Rajanikanth: ಸಿನಿ ರಂಗಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಗುಡ್ ಬೈ? ನಟನೆಯಿಂದ ನಿವೃತ್ತಿ ಪಡೆಯಲಿದ್ದಾರಾ ತಲೈವಾ?

Is Kollywood super star Rajanikanth retired to film industry

Rajanikanth: ರಜನಿಕಾಂತ್‌(Rajanikanth) ಭಾರತೀಯ ಚಿತ್ರರಂಗ ಕಂಡ ಅತಿ ದೊಡ್ಡ ಸೂಪರ್‌ಸ್ಟಾರ್(Super star). ದಕ್ಷಿಣ ಭಾರತ(South India)ದಲ್ಲಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಅಭಿಮಾನಿಗಳು ಇದ್ದಾರೆ. ರಜನಿ ನಟನೆಯ ಸಿನಿಮಾ ರಿಲೀಸ್ ಅಲ್ಲ, ಸಿನಿಮಾ ಅನೌನ್ಸ್(Announce) ಆದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಸಂಭ್ರಮಿಸುತ್ತಾರೆ. ತಮಿಳಿಗರಂತೂ ರಜನಿ ಹುಟ್ಟಿದ ದಿನವನ್ನು ಮನೆಯ ಹಬ್ಬದಂತೆ ಆಚರಿಸುತ್ತಾರೆ. ಆದರೀಗ ರಜನಿ ವಿಚಾರವಾಗಿ ಒಂದು ಗುಸು ಗುಸು ಶುರುವಾಗಿದ್ದು, ರಜನಿಕಾಂತ್ ಸಿನಿ ರಂಗಕ್ಕೆ ಗುಡ್ ಬೈ(Good Bye) ಹೇಳುತ್ತಾರೆ ಅನ್ನೋ ವಿಚಾರ ಹರಿದಾಡುತ್ತಿದೆ.

 

ಹೌದು, ತಲೈವಾ(Talaiva) ಅಭಿಮಾನಿಗಳಿಗೆ ನಿರಾಸೆಯಾಗುವಂತ ಸುದ್ಧಿಯೊಂದು ಹರಿದಾಡುತ್ತಿದ್ದು, ತನ್ನ ಸಿನಿ ಜರ್ನಿಗೆ ಗುಡ್ ಬೈ ಹೇಳಿ, ನಟನೆಯಿಂದ ನಿವೃತ್ತಿ ಪಡೆಯುತ್ತಾರೆಂಬ ವಿಚಾರ ಇದೀಗ ಭಾರೀ ಸದ್ಧುಮಾಡುತ್ತಿದೆ.

ಇದೀಗ ರಜನೀಕಾಂತ್ ಅವರಿಗೆ 72 ವರ್ಷ ವಯಸ್ಸು, ಸಿನಿಮಾ ರಂಗಕ್ಕೆ ಬಂದು 2023ಕ್ಕೆ 48 ವರ್ಷವಾಯಿತು. ಈ ವರ್ಷವೂ ಅವರ ಡೇಟ್ಸ್‌ಗಳು ಈಗಾಗಲೇ ಬುಕ್ ಆಗಿವೆ. ಒಂದು ಸಿನಿಮಾ ಬಿಡುಗಡೆಗೆ ತಯಾರಾಗಿದ್ದರೆ, ಇನ್ನೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಇನ್ನು ಕೆಲವು ಸಿನಿಮಾಗಳ ಬಳಿಕ ತಲೈವಾ ಬಣ್ಣದ ಬದುಕಿಗೆ ಗುಡ್ ಬೈ ಹೇಳುತ್ತಾರಂತೆ!!

ಅಂದಹಾಗೆ ತಮಿಳಿನ(Tamilu) ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್(Director Lokesh kanagaraj)’ಲಿಯೋ'(Liyo) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ನಟಿಸುತ್ತಿರುವ ಈ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಮಧ್ಯೆನೇ ಅವರ ಮುಂದಿನ ಸಿನಿಮಾ ರಜನಿಕಾಂತ್ ಜೊತೆ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಇವರಿಬ್ಬರೂ ಕನ್ಫರ್ಮ್ ಮಾಡಿಲ್ಲ. ವಿಷಯ ಹೀಗಿದ್ದರೂ, ರಜನಿಕಾಂತ್ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡೋದು ಕನ್ಫರ್ಮ್ ಅಂತ ತಮಿಳು ನಟ ಮಿಸ್ಕಿನ್ ರಿವೀಲ್ ಮಾಡಿದ್ದಾರೆ. ಅದೇ ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಸ್ವತ: ರಜನಿಕಾಂತ್ ಅವರೇ ಲೋಕೇಶ್ ಕನಗರಾಜ್ ಅವರನ್ನು ಕರೆದು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ರಜನಿ ನಿವೃತ್ತಿ ಬಗ್ಗೆನೂ ಮಾತಾಡಿದ್ದಾರೆ ಎನ್ನಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಜನಿಕಾಂತ್ ಸಿನಿಮಾದಿಂದ ನಿವೃತ್ತಿ ಪಡೆಯುತ್ತಾರೆ ಅನ್ನೋದು ಅವರ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿ. ಸೂಪರ್‌ಸ್ಟಾರ್ ಸಿನಿಮಾದಿಂದ ದೂರ ಉಳಿಯುತ್ತಾರೆ ಅನ್ನೋದನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಆದರೆ, ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ ಅನ್ನೋದು ಸಮಾಧಾನ ಕೊಟ್ಟಿದೆ.

ಈ ನಡುವೆ ಲೋಕೇಶ್ ಸಹ ಚಿತ್ರವನ್ನ ಭರ್ಜರಿಯಾಗಿ ತಯಾರು ಮಾಡಿಕೊಳ್ಳುತ್ತಿದ್ದಾರೆ. ಕೊನೆಯ ಸಿನಿಮಾದಲ್ಲಿ ರಜನೀಕಾಂತ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಬೇಕಾದ ತಯಾರಿ ಮಾಡ್ತಿದ್ದಾರೆ. ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ತಲೈವಾ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ. ಅಲ್ಲದೆ ತಲೈವಾ ನಟಿಸಿರುವ ಜೈಲರ್, ಲಾಲ್ ಸಲಾಮ್ ಮುಂಬರುವ ಚಿತ್ರಗಳು ಇದಾಗಿದೆ. ನೆಲ್ಸನ್ ಮತ್ತು ಲೋಕೇಶ್ ಕನಗರಾಜ್ ಜೊತೆ ರಜನಿಕಾಂತ್ ಸಿನಿಮಾ ಮಾಡಲಿದ್ದಾರೆ. ಒಂದಿಷ್ಟು ಚಿತ್ರಗಳು ಮಾತುಕತೆಯಲ್ಲಿದೆ.

ಇದನ್ನೂ ಓದಿ:Siddaramaiah’s swearing-in ceremony : ಸಿದ್ದರಾಮಯ್ಯ ಪ್ರಮಾಣವಚನ ಸಮಾರಂಭಕ್ಕೆ ಬರುತ್ತಿದ್ದಾರೆ ಗಣ್ಯಾತಿಗಣ್ಯರು! ಯಾರಿಗೆಲ್ಲಾ ಆಹ್ವಾನ?.. ಇಲ್ಲಿದೆ ನೋಡಿ ಲಿಸ್ಟ್

Leave A Reply

Your email address will not be published.