಮುಕ್ತಾಯಗೊಳಿಸಬೇಕು. ನವೆಂಬರ್ 20 ರಿಂದ ಪರೀಕ್ಷೆಗಳನ್ನು ಆರಂಭಿಸಿದ 2024 ರ ಜ. 15ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಇನ್ನು ಜ. 16 ರಿಂದ 2 ನೇ ಸೆಮಿಸ್ಟರ್ ತರಗತಿಗಳನ್ನು ಆರಂಭಿಸಿ ಮೇ. 15 ಕ್ಕೆ ಮುಕ್ತಾಯಗೊಳಿಸಬೇಕು. ಮೇ. 13 ರಿಂದ 2 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಿ ಜೂನ್ 29 ರೊಳಗೆ ಫಲಿತಾಂಶ ನೀಡಬೇಕು ಎಂದು ರಾಜ್ಯದ ಎಲ್ಲ ವಿವಿಗಳು, ಪದವಿ ಕಾಲೇಜುಗಳಿಗೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಮುಖ್ಯವಾಗಿ ರಾಜ್ಯದ ಎಲ್ಲಾ ವಿವಿಗಳು, ಪದವಿ ಕಾಲೇಜುಗಳಿಗೆ ಈ ವೇಳಾಪಟ್ಟಿ ಅನ್ವಯವಾಗುತ್ತದೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ : ಉಪಸಭಾಪತಿ ಸ್ಥಾನ ಬೇಡವೆಂದ ಪುಟ್ಟರಂಗ ಶೆಟ್ಟಿ