Mysore: ಕ್ಷುಲ್ಲಕ ಕಾರಣಕ್ಕೆ ಗಲಾಟೆ : ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಬರ್ಬರ ಹತ್ಯೆ

killing of a woman by hitting her with an iron rod at Mysore

Share the Article

Mysore : ಮೈಸೂರಿನ (Mysore) ಸಿದ್ದಲಿಂಗಪುರ ಗ್ರಾಮದಲ್ಲಿ ನಿನ್ನೆ ಕಬ್ಬಿಣದ ರಾಡ್‌‌ನಿಂದ ಹೊಡೆದು ಮಹಿಳೆಯ ಭೀಕರ ಹತ್ಯೆಗೈದ ದುರಂತ ಘಟನೆ ನಡೆದಿದೆ.

ಮಮತಾ(32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ನಿವಾಸಿಯಾಗಿದ್ದರು. ಕೊಲೆಗೈದ ಆರೋಪಿ ಹಾಸನ ಮೂಲದ ಮೋಹನ್ ಎಂದು ತಿಳಿಯಲಾಗಿದೆ. ಇವರಿಬ್ಬರು ಒಟ್ಟಿಗೆ ಒಂದೇ ಬೇಕರಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು.

ಮಮತಾ ಮದುವೆಯಾಗಿ ಪತಿಯಿಂದ ದೂರ ವಿದ್ದಳು. ಅಲ್ಲದೇ ಮಮತಾ ಮತ್ತು ಮೋಹನ್ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಸ್ಥಳದಲ್ಲೇ ಸ್ನೇಹಿತರಾಗಿದ್ದು, ಆಕೆಯೊಂದಿಗೆ ಸಂಬಂಧವನ್ನು ಹೊಂದಿದ್ದನು, ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಮಾತಿಗೆ ಮಾತು ಬೆಳೆದು ಗಲಾಟೆ ತೀವ್ರಗೊಂಡಿತು.

ಬಳಿಕ ಸಿಟ್ಟುಗೊಂಡ ಮೋಹನ್‌ ಕಬ್ಬಿಣದ ರಾಡ್‌‌ನಿಂದ ಮಮತಾಳ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಹತ್ಯೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೃತ್ಯವೆಸಗಿದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕಡಬ : ಶಾಂತಿಮೊಗರು ಸೇತುವೆಯಿಂದ ಕುಮಾರಧಾರ ನದಿಗೆ ಹಾರಿದ ವ್ಯಕ್ತಿ

Leave A Reply