Sengol: ಹೊಸ ಸಂಸತ್​ ಭವನದಲ್ಲಿ ರಾರಾಜಿಸಲಿದೆ ತಮಿಳುನಾಡಿನ ಚಿನ್ನದ ಸೆಂಗೋಲ್!! ಯಾಕೆ ಗೊತ್ತಾ..? ಏನೀ ರಾಜದಂಡದ ವಿಶೇಷತೆ?

golden Sengol will be placed in the new Parliament House

Sengol: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಮೇ 28ರಂದು ನೂತನ ಸಂಸತ್ ಭವನವನ್ನು (New Parliament Building) ಪ್ರಧಾನಿ ಮೋದಿ (PM Modi)ಯವರು ಉದ್ಘಾಟನೆ ಮಾಡಲಿದ್ದಾರೆ. ಹಾಗೇ, ಹೊಸದಾಗಿ ನಿರ್ಮಾಣವಾದ ಸಂಸತ್​ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್​)ವನ್ನು ಇಡಲಾಗುತ್ತದಂತೆ.

ಹೌದು, ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹೊಸ ಸಂಸತ್ತಿನಲ್ಲಿ ಸ್ಪೀಕರ್ ಸ್ಥಾನದ ಬಳಿ ನರೇಂದ್ರ ಮೋದಿಯವರು ಐತಿಹಾಸಿಕ ಚಿನ್ನದ ರಾಜದಂಡ ‘ಸೆಂಗೊಲ್’ (Sengol) ಇರಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ ಬಳಿಕ ಮಾತನಾಡಿದ ಅವರು ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಗುರುತಿಸಲು ಈ ರಾಜದಂಡವನ್ನು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು(First PM Jawaharlal neharu)ಅವರಿಗೆ ಬ್ರಿಟಿಷ್ ಆಡಳಿತ ಹಸ್ತಾಂತರಿಸಿತ್ತು. ಈ ರಾಜದಂಡವನ್ನು ‘ಸೆಂಗೊಲ್’ ಎಂದು ಕರೆಯಲಾಗುತ್ತದೆ. ಇದು ತಮಿಳು ಪದ ‘ಸೆಮ್ಮೈʼನಿಂದ ಬಂದಿದೆ ಎಂದಿದ್ದಾರೆ.

ಸ್ಪೀಕರ್ ಪೀಠದ ಪಕ್ಕ ಸ್ಥಾಪನೆ: ಲೋಕಸಭೆಯಲ್ಲಿ(Parliament) ಸಭಾಧ್ಯಕ್ಷರು(Speaker) ಕುಳಿತುಕೊಳ್ಳುವ ಪೀಠದ ಪಕ್ಕದಲ್ಲಿ ಸೆಂಗೋಲ್ ಅನ್ನು ನೂತನ ಸಂಸತ್ ಭವನ ಉದ್ಘಾಟನೆಗೊಳ್ಳುವ ಮೇ 28ರಂದು ಸ್ಥಾಪಿಸಲಾಗುತ್ತದೆ.

ಸೆಂಗೊಲ್ ಮಹತ್ವವೇನು?
ಐತಿಹಾಸಿಕ ದಾಖಲೆಗಳ ಪ್ರಕಾರ, ಭಾರತ ಸ್ವತಂತ್ರಗೊಳ್ಳುವ ವೇಳೆ ಅಧಿಕಾರ ಹಸ್ತಾಂತರದ ಸೂಚಕವಾಗಿ ಏನು ನೀಡಬೇಕು ಎಂದು ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂರನ್ನು ಕೇಳುತ್ತಾರೆ. ಆಗ ನೆಹರೂ ದೇಶದ ಕೊನೆಯ ಗವರ್ನರ್ ಜನರಲ್ ಆಗಿದ್ದ ತಮಿಳುನಾಡು ಮೂಲದ ಸಿ. ರಾಜಗೋಪಾಲಾಚಾರಿ ಅವರ ಸಲಹೆ ಕೇಳುತ್ತಾರೆ. ಅಧಿಕಾರಕ್ಕೆ ಬರುವ ಹೊಸ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ತಮಿಳು ಸಂಪ್ರದಾಯದ ಬಗ್ಗೆ ಅವರು ತಿಳಿಸುತ್ತಾರೆ. ಚೋಳರ ಆಳ್ವಿಕೆಯಲ್ಲಿ ಈ ಸಂಪ್ರದಾಯ ಅನುಸರಿಸಲಾಗಿತ್ತು. ಇದರಿಂದ ಬ್ರಿಟಿಷರಿಂದ ಭಾರತದ ಸ್ವಾತಂತ್ರ್ಯವನ್ನು ಗುರುತಿಸಬಹುದು ಎಂದು ರಾಜಾಜಿ ವಿವರಿಸುತ್ತಾರೆ. ಸ್ವಾತಂತ್ರ್ಯದ ಐತಿಹಾಸಿಕ ಕ್ಷಣಕ್ಕಾಗಿ ರಾಜದಂಡದ ವ್ಯವಸ್ಥೆ ಮಾಡಲು ರಾಜಾಜಿ ಅವರಿಗೇ ಜವಾಬ್ದಾರಿ ನೀಡಲಾಗಿತ್ತು. ರಾಜಾಜಿ ತಮಿಳುನಾಡಿನ ತಿರುವಾಡುತುರೈ ಅಥೀನಂ ಎಂಬ ಪ್ರಮುಖ ಮಠವನ್ನು ಸಂಪರ್ಕಿಸುತ್ತಾರೆ. ಮಠದ ಶ್ರೀಗಳು ಈ ಜವಾಬ್ದಾರಿ ಒಪ್ಪಿಕೊಂಡು, ಆಗಿನ ಮದ್ರಾಸಿನಲ್ಲಿ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರಿಗೆ ತಿಳಿಸಿ, ಸೆಂಗೋಲ್ ಅನ್ನು ತಯಾರಿಸುತ್ತಾರೆ.

ಮಧ್ಯರಾತ್ರಿ ಹಸ್ತಾಂತರ: ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್​ಬ್ಯಾಟನ್​ಗೆ ಹಸ್ತಾಂತರಿಸಿ, ನಂತರ ಹಿಂದಕ್ಕೆ ತೆಗೆದು ಕೊಳ್ಳುತ್ತಾರೆ. ಬಳಿಕ ಅದಕ್ಕೆ ಗಂಗಾಜಲ ಸಿಂಪಡಿಸಿ ಮೆರವಣಿಗೆಯಲ್ಲಿ ತಂದು ಪ್ರಧಾನ ಮಂತ್ರಿ ನೆಹರೂ ಅವರಿಗೆ ದೇಶ ಮಧ್ಯರಾತ್ರಿ ಸ್ವಾತಂತ್ರ್ಯ ಹೊಂದುವ 15 ನಿಮಿಷಕ್ಕೆ ಮುನ್ನ ಹಸ್ತಾಂತರ ಮಾಡಲಾಗುತ್ತದೆ. ಆ ಸಂದರ್ಭಕ್ಕೆ ವಿಶೇಷ ಗೀತೆಯೊಂದನ್ನು ಕೂಡ ರಚಿಸಿ, ಮತ್ತಷ್ಟು ಸ್ಮರಣೀಯಗೊಳಿಸಲಾಗಿತ್ತು.

ಹೇಗಿದೆಈ ಸೆಂಗೋಲ್? ಸೆಂಗೋಲ್ ಎಂದು ಕರೆಯಲ್ಪಡುವ ಈ ರಾಜ ದಂಡವು ತಮಿಳು(Tamilu) ಪದ ಸೆಮ್ಮೈನಿಂದ ಹುಟ್ಟಿಕೊಂಡಿತು. ಸೆಮ್ಮೈ(Semmai)ಎಂದರೆ ಸದಾಚಾರ ಎಂದರ್ಥ. ನೋಡಲು ಸುಂದರವಾಗಿರುವ ಈ ಸೆಂಗೋಲ್‌ ಸುಮಾರು ಐದು ಅಡಿ ಉದ್ದವಿದೆ. ನ್ಯಾಯ ಹಾಗೂ ಪರಿಶ್ರಮದ ಸಂಕೇತವಾದ ನಂದಿಯ ಪ್ರತಿಕೃತಿ ಸೆಂಗೋಲ್‌ನ ತುದಿಯಲ್ಲಿದೆ. ಅಂದು ಸೆಂಗೋಲ್‌ ತಯಾರಿಯಲ್ಲಿ ಭಾಗವಹಿಸಿದ್ದ ಇಬ್ಬರು ಕುಶಲಕರ್ಮಿಗಳು ಇಂದಿಗೂ ಜೀವಂತವಿದ್ದಾರೆ. ಅವರೇ ವುಮ್ಮಿಡಿ ಎತ್ತಿರಾಜುಲು (96) ಮತ್ತು ವುಮ್ಮಿಡಿ ಸುಧಾಕರ್ (88).

 

ಇದನ್ನು ಓದಿ: Jio Mart: ಅಂಬಾನಿ ಕಂಪನಿಗೆ ಲೇ ಆಫ್ ಬಿಕ್ಕಟ್ಟು : ಜಿಯೋ ಮಾರ್ಟ್ನಿಂದ 1,000 ಉದ್ಯೋಗಿಗಳ ವಜಾ 

Leave A Reply

Your email address will not be published.