Bhagirathi Murulya: ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಪ್ರವೇಶಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

Sullia MLA Bhagirathi Murulya bowed down to the steps of Vidhana Soudha

Share the Article

Bhagirathi Murulya: ಬೆಂಗಳೂರು : ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸೌಧಕ್ಕೆ ಶಾಸಕಿಯಾಗಿ ಮೊದಲ ಬಾರಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಸುಳ್ಯ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ ಭಾಗೀರಥಿ ಮುರುಳ್ಯ (Bhagirathi Murulya) ಅವರು ಪ್ರವೇಶಿಸಿದರು.

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರೂ ಕೂಡ ಸಂಸತ್‌ಗೆ ಮೊದಲ ಬಾರಿ ಪ್ರವೇಶಿಸುವ ಸಂದರ್ಭದಲ್ಲಿ ಸಂಸತ್‌ನ ಮೆಟ್ಟಿಲುಗಳಿಗೆ ನಮನ ಸಲ್ಲಿಸಿದ್ದರು.

ಪ್ರಧಾನಿ ಮೋದಿಯವರ ಆದರ್ಶವನ್ನು ಅನುಕರಣೆ ಮಾಡಿ ಭಾಗೀರಥಿ ಅವರೂ ಕೂಡ ಮಾದರಿಯಾಗಿದ್ದಾರೆ.

Leave A Reply