Home Karnataka State Politics Updates Siddaramaiah Cabinet Expansion: ಟಿಕೆಟ್ ಸಿಗಲಿಲ್ಲ, ಎಲೆಕ್ಷನ್ ಗೆಲ್ಲಲಿಲ್ಲ, ವಿಧಾನಸಭೆಯ ಸದಸ್ಯರೂ ಅಲ್ಲ, ಆದ್ರೂ ಸಿಕ್ತು...

Siddaramaiah Cabinet Expansion: ಟಿಕೆಟ್ ಸಿಗಲಿಲ್ಲ, ಎಲೆಕ್ಷನ್ ಗೆಲ್ಲಲಿಲ್ಲ, ವಿಧಾನಸಭೆಯ ಸದಸ್ಯರೂ ಅಲ್ಲ, ಆದ್ರೂ ಸಿಕ್ತು ಇವರಿಗೆ ಮಂತ್ರಿಗಿರಿ! ಸಿದ್ದು ಸರ್ಕಾರದಲ್ಲಿ ಹೀಗೊಂದು ಅಚ್ಚರಿ!!

Siddaramaiah Cabinet Expansion
Image source- Twitter

Hindu neighbor gifts plot of land

Hindu neighbour gifts land to Muslim journalist

Siddaramaiah Cabinet Expansion: ಸಿದ್ದರಾಮಯ್ಯ(Siddaramaiah) ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಗೆ ಕೊನೆಗೂ ಹೈಕಮಾಂಡ್(High command) ಒಪ್ಪಿಗೆ ನೀಡಿದ್ದು, ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವವ ಪಟ್ಟಿ ಬಹಿರಂಗಗೊಂಡಿದೆ. ಆದರೆ ಇದರಲ್ಲಿ ಅಚ್ಚರಿಯೊಂದು ಕಂಡುಬಂದಿದ್ದು, ಟಿಕೆಟ್ ಸಿಗದಿದ್ದರೂ, ಎಲೆಕ್ಷನ್(Election) ಅಲ್ಲಿ ನಿಂತು ಗೆಲ್ಲದಿದ್ದರು, ಸದ್ಯ ವಿಧಾನಸಭಾ ಸದಸ್ಯರೂ(Assembly member) ಕೂಡ ಆಗದಿರುವವರಿಗೆ ಕೊನೆಗೂ ಸಚಿವಸ್ಥಾನ ಸಿಕ್ಕಿದೆ.

ಹೌದು, ಸಿದ್ದರಾಯಯ್ಯನವರ(Siddaramaiah Cabinet Expansion) ಮಂತ್ರಿಮಂಡಲಕ್ಕೆ ವಿಧಾನಸಭಾ ಸದಸ್ಯರೂ ಅಲ್ಲದ, ವಿಧಾನ ಪರಿಷತ್ ಸದಸ್ಯರೂ ಅಲ್ಲದ ರಾಯಚೂರು ಜಿಲ್ಲೆಯ ಮಾನ್ವಿ(Manvi) ತಾಲೂಕಿನ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಎನ್.ಎಸ್. ಬೋಸರಾಜು(N S Bosaraju) ಅವರನ್ನು ಆಯ್ಕೆ ಮಾಡಲಾಗಿದೆ. ಸಂಭಾವ್ಯ 23 ಸಚಿವರಲ್ಲಿ ಅವರೂ ಒಬ್ಬರು ಎಂದು ಮೂಲಗಳು ತಿಳಿಸಿವೆ.

ಇಂದು ಬಹಿರಂಗಗೊಂಡಿರುವ 24 ನೂತನ ಸಚಿವರ ಅಧಿಕೃತ ಪಟ್ಟಿಯಲ್ಲಿ, ಕೆಲವು ಘಟಾನುಘಟಿ ನಾಯಕರ ಹೆಸರೇ ಬಿಟ್ಟುಹೋಗಿದೆ. ಆರ್.ವಿ.ದೇಶಪಾಂಡೆ(R V Deshpande), ಬಿ ಕೆ ಹರಿಪಸ್ರಾದ್(B K hariprasad), ಟಿ.ಬಿ.ಜಯಚಂದ್ರ(T B Jayachandra) ಹಾಗೂ ಸಿಎಂ ಆಪ್ತ ಬಸವರಾಜ ರಾಯರೆಡ್ಡಿ(Basavaraj rayareddy) ಅವರಿಗೂ ಸಚಿವ ಸ್ಥಾನ ಕೈತಪ್ಪಿಹೋಗಿದ್ದರೂ ಬೋಸರಾಜುಗೆ ಸಿಕ್ಕಿದ್ದು ಅಚ್ಚರಿ ಮೂಡಿಸಿದೆ.

ಅಂದಹಾಗೆ ಎಐಸಿಸಿ(AICC) ಕಾರ್ಯದರ್ಶಿಯಾಗಿರುವ ಬೋಸರಾಜು ಅವರಿಗೆ ಇದೇ ವರ್ಷಾಂತ್ಯಕ್ಕೆ ನಡೆಯಲಿರುವ ತೆಲಂಗಾಣ(Telangana) ಚುನಾವಣಾ ಉಸ್ತುವಾರಿ ವಹಿಸಿಕೊಡಲಾಗಿದೆ. ಹಾಗಾಗಿ, ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಖುದ್ದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.

ಬೋಸರಾಜು ಆಯ್ಕೆ ಏಕೆ?
ಬೋಸರಾಜು ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ಗೆ ಎರಡು ಕಾರಣಗಳಿವೆ. ಮಾನ್ವಿಯ ಮಾಜಿ ಶಾಸಕರಾಗಿದ್ದ ಅವರು, ಈ ಬಾರಿ ತಮ್ಮ ಪುತ್ರ ರವಿ ಬೋಸರಾಜು ಅವರಿಗೆ ಟಿಕೆಟ್ ಕೇಳಿದ್ದರು. ಆದರೆ, ಅವರಿಗೆ ಟಿಕೆಟ್ ನೀಡಲಾಗಿರಲಿಲ್ಲ. ಹೈಕಮಾಂಡ್ ಆಣತಿಯ ಮೇರೆಗೆ ಅವರು ಟಿಕೆಟ್ ಬೇಡಿಕೆಯನ್ನು ಬಿಟ್ಟುಕೊಟ್ಟಿದ್ದರು. ಅದೊಂದು ಅನುಕಂಪ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಗೆ ಇದೆ.

ಇದಲ್ಲದೆ, ಬೋಸರಾಜು ಅವರು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಹೊಂದಿದ್ದಾರೆ. ತೆಲಂಗಾಣದಲ್ಲಿ ಇದೇ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ. ಹಾಗಾಗಿ, ಈಗ ಬೋಸರಾಜು ಅವರನ್ನು ಸಚಿವರನ್ನಾಗಿಸಿದರೆ ಅದು ತೆಲಂಗಾಣ ಕಾಂಗ್ರೆಸ್ ನಾಯಕರ ಮೇಲೆ ಒಳ್ಳೆ ಪರಿಣಾಮ ಬೀರುತ್ತದೆ. ಅದರಿಂದ ಅಲ್ಲಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ ಎಂಬ ನಂಬಿಕೆ ಹೈಕಮಾಂಡ್ ನದ್ದು. ಹಾಗಾಗಿಯೇ ಅವರನ್ನು ಕರ್ನಾಟಕದಲ್ಲಿ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

 

ಇದನ್ನು ಓದಿ: BPL ಪಡಿತರ ಚೀಟಿ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್, ಜೂನ್ 1 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ