Balayya hit Srileela on the cheek: ಮುತ್ತಿಟ್ಟದ್ದಕ್ಕೆ ಶ್ರೀಲೀಲಾಳ ಕೆನ್ನೆಗೆ ಬಾರಿಸಿದ ಬಾಲಯ್ಯ!! ಸೆಟ್‌ನಲ್ಲಿ ಕಣ್ಣೀರು ಹಾಕಿ ಹೊರ ನಡೆದ ಕನ್ನಡದ ‘ಕಿಸ್’ ಬೆಡಗಿ!!

Balayya hit Srileela on the cheek

Balayya hit Srileela:  ತೆಲುಗಿನ (Telugu) ಖ್ಯಾತ ನಟ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ (Srileela) ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ಶೂಟಿಂಗ್(Shooting) ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ(Balayya hit Srileela) ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ.

ಹೌದು, ತೆಲುಗು ನಟ ಬಾಲಕೃಷ್ಣ ತಮ್ಮ ಜಬರ್ದಸ್ತ್ ಪಾತ್ರಗಳು ಹಾಗೂ ಬಿಲ್ಡಪ್ ಸನ್ನಿವೇಶಗಳಿಂದ ಫೇಮಸ್. ನೇರ ನಡೆ ನುಡಿಯ ಬಾಲಯ್ಯ ಕೋಪ ಬಂದಾಗ ಅಭಿಮಾನಿಗಳ ಕೆನ್ನೆಗೆ ಬಾರಿಸಿದ ಘಟನೆಗಳು ಕೂಡ ನಡೆದಿದೆ. ಇದೀಗ ಕನ್ನಡ ನಟಿ ಶ್ರೀಲೀಲಾಗೂ(Srileela) ಬಾಲಯ್ಯ(Balayya) ಕಪಾಳಮೋಕ್ಷ ಮಾಡಿರುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. NBK108 ಚಿತ್ರದಲ್ಲಿ ಬಾಲಕೃಷ್ಣ ಜೊತೆ ಶ್ರೀಲೀಲಾ ನಟಿಸ್ತಿದ್ದಾರೆ. ಬಾಲಯ್ಯ ಆಪ್ತರ ಜೊತೆ ಸದಾ ಖುಷಿಖುಷಿಯಾಗಿ ಇರ್ತಾರೆ. ಆದರೆ ಕೆಲವೊಮ್ಮೆ ಇದ್ದಕ್ಕಿಂದಂತೆ ಗರಂ ಆಗಿಬಿಡ್ತಾರೆ. ಇದೀಗ ಬಾಲಕೃಷ್ಣ ಆಕ್ರೋಶಕ್ಕೆ ನಟಿ ಶ್ರೀಲೀಲಾ ಗುರಿಯಾಗಿದ್ದಾರೆ. ಇದೀಗ ಬಾಲಯ್ಯ ಶ್ರೀ ಲೀಲಾಗೆ ಕಪಾಳಮೋಕ್ಷ ಮಾಡಿದ್ದು ಆಕೆ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಅನಿಲ್‌ ರಾವಿಪುಡಿ(Anil Ravipudi) ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಕೃಷ್ಣ ಅವರು ನಟಿಸಿರುವ NBK108 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾ ನಾಯಕಿಯಾಗಿ ಕಾಜಲ್‌ ಅವಗರವಾಲ್‌ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಶ್ರೀಲೀಲಾ ಬಾಲಯ್ಯ ಅವರ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ.

ನಟಿ ಶ್ರೀಲೀಲಾ ಶೂಟಿಂಗ್‌ ಸೆಟ್‌ನಲ್ಲಿ(Shooting set)ಮುತ್ತು ಕೊಟ್ಟಿದಕ್ಕೆ ಬಾಲಕೃಷ್ಣ ಅವರು ಅವರಿಗೆ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೇ ಇದು ರೀಲಾ ಅಥವಾ ರಿಯಲೋ ಅನ್ನೋದೆ ಎಲ್ಲರ ಪ್ರಶ್ನೆ. ಹೌದು ಸಿನಿಮಾ ಒಂದರಲ್ಲಿ ಶ್ರೀಲೀಲಾ ಕೆನ್ನೆಗೆ ನಟ ಬಾಲಯ್ಯ ಅವರು ಬಾರಿಸುವ ಸನ್ನಿವೇಶವನ್ನು ನಿರ್ದೇಶಕರು ಚಿತ್ರೀಸಿದ್ದಾರೆ. ಈ ದೃಶ್ಯ ನೈಜ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ನನಗೆ ನಿಜವಾಗಿಯೇ ಕೆನ್ನೆಗೆ ಬಾರಿಸಿ ಎಂದು ನಟಿ ಶ್ರೀಲೀಲಾ ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಚಿತ್ರೀಕರಣದ ವೇಳೆ ನಿಜವಾಗಿಯೇ ಕೆನ್ನೆಗೆ ಹೊಡೆಯುವಂತೆ ಶ್ರೀಲೀಲಾ ಬಾಲಕೃಷ್ಣ ಬಳಿ ಕೇಳಿಕೊಂಡರಂತೆ. ನಂತರ ಬಾಲಯ್ಯ ನಟಿಯ ಕೆನ್ನೆಗೆ ಜೋತಾಗಿಯೇ ಬಾರಿಸಿದ್ದರಂತೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿ ಒಂದು ಕ್ಷಣ ಸೈಲೆಂಟ್ ಆದರಂತೆ. ಸೀನ್ ಮುಗಿದ ನಂತರ ಕೂಡ ನಿರ್ದೇಶಕರು ಕಟ್ ಹೇಳಲಿಲ್ಲವಂತೆ. ಈ ಸನ್ನಿವೇಶ ಬಹಳ ನೈಜವಾಗಿ ಮೂಡಿ ಬಂದಿದೆ ಎನ್ನಲಾಗ್ತಿದೆ. ಚಿತ್ರೀಕರಣದ ಭಾಗವಾಗಿ ಶ್ರೀಲೀಲಾ ಅಳುತ್ತಾ ಹೊರಟ ಹೋದರಂತೆ. ಶ್ರೀಲೀಲಾ ಅವರ ಬದ್ಧತೆಯನ್ನು ಸೆಟ್‌ನಲ್ಲಿ ಎಲ್ಲರೂ ಕೊಂಡಾಡುತ್ತಿದ್ದಾರೆ.

ಇನ್ನು ಕನ್ನಡ ಸಿನಿಮಾಗಳ(Kannada fimls) ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಸದ್ಯ ತೆಲುಗು ಇಂಡಸ್ಟ್ರಿಗಳಲ್ಲಿ(Tollywood) ಮಿಂಚುತ್ತಿದ್ದು ರಾಮ್, ನಿತಿನ್ ಸಿನಿಮಾಗಳಿಗೆ ನಾಯಕಿಯಾಗಿ ನಟಿಸ್ತಿದ್ದಾರೆ. ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿದ್ದಾರೆ. ಮಹೇಶ್‌ಬಾಬು(Mahesg babu) ಮುಂದಿನ ಚಿತ್ರದಲ್ಲೂ ನಟಿಸೋದು ಕನ್ಫರ್ಮ್ ಆಗಿದೆ. ಇನ್ನು ಇತ್ತೀಚೆಗೆ ವಿಜಯ್ ದೇವರಕೊಂಡ ನಟನೆಯ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದರು. ಜನಾರ್ಧನ ರೆಡ್ಡಿ ಮಗ ಕಿರೀಟಿ ನಟನೆಯ ‘ಜ್ಯೂನಿಯರ್'(Junior) ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಮಾತ್ರ ಕನ್ನಡದಲ್ಲೂ ಬರ್ತಿದೆ. ಉಳಿದಂತೆ ಬಹುತೇಕ ತೆಲುಗು ಸಿನಿಮಾಗಳಲ್ಲೇ ‘ಕಿಸ್’ ಬೆಡಗಿ ಸಖತ್ ಆಗಿ ಮಿಂಚ್ತಿದ್ದಾರೆ.

 

ಇದನ್ನು ಓದಿ:    PM Narendra Modi: ನೂತನ ಸಂಸತ್ತಿನ ವಿಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ನೋಡಿ ಆ ವೈಭವ ! 

 

 

Leave A Reply

Your email address will not be published.