Mahesh Shetty Timarodi: ಧರ್ಮಸ್ಥಳದಲ್ಲಿ ಆಗಿತ್ತಾ ಶಾಸಕ ಹರೀಶ್ ಪೂಂಜಾಗೆ ಅವಮಾನ ? ” ಏಳಯ್ಯ ಮೇಲೆ, ಯಾರು ನಿನ್ನನ್ನು ಕೂರಕ್ಕೆ ಹೇಳಿದ್ದು?” ಎಂದು ಪೂಂಜಾರನ್ನು ಅವಮಾನಿಸಲಾಗಿತ್ತಾ ?

Mahesh Shetty Timarodi said that MLA Harish Poonja was insulted in Dharamsthala

Mahesh Shetty Timarodi: ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಎದುರು ಹಿಂದೂ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಹಲವು ವಿಶೇಷ ವಿಷಯಗಳನ್ನು ತಿಮರೋಡಿ ಅವರು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಒಂದು, ಧರ್ಮಸ್ಥಳ ಆಡಳಿತಕ್ಕೂ ಶಾಸಕ ಹರೀಶ್ ಪೂಂಜಾ ಅವರಿಗೂ ಯಾವುದೇ ಸಾಮರಸ್ಯ ಇಲ್ಲ ಎನ್ನುವ ಹೊಸ ವಿಚಾರ.

ಇಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಪತ್ರಿಕಾಗೋಷ್ಠಿ ಕರೆದದ್ದು ಶಾಸಕ ಹರೀಶ್ ಪೂಂಜಾ ಅವರು ಚುನಾವಣೆಯಲ್ಲಿ ಗೆದ್ದ ನಂತರ ಅಭಿನಂದನಾ ಸಮಾರಂಭದಲ್ಲಿ, ‘ ಮಹೇಶ್ ಶೆಟ್ಟಿ ತಿಮರೋಡಿಯವರು ದಿನಕ್ಕೆ 200 ಜನಕ್ಕೆ ಕರೆ ಮಾಡಿ ಗಂಟೆಗಟ್ಟಲೆ ಮಾತನಾಡಿ ಕಾಂಗ್ರೆಸ್ ಗೆ ಮತ ಹಾಕಿ ‘ ಎಂದು ಹೇಳಿದ್ದರು. ಇದೇ ರೀತಿ ಇಂದು ನಾಯಕ ಪ್ರವೀಣ್ ವಾಲ್ಕೆ ಮತ್ತು ಸತ್ಯಜಿತ್ ಸುರತ್ಕಲ್ ಬಗ್ಗೆ ಕೂಡ ಕಾಮೆಂಟ್ ಮಾಡಿದ್ದರು ಹರೀಶ್ ಪೂಂಜಾ. ಪ್ರವೀಣ್ ವಾಲ್ಕೆ ಮತ್ತು ಸತ್ಯಜಿತ್ ಸುರತ್ಕಲ್ ಇಬ್ಬರೂ ಎರಡು ದಿನಗಳ ಹಿಂದೆ ಹರೀಶ್ ಪೂಂಜಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇವತ್ತು ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಅವರ ಸರದಿ.

ಹರೀಶ್ ಪೂಂಜಾ ಹಿಂದೂ ವಿರೋಧಿ. ಆತನನ್ನು ಮೇಲೆ ಕೆಲವು ತಲೆ ಸರಿ ಇಲ್ಲದ ಬೆಳ್ತಂಗಡಿಯ ಜನ ಮೆರೆಸುತ್ತಿದ್ದಾರೆ. ನಾಯಕರನ್ನು ಈಗಿನ ಬಿಜೆಪಿ ನಾಯಕತ್ವ ಬದಿಗೆ ಸರಿಸಿದೆ ಎಂದು ವಿಸ್ತೃತ ಪತ್ರಿಕಾಗೋಷ್ಠಿ ನಡೆಸಿದರು ತಿಮರೋಡಿ. ಈ ಸಂದರ್ಭದಲ್ಲಿ ಶಾಸಕ ಪೂಜಾ ಅವರ ಗೋ ಹತ್ಯೆಯ ದ್ವಿಮುಖ ನೀತಿ ಸೌಜನ್ಯ ಪ್ರಕರಣದಲ್ಲಿ ಸದಾನಂದ ಗೌಡ ಇದೀಗ ಅನುಭವಿಸುತ್ತಿರುವ ನೋವು ಇತ್ಯಾದಿ ವಿಷಯಗಳನ್ನು ವಿಷದವಾಗಿ ಹೇಳಿದ್ದರು ಮಹೇಶ್ ಶೆಟ್ರು. ಇದರ ಜತೆಗೆ ಧರ್ಮಸ್ಥಳದ ಆಡಳಿತದವರಿಂದ ಹರೀಶ್ ಪೂಂಜಾ ಗೆ ಆದ ಒಂದು ಅವಮಾನದ ವಿಷಯವನ್ನು ಹೇಳಿದ್ದಾರೆ ಮಹೇಶ್ ಶೆಟ್ಟಿ ತಿಮರೋಡಿ.

“ಧರ್ಮಸ್ಥಳದವರಿಗೂ ಹರೀಶ್ ಪೂಂಜಾಗೂ ಯಾವುದೇ ಸಾಮರಸ್ಯವಿಲ್ಲ. ಧರ್ಮಸ್ಥಳದ ಒಳಗಿನ ಕೆಲವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಲ್ಲಿ ಹರೀಶ್ ಪೂಂಜಾಗೆ ನಯಾ ಪೈಸೆಯ ಬೆಲೆ ಇಲ್ಲ. ಧರ್ಮಸ್ಥಳಕ್ಕೆ ಹೋದಾಗ ಹರೀಶ್ ಪೂಂಜ ಒಂದು ಬಾರಿ ಕೂತಿದ್ದರು. ” ಏಳಯ್ಯ ಮೇಲೆ, ಎದ್ದು ನಿಂತ್ಕೋ. ಯಾರು ನಿನ್ನನ್ನು ಕೂರಕ್ಕೆ ಹೇಳಿದ್ದು ? ಎಂದು ಪೂಂಜಾರನ್ನು ಅವಮಾನಿಸಿದ್ದಾರೆ ಎನ್ನುವ ವಿಚಾರವನ್ನು ತಿಮರೋಡಿ ಹೇಳಿದ್ದಾರೆ.

‘ ಹಿಂದೆ ಹೊರಗಿನ ಜನರಿಗೆ ಧರ್ಮಸ್ಥಳ ಮಾತ್ರ ಗೊತ್ತಿತ್ತು. ಈಗ ಎಲ್ಲರೂ ಬೆಳ್ತಂಗಡಿ ಬಗ್ಗೆ ಮಾತಾಡ್ತಾರೆ ‘ ಎಂದು ಒಂದು ಬಾರಿ ಹರೀಶ್ ಪೂಂಜಾ ಅವರು ಯಾವುದೋ ಸಮಾರಂಭದಲ್ಲಿ ಹೇಳಿಕೆ ನೀಡಿದ್ದರು. ಅದು ಧರ್ಮಸ್ಥಳ ಆಡಳಿತಗಾರರನ್ನು ನೋಯಿಸಿತ್ತು ಎನ್ನಲಾಗಿದೆ. ಒಂದು ಸಲ ಹರೀಶ್ ಪೂಂಜಾ ಧರ್ಮಸ್ಥಳಕ್ಕೆ ಹೋದಾಗ, ” ದಾನೆಯಾ , ದುಂಬು ಧರ್ಮಸ್ಥಳ ಮಾತ್ರ ಗೊತ್ತಿತುಂಡು, ಇತ್ತೆ ಮಾತೆರ್ಲ ಬೆಳ್ತಂಗಡಿ ಪಂಧ್ ಪಾತೆರ್ಬೆರ್ ಪನ್ಪಿನ ಸ್ಟೇಟ್ ಮೆಂಟ್ ಕೊರ್ಪನಾ ? ಏರೆನ್ ಕೇಂದ್ ಸ್ಟೇಟ್ ಮೇಂಟ್ ಕೊರ್ಪಾ ?” (ಏನಯ್ಯ, ಹಿಂದೆ ಧರ್ಮಸ್ಥಳ ಮಾತ್ರ ಗೊತ್ತಿತ್ತು. ಈಗ ಬೆಳ್ತಂಗಡಿ ಹೆಸರು ಹೇಳ್ತಾರೆ ಅಂತ ಸ್ಟೇಟ್ಮೆಂಟ್ ಕೊಡ್ತೀಯಂತೆ ? ಹೇಗೆ ಕೊಟ್ಟೆ ಈ ಸ್ಟೇಟ್ಮೆಂಟ್ ?) ಎಂದು ಹರೀಶ್ ಪೂಂಜಾರನ್ನು ಧರ್ಮಸ್ಥಳದವರು ಅವಮಾನಿಸಿದ್ದಾರೆ ಎಂಬ ತಿಮರೋಡಿ ಸ್ಫೋಟಕ ವಿಷಯವನ್ನು ಹೇಳಿದ್ದಾರೆ. ಈ ಮೂಲಕ ಧರ್ಮಸ್ಥಳಕ್ಕೂ ಶಾಸಕ ಹರೀಶ್ ಪೂಂಜಾ ಅವರಿಗೂ ಸಾಮರಸ್ಯ ಇಲ್ಲ ಎನ್ನುವ ವಿಷಯ ಬಹಿರಂಗವಾಗಿದೆ.

 

ಇದನ್ನು ಓದಿ: Jalil-Masood murder case: ಜಲೀಲ್, ಮಸೂದ್ ಹತ್ಯಾ ಪ್ರಕರಣ ಶೀಘ್ರ SIT ಗೆ ? ರಮಾನಾಥ ರೈರವರ ಇಂದಿನ ಹೇಳಿಕೆ ಸೃಷ್ಟಿಸಿದೆ ಆ ಅನುಮಾನ !

Leave A Reply

Your email address will not be published.