Dr.Bhujanga Shetty Passes away:ನಾರಾಯಣ ನೇತ್ರಾಲಯದ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ಇನ್ನಿಲ್ಲ! :

Dr.Bhujanga Shetty Passes away

ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದ ನಾರಾಯಣ ನೇತ್ರಾಲಯ(Narayana netralaya) ಮುಖ್ಯಸ್ಥ ಹಾಗೂ ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ (Dr. Bhujanga Shetty- 69) ಅವರು ಇಂದು ನಿಧನರಾಗಿದ್ದಾರೆ.

ಹೌದು, ನಾರಾಯಣ ನೇತ್ರಾಲಯದ ಮುಖ್ಯಸ್ಥರೂ ಆಗಿರುವ ಖ್ಯಾತ ನೇತ್ರ ತಜ್ಞ ಡಾ ಕೆ ಭುಜಂಗಶೆಟ್ಟಿ (Dr. K. Bhujang Shetty) ಅವರು ನಿಧನ ಹೊಂದಿದ್ದಾರೆ. ಇಂದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ 6 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತವಾಗಿತ್ತು. ಆಸ್ಪತ್ರೆಯಿಂದ ಮನೆಗೆ ವಾಪಸಾದ ಬಳಿಕ ಹೃದಯಾಘಾತವಾಗಿದ್ದು, ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಅಂದಹಾಗೆ ಕೆ ಭುಜಂಗಶೆಟ್ಟಿ ಅವರು, ಬೆಂಗಳೂರು(Benglore) ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ಅವರು 1978ರಲ್ಲಿ ಎಂಬಿಬಿಎಸ್ ಮಾಡಿದರು. ಅವರು 1982ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರ ರೆಸಿಡೆನ್ಸಿ ಮಾಡಿದರು. ಅವರು ಎಂಬತ್ತರ ದಶಕದಲ್ಲಿ ಒಂದು ಸಣ್ಣ ಚಿಕಿತ್ಸಾಲಯದಲ್ಲಿ ನೇತ್ರಶಾಸ್ತ್ರ ಅಭ್ಯಾಸವನ್ನು ಪ್ರಾರಂಭಿಸಿದರು.

ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪ ವಿಶೇಷತೆಗಳ ಅಭಿವೃದ್ಧಿಗೆ ಅವರು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ ಮತ್ತು ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಒಬ್ಬ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಇಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರಾಗಿದ್ದರು. ಇಂತಹ ಅವರು ಈಗ ಇನ್ನಿಲ್ಲವಾಗಿದ್ದಾರೆ.

Leave A Reply

Your email address will not be published.