Kuvempu University: ಮಗಳ ಹುಟ್ಟುಹಬ್ಬಕ್ಕೆ ಲೆಟರ್ ಹೆಡ್ ಬಳಸಿ ಸುತ್ತೋಲೆ ಹೊರಡಿಸಿದ ಕುವೆಂಪು ವಿ.ವಿ ಕುಲಪತಿ!! ನೆಟ್ಟಿಗರಿಂದ ಕ್ಲಾಸ್

Vice chancellor of Kuvempu University Issued a circular for his daughter's birthday

Kuvempu university: ತನ್ನ ಮಗಳ ಜನ್ಮದಿನ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸುತ್ತೋಲೆ(Circular) ಹೊರಡಿಸುವ ಮೂಲಕ ಕುವೆಂಪು ವಿಶ್ವವಿದ್ಯಾಲಯದ(Kuvempu university) ಕುಲಪತಿ(VC) ಪ್ರೊ.ಬಿ.ಪಿ.ವೀರಭದ್ರಪ್ಪ(Pr. B P Veerapadrappa) ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಮೇ 28ರಂದು ಮಗಳು ಬಿ.ವಿ.ಆಕಾಂಕ್ಷ(B V Akanksha) ಅವರ ಹುಟ್ಟುಹಬ್ಬದ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕುಲಪತಿ ಆಹ್ವಾನಿಸಿದ್ದಾರೆ. ಅದಕ್ಕಾಗಿ ವಿಶ್ವವಿದ್ಯಾಲಯದ ಅಧಿಕೃತ ಲೆಟರ್ ಹೆಡ್‌ನಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಅದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

Kuvempu University

ಅಂದಹಾಗೆ ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ರಾಜಕಾರಣಿ ಆಗಿರಲಿ, ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ಖಾಸಗಿಯಾಗಿಯೇ ಆಹ್ವಾನ ನೀಡುತ್ತಾರೆಯೇ ಹೊರತು, ಸರ್ಕಾರದ ಲೆಟರ್‌ಹೆಡ್‌ನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಆದರೆ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಮ್ಮ ಮಗಳ ಹುಟ್ಟುಹಬ್ಬಕ್ಕೆ ಸರ್ಕಾರದ ಲೆಟರ್‌ಹೆಡ್‌ನಲ್ಲಿ ಸುತ್ತೋಲೆ ಹೊರಡಿಸಿ ಆಹ್ವಾನ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ವಿವಿಯ ಕುಲಪತಿ‌ ಹೊರಡಿಸಿರುವ ಸುತ್ತೋಲೆ ಪತ್ರ ಎಲ್ಲೆಡೆ ವೈರಲ್ ಆಗಿದ್ದು, ಪರ-ವಿರೋಧಗಳ ಮಾತು ಕೇಳಿಬರುತ್ತಿದೆ. ಅಲ್ಲದೆ ಈ ಮೂಲಕ ಕುಲಪತಿಯವರು ಎಡವಟ್ಟು ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. ಅಲ್ಲದೆ ಕುಲಪತಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು, ವೈಯುಕ್ತಿಕ ಆಹ್ವಾನಕ್ಕೆ ವಿಶ್ವವಿದ್ಯಾಲಯದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪ್ರೊ.ಬಿ.ವಿ.ವೀರಭದ್ರಪ್ಪ ‘ಅದು ಸುತ್ತೋಲೆಯಲ್ಲ. ಕರೆಯೋಲೆ ಮಾತ್ರ. ವಿವಿಯ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗಳನ್ನು ಹರಸಲಿ ಎಂಬ ಉದ್ದೇಶದಿಂದ ಆತ್ಮೀಯವಾಗಿ ಕರೆದಿದ್ದೆನು. ಹೀಗಾಗಿ ಅದನ್ನು ವಿವಾದವಾಗಿಸುವ ಅಗತ್ಯವಿಲ್ಲ’ ಎಂದಿದ್ದಾರೆ.

ಇದುವರೆಗೂ ಹಲವಾರು ಕುಲಪತಿಗಳನ್ನು ಕುವೆಂಪು ವಿಶ್ವವಿದ್ಯಾಲಯ ಕಂಡಿದೆ. ಹಿಂದಿನ ಯಾವೊಬ್ಬ ಕುಲಪತಿಯೂ ಇಂತಹ ಸುತ್ತೋಲೆ ಹೊರಡಿಸಿರಲಿಲ್ಲ. ಇದೀಗ ಕುಲಪತಿ ವೀರಭದ್ರಪ್ಪ ಅವರು ಸುತ್ತೋಲೆ ಹೊರಡಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕುಲಪತಿಗಳ ಸುತ್ತೋಲೆ ಮೇರೆಗೆ ಹಲವರು ನೌಕರರು, ಅಧ್ಯಾಪಕರು ಸಂತೋಷಕೂಟದಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Cabinet Ministers: ಸಿದ್ದು ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಲ್ಲೋಲ ಕಲ್ಲೋಲ! ರಾಜೀನಾಮೆ ನೀಡಲು ಮುಂದಾದ ಇಬ್ಬರು ಸಚಿವರು!!

Leave A Reply

Your email address will not be published.