ಕೋಲಾರದಲ್ಲಿ ನಿಲ್ಲದ ಕಲ್ಲು ಗಣಿಗಾರಿಕೆ: ಬ್ಲಾಸ್ಟಿಂಗ್‌ ವೇಳೆ ಕಾರ್ಮಿಕ ಸಾವು, ಮತ್ತೊರ್ವನಿಗೆ ಗಂಭೀರ, 7ಜನರ ಅರೆಸ್ಟ್‌

stone mining in Kolar Worker dies during blasting another seriously injured

Stone mining in Kolar: ಕೋಲಾರ : ಕಲ್ಲು ಗಣಿಗಾರಿಕೆಗಾಗಿ(Stone mining in Kolar) ಬ್ಲಾಸ್ಟಿಂಗ್‌ ವೇಳೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದ ಘಟನೆ ಕೋಲಾರ ತಾಲೂಕಿನ ಕೆ.ಬಿ ಹೊಸಹಳ್ಳಿ ಗ್ರಾಮದ ಬಳಿ ನಡೆದಿದ್ದು, ಗಣಿಗಾರಿಕೆಯಲ್ಲಿ ತೊಡಗಿದ್ದ ಮಾಲೀಕರು ಸೇರಿ 7 ಜನರನ್ನ ಬಂಧಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ ಭಾರೀ ವಿರೋಧದ ನಡುವೆಯೂ ಬ್ಲಾಸ್ಟಿಂಗ್‌ ನಡೆಸಿದ ಅವಘಡ ಸಂಭವಿಸಿದೆ. ನಿನ್ನೆ ರಾತ್ರೋರಾತ್ರಿ ಎಗ್ಗಿಲ್ಲದೇ ಬ್ಲಾಸಿಂಗ್‌ ನಡೆಸುವ ಸಂದರ್ಭದಲ್ಲಿ ಯಾದಗಿರಿ ಮೂಲದ‌ ಕಾರ್ಮಿಕ ಸೋಮು ಜಾಧವ್ ಮೃತಪಟ್ಟಿದ್ದಾರೆ. ಅಲ್ಲದೇ ಮತೊಬ್ಬ ಕಾರ್ಮಿಕ ಗೋಪಿ ಎಂಬುವರಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಯಲಾಗಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಆಗಮಿಸಿ, ಕಲ್ಲು ಬ್ಲಾಸ್ಟಿಂಗ್‌ ನಡೆಸುತ್ತಿದ್ದ ಕಾರ್ಮಿಕರು ಹಾಗೂ ಮಾಲೀಕ ಅಬ್ದುಲ್ ರೆಹಮಾನ್, ಮ್ಯಾನೇಜರ್ ದೇವರಾಜ್ ಸೇರಿದಂತೆ 7 ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿರುವ ಸಾಧ್ಯತೆಯಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರದೇಶ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಹತ್ತಿರವಿರುವ ಕಾರಣ ಮಾರಕವಾಗಿದೆ. ಇದೀಗ ಮತ್ತೆ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ : ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಬರ್ಬರ ಹತ್ಯೆ

Leave A Reply

Your email address will not be published.