New Parliament Building: 26,045 ಟನ್ ಉಕ್ಕು ಬೆರೆಸಿ ಕಟ್ಟಿದ ಹೊಸ ಸಂಸತ್ ಕಟ್ಟಡದ ಇನ್ನಷ್ಟು ಇಂಟರೆಸ್ಟಿಂಗ್ ಮಾಹಿತಿ
More interesting information about New Parliament Building
New Parliament Building: ಇದೇ ಬರುವ ರವಿವಾರ (ಮೇ 28) ರಂದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಅಂದು ಭಾರತದ ನೂತನ ಸಂಸತ್ ಭವನವನ್ನು (New Parliament Building) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟ ಸಲಿದ್ದಾರೆ ನೂತನ ಭವನ ಸುಂದರಿಯನ್ನು ಉದ್ಘಾಟಿಸಲು ರಾಷ್ಟ್ರಪತಿಯನ್ನು ಆಹ್ವಾನಿಸಬೇಕು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ ಭವನವನ್ನು ಉದ್ಘಾಟಿಸಬಾರದು ಎಂದು ಒಟ್ಟು 19 ವಿರೋಧ ಪಕ್ಷಗಳು ಖ್ಯಾತ ತೆಗೆದಿದ್ದರೂ ಕೇಂದ್ರ ಸರ್ಕಾರ ಯಾವುದಕ್ಕೂ ಮಣಿಯದೆ ಉದ್ಘಾಟನಾ ಸಮಾರಂಭಕ್ಕೆ ಬರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬೃಹತ್ ಸಂಸತ್ ಭವನ ಹಲವು ಮಹತ್ವಗಳಿಗೆ ಅದ್ಭುತ ಗಳಿಗೆ ಮತ್ತು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಈಗಿನ ಸಂಸತ್ ಭವನವು ಹೆಚ್ಚಿನ ಹಾಸನ ವ್ಯವಸ್ಥೆ ಗಳಿಲ್ಲದೆ ಉಭಯ ಸದನಗಳು ಏಕಕಾಲದಲ್ಲಿ ಸಭೆ ಸೇರುವ ಸಂದರ್ಭದಲ್ಲಿ ಈ ಇಕ್ಕಟ್ಟಾಗಿ ಕುಳಿತುಕೊಳ್ಳುವಂತಾಗುತ್ತಿದೆ. ಅಲ್ಲದೆ, ಈಗಿರುವ ಹಳೆಯದಾಗಿದ್ದು ಇದನ್ನು 1917ರ ಸುಮಾರಿಗೆ ಬ್ರಿಟಿಷರು ನಿರ್ಮಿಸಿದ್ದರು. ಕೇವಲ 83 ಲಕ್ಷ ರೂಪಾಯಿಗಳಲ್ಲಿ ಆಗಿನ ಕಾಲದಲ್ಲಿ ಕಟ್ಟಿದ್ದ ಸಂಸತ್ ಭವನ ಆನಂತರ ಹಲವು ಮಾರ್ಪಾಡುಗಳನ್ನು ಮತ್ತು ಅಂತಸ್ತುಗಳನ್ನು ಹೆಚ್ಚಿಸಿಕೊಂಡು ಕಾಲ ಕಾಲಕ್ಕೆ ಮಾಡಿಫೈ ಆಗುತ್ತದೆ ಬಂದಿತ್ತು. ಆದರೂ ಅವಾಗವಾಗ ಸ್ಥಳಾವಕಾಶದ ಕೊರತೆ ಎದುರಿಸುತ್ತಲೇ ಇತ್ತು. ಇದನ್ನೆಲ್ಲಾ ಮನಗಂಡ ಪ್ರಧಾನಿ ನರೇಂದ್ರ ಮೋದಿಯವರು ಒಂದು ಬೃಹತ್ ಸಂಸತ್ ಭವನವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡು ಇದೀಗ ಎರಡುವರೆ ವರ್ಷಗಳ ನಿರಂತರ ಸಮರೋಪಾದಿಯ ಕೆಲಸ ಕಾರ್ಯಗಳನ್ನು ಸಂಸತ್ ಭವನ ಹೆಮ್ಮೆಯಿಂದ ಎದ್ದು ನಿಂತಿದೆ.
900 ಕೋಟಿ ರೂಪಾಯಿಗಳ ವೆಚ್ಚದ ಈ ಸಂಸತ್ ಭವನವನ್ನು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಟಾಟಾ ಕಂಪನಿ ನಿರ್ಮಿಸಿದೆ. ಒಟ್ಟು ಮೂರು ಬಾಗಿಲುಗಳನ್ನು ಹೊಂದಿರುವ ಈ ನಾಲ್ಕು ಅಂತಸ್ತಿನ ಸಂಸತ್ ಭವನದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಿದ್ದು ಹೈಟೆಕ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸಂಸತ್ ಭಾವನಾದ ಹೊರಗೆ 900 ಕ್ಕೂ ಹೆಚ್ಚು ವಾಹನಗಳನ್ನು ಏಕಕಾಲದಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸರಿಸುಮಾರು 1250 ಆಸನಗಳ ಬೃಹತ್ ವ್ಯವಸ್ಥೆ, ಈ ಸಂಸತ್ ಭವನದ ಒಂದು ವಿಶೇಷ.
ಈಗಿನ ಸಂಸತ್ತಿನ ಭವನದ ಪಕ್ಕದಲ್ಲಿ ಕುಳಿತಿರುವ ಹೊಸ ಕಟ್ಟಡವು ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 300 ಸಂಸದರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಇದು ಈಗಿನ ಸಂಸತ್ ಭವನದಲ್ಲಿ ಕೇವಲ 543 ಮಂದಿ ಲೋಕಸಭಾ ಸದಸ್ಯರು ಮತ್ತು 250 ರಾಜ್ಯಸಭಾ ಸಂಸದರು ಮಾತ್ರ ಕುಳಿತುಕೊಳ್ಳುವ ಅವಕಾಶವಿದೆ.
ಈ ಐತಿಹಾಸದ ಭವನದ ಒಂದಷ್ಟು ಟೆಕ್ನಿಕಲ್ ವಿಷಯಗಳು ಇಲ್ಲಿವೆ ನೋಡಿ.
ಬಿಲ್ಟ್-ಅಪ್ ಪ್ರದೇಶ: 58,700 ಚದರ ಮೀ (ಹಿಂದಿನ 24,281 ಚದರ ಮೀಟರ್‌ಗಿಂತ ಎರಡು ಪಟ್ಟು ಹೆಚ್ಚಾಗಿದೆ).
ಒಟ್ಟು ವಿಸ್ತೀರ್ಣ: 64,500 ಚ.ಮೀ
ಅಂದಾಜು ವೆಚ್ಚ: 971 ಕೋಟಿ ರೂ
ಅಸ್ತಿತ್ವದಲ್ಲಿರುವ ಆಸನ ಸಾಮರ್ಥ್ಯ: 1,224
ಅವಕಾಶ ಕಲ್ಪಿಸಬಹುದಾದ ಹೆಚ್ಚುವರಿ ಆಸನಗಳು: 1,140
ಉದ್ಯೋಗ ಸೃಷ್ಟಿ (ಮಾನವ ದಿನಗಳಲ್ಲಿ): 23,04,095
ಉಕ್ಕಿನ ಬಳಕೆ (ಮೆಟ್ರಿಕ್ ಟನ್‌ಗಳಲ್ಲಿ): 26,045
ಬಳಸಿದ ಸಿಮೆಂಟ್ (ಮೆಟ್ರಿಕ್ ಟನ್‌ಗಳಲ್ಲಿ): 63,807
ಕಟ್ಟಡದಲ್ಲಿ ಪ್ರದರ್ಶನಗೊಂಡ ಕಲಾಕೃತಿಗಳು: 5,000
ಹಳೆಯ ಸಂಸತ್ ಭವನದ ನಿರ್ಮಾಣವು 1921 ರಲ್ಲಿ ಪ್ರಾರಂಭವಾಯಿತು. ಮತ್ತು ಆರು ವರ್ಷಗಳ ನಂತರ 1927 ರಲ್ಲಿ ಮುಕ್ತಾಯಗೊಂಡಿತು. ಈಗ ನೂರು ವರ್ಷಗಳ ನಂತರ ಹೊಸ ಕಟ್ಟಡ ಉದ್ಘಾಟನೆಗೆ ಬರುತ್ತಿದೆ. ಹಳೆಯ ಸಂಸತ್ ಭವನದ ವೆಚ್ಚ ಸುಮಾರು 83 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಹೊಸ ಸಂಸತ್ ಭವನದ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್ ಸ್ಥಾನದ ಪಕ್ಕದಲ್ಲಿ ರಾಜದಂಡ (ಸೆಂಗೋಲ್ ) ಅನ್ನು ಸ್ಥಾಪಿಸಲಾಗುವುದು. ಸೆಂಗೊಳ್ ಅಂದರೆ ರಾಜದಂಡ ಎಂದು ಅರ್ಥ. ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಲಭಿಸಿದಾಗ ಅಧಿಕಾರ ಹಸ್ತಾಂತರದ ದ್ಯೋತಕವಾಗಿ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್, ಜವಾಹರಲಾಲ್ ನೆಹರೂ ಅವರಿಗೆ ನೀಡಿದ್ದ ಸೆಂಗೋಲ್ ಅನ್ನು ನೀಡಿ ಅಧಿಕಾರ ಹಸ್ತಾಂತರವನ್ನು ಮಾಡಿದರು. ಇಲ್ಲಿಯ ತನಕ ಮ್ಯೂಸಿಯಂನಲ್ಲಿ ಇಟ್ಟಿದ್ದ ರಾಜ ದಂಡವನ್ನು ಇನ್ಮುಂದೆ ಹೊಸ ಸಂಸತ್ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದನ್ನು ಸಂಸತ್ ಭವನ ಉದ್ಘಾಟಿಸುವ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೊಸ ಕಟ್ಟಡದೊಳಗೆ ಕೊಂಡೊಯ್ಯಲಿದ್ದಾರೆ.
ಇದನ್ನು ಓದಿ: Liver cancer: ಕಣ್ಣುಗಳು ಹಳದಿ ಬಣ್ಣ, ತುರಿಕೆ ಚರ್ಮ ಯಾವ ರೋಗ ಲಕ್ಷಣ ಗೊತ್ತಾ? ಪಿತ್ತಜನಕಾಂಗದ ಕ್ಯಾನ್ಸರ್, ನಿರ್ಲಕ್ಷಿಸಬೇಡಿ