Benglore: ಬೆಂಗಳೂರಿನ ಮಳೆಗೆ ಪ್ರವಾಸಕ್ಕೆಂದು ಬಂದಿದ್ದ ಆಂಧ್ರ ಮಹಿಳೆ ಬಲಿ: ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

Andhra woman who had come on a trip to Benglore rains died

Benglore: ಆಂಧ್ರದಿಂದ(Andrapradesh) ಬೆಂಗಳೂರಿಗೆ(Benglore) ಪ್ರವಾಸಕ್ಕೆಂದು ಬಂದಿದ್ದ ಇನ್ಫೋಸಿಸ್(Infosys) ಉದ್ಯೋಗಿಯೊಬ್ಬಳು ಮಳೆಗೆ ಸಿಲುಕಿ, ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ತಡಮಾಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ ಎನ್ನುವ ಆರೋಪ ಕೇಳಿಬಂದಿವೆ.ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಘೋಷಿಸಿದ್ದಾರೆ.

ಹೌದು, ವೃತ್ತದ ಬಳಿಯಿರುವ ಅಂಡರ್‌ಪಾಸ್‌(Under pass)ನಲ್ಲಿ ನಿಂತ ನೀರಿನಲ್ಲಿ ಕಾರು ಸಿಲುಕಿಕೊಂಡು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವತಿಯನ್ನು ಭಾನುರೇಖಾ (22) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಇನ್ಫೋಸಿಸ್​ನ ಉದ್ಯೋಗಿಯಾಗಿದ್ದಳು. ಶಾಲೆ, ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿದ್ದ ಕುಟುಂಬಕ್ಕೆ ಬೆಂಗಳೂರು ತೋರಿಸಲು ಕರೆಯಿಸಿಕೊಂಡಿದ್ದಳು. ಆದ್ರೆ, ಬೆಂಗಳೂರಿನ ಮಹಾಮಳೆಗೆ ಭಾನುರೇಖಾ ದುರಂತ ಅಂತ್ಯಕಂಡಿದ್ದಾಳೆ.

ಏನಿದು ಘಟನೆ?
ಆಂಧ್ರದಿಂದ ಬಂದು ನಗರದ ಪ್ಯಾಲೆಸ್(Pales), ಲಾಲ್‌ಬಾಗ್(Lalbag), ಕಬ್ಬನ್ ಪಾರ್ಕ್(Kabban Park), ವಿಧಾನಸೌದ(Vidhanasowdha) ಸೇರಿದಂತೆ ಹಲವು ಕಡೆ ಪ್ರವಾಸ ಮುಗಿಸಿ ಬಂದಿದ್ದರು. ಕುಟುಂಬದವರು ಕಾರಿನಲ್ಲಿ ತೆರಳುತ್ತಿದ್ದರು. ಭಾರೀ ಮಳೆಯಿಂದಾಗಿ ಕೆಆರ್‌ ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ನೀರು ತುಂಬಿತ್ತು. ತಿಳಿಯದೆಯೇ ಇವರು ಅಂಡರ್‌ಪಾಸ್‌ ಮುಖಾಂತರ ಹಾದುಹೋಗಲು ಕಾರು ಚಾಲನೆ ಮಾಡಿದ್ದಾರೆ. ನೀರು ತುಂಬಿದ್ದರಿಂದ ಕಾರು ಅಲ್ಲೇ ಸಿಲುಕಿಕೊಂಡಿದೆ. ನಂತರ ಇವರು ಹೊರಬರಲು ಕಾರಿನ ಗ್ಲಾಜ್‌ ಇಳಿಸಿದ್ದಾರೆ. ಹೀಗೆ ಮಾಡುತ್ತಿದ್ದಂತೆ ನೀರು ಕಾರಿನೊಳಗಡೆ ನುಗ್ಗಿದೆ.

ಈ ವೇಳೆ ಭಾನುರೇಖಾ ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವನ್ನಪ್ಪಿದ್ದಾರೆ.

ಇನ್ನು ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಘೋಷಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಮೃತ ಮಹಿಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಳೆಯಿಂದ ಸಂಕಷ್ಟಕ್ಕೆ ಸಿಲುಕಿ ಆಸ್ಪತ್ರೆ ಸೇರಿರುವವರ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

 

ಇದನ್ನು ಓದಿ: Periods cramps: ಪೀರಿಯಡ್ಸ್​ ಟೈಮ್​ನಲ್ಲಿ ತುಂಬಾ ಸುಸ್ತಾ? ಈ ಟಿಪ್ಸ್​ ಫಾಲೋ ಮಾಡಿ 

Leave A Reply

Your email address will not be published.