Jalil-Masood murder case: ಜಲೀಲ್, ಮಸೂದ್ ಹತ್ಯಾ ಪ್ರಕರಣ ಶೀಘ್ರ SIT ಗೆ ? ರಮಾನಾಥ ರೈರವರ ಇಂದಿನ ಹೇಳಿಕೆ ಸೃಷ್ಟಿಸಿದೆ ಆ ಅನುಮಾನ !

Jalil, Masood murder case to SIT soon

Jalil-Masood murder case: ಮಂಗಳೂರು: ಕೋಮು ಸೂಕ್ಷ್ಮ ಕರಾವಳಿ ಜಿಲ್ಲೆಯಲ್ಲಿ ನಡೆದಿರುವ ಎಲ್ಲ ಧರ್ಮಾಧಾರಿತ ಮತ್ತು / ಅಥವಾ ರಾಜಕೀಯ ಹತ್ಯೆಗಳ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕೆಂದು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ಅಥವಾ ರಾಜಕೀಯ ಹತ್ಯೆಗಳಲ್ಲಿ ಶರತ್ ಮಡಿವಾಳ, ಅಶ್ರಫ್, ಜಲೀಲ್, ಮಸೂದ್, (Jalil-Masood murder case) ಪ್ರವೀಣ್ ನೆಟ್ಟಾರು ಇನ್ನೂ ಅನೇಕ ಅಮಾಯಕರು ಜೀವ ಕಳೆದುಕೊಂಡಿದ್ದು, ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಗಳ ಕಾರ್ಯಕರ್ತರು ಇರಬಹುದು ಎಂದವರು ಹೇಳಿದ್ದಾರೆ.

ಮಾಜಿ ಮಂತ್ರಿ ರಾಮನಾಥ ರೈ ಅವರ ಹೇಳಿಕೆಯ ಮೂಲಕ ಈ ಎಲ್ಲಾ ಕೊಲೆ ಪ್ರಕರಣಗಳು ಮರು ತನಿಖೆಗೆ ಒಳಪಡುವ ಅನುಮಾನ ಮೂಡಿದೆ. ಮಂಗಳೂರಿನಲ್ಲಿ ಜಲೀಲ ಮತ್ತು ಬೆಳ್ಳಾರೆಯ ಮಸೂದ್ ಹತ್ಯಾ ಪ್ರಕರಣಗಳ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಪೋಷಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಕಣ್ಣೀರು ಕರೆದಿದ್ದರು. ಬಹುಶ: ಇವೆಲ್ಲ ಕೊಲೆ ಪ್ರಕರಣಗಳು ಮರು ತನಿಖೆಗೆ ಒಳಪಡುವ ಸಂಭವವಿದೆ. ಆ ಮೂಲಕ ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ ಎನ್ನುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.

ರಮನಾಥ ರೈ ಅವರು ಹೇಳಿಕೆ ನೀಡಿ, ‘ ಒಬ್ಬರೇ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ನಾನು ಅನೇಕ ಬಾರಿ ಪುನರುಚ್ಚರಿಸಿದ್ದೇನೆ. ಇದನ್ನೂ ಕೂಡ ಗಂಭೀರವಾಗಿ ಪರಿಗಣಿಗಬೇಕಾಗಿದೆ ‘ ಎಂದಿದ್ದಾರೆ. ಇದೀಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಹೆಚ್ಚಿನ ಹತ್ಯಾ ಪ್ರಕರಣಗಳು ಮರು ತನಿಖೆಗೆ ಒಳಪಡುವುದು ಖಚಿತ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು 24 ಹತ್ಯೆ ಮಾಡಿಸಿದ್ದಾರೆ ಎಂದು ಹೇಳಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ಜಿಲ್ಲಾ ಘಟಕ ಮುಂದಾಗಿದೆ. ಈ ಬಗ್ಗೆ ಕೂಡ ತನಿಖೆ ನಡೆಯಬೇಕು ಎಂದು ರೈ ಹೇಳಿದ್ದಾರೆ. ಹೊಸ ಬೆಳವಣಿಗೆಗಳಿಗೆ ಕರ್ನಾಟಕದ ರಾಜಕೀಯ ನಿಧಾನವಾಗಿ ತೆಗೆದುಕೊಳ್ಳುತ್ತಿದೆ.

 

ಇದನ್ನು ಓದಿ: New Parliament Building: ನೂತನ ಸಂಸತ್ ಭವನವನ್ನು ಉದ್ಘಾಟಿಸಬೇಕೆಂದು ಕೋರಿದ ಅರ್ಜಿಗೆ ಹಿನ್ನಡೆ, ಅರ್ಜಿದಾರರಿಗೆ ಮತ್ತು ಬಾಯ್ಕಾಟ್ ಮಾಡಿದ 19 ಪ್ರತಿಪಕ್ಷಗಳಿಗೆ ಮುಖಭಂಗ 

Leave A Reply

Your email address will not be published.