Kalladka Prabhakar Bhatt: ‘ಕಂಬಳದ ಕೋಣಕ್ಕೆ ಹೊಡೆದರೆ ಶಿಕ್ಷೆ ಯಾಗುವ ಕಾಲದಲ್ಲಿ ಪುತ್ತೂರಿನಲ್ಲಿ ಅಮಾನುಷ ಹಲ್ಲೆ ಖಂಡನೀಯ ‘ – ಕಲ್ಲಡ್ಕ ಪ್ರಭಾಕರ ಭಟ್
Kalladka Prabhakar Bhatt statement on Atrocities to Hindu activists
Kalladka Prabhakar Bhatt: ಪುತ್ತೂರು ಚಪ್ಪಲಿ – ಬ್ಯಾನರ್ ವಿವಾದದ ಬಳಿಕ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhatt) ಭೇಟಿ ಮಾಡಿದರು. ಮುಂದಿನ 5 ವರ್ಷಗಳಲ್ಲಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯದ ಸ್ಯಾಂಪಲ್ ಇದಾಗಿದೆ ಎಂದು ಕಲ್ಲಡ್ಕ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ಬಿಜೆಪಿ ಹೀನಾಯವಾಗಿ ಸೋತ ಕಾರಣ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಎನ್ನಲಾದ ಕೆಲವು ಕಾರ್ಯಕರ್ತರುಗಳು ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡ ಅವರ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿ ಪುತ್ತೂರು ಬಸ್ ಸ್ಟ್ಯಾಂಡ್ ಪಕ್ಕ ಹಾಕಿದ್ದರು. ತದನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ಹಿಗ್ಗಾಮುಗ್ಗ ಥಳಿಸಿದ್ದರು. ಈ ಬಗ್ಗೆ ‘ ಹೊಸ ಕನ್ನಡ ‘ ಪತ್ರಿಕೆಯು ಮೊದಲ ಬಾರಿಗೆ ಕಟು ಟೀಕಾ ವರದಿ ಮಾಡಿದ್ದು, ಇದೀಗ ಕೆಲ ಪೊಲೀಸ್ ಆರೋಪಿಗಳಿಗೆ ಸಸ್ಪೆಂಡ್ ಶಿಕ್ಷೆ ಆಗಿದೆ. ಆದರೆ ಈಗ ಇಡೀ ಪ್ರಕರಣವು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
” ಇದು ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲ. ಹಾಗಿರುವಾಗ ಕಾನೂನು ಕಾಪಾಡುವವರೇ ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ಅಮಾನುಷ ದೌರ್ಜನ್ಯ ಎಸಗಿದ್ದು ಹೇಗೆ ? ಎಂದು ಅವರು ಪ್ರಶ್ನಿಸಿದರು. ಹಿಂದೂ ಕಾರ್ಯಕರ್ತರನ್ನು ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹೊಡೆದಿದ್ದಾರೆ. ನಮ್ಮ ಕಾರ್ಯಕರ್ತರನ್ನು ಪ್ರಾಣಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಇಬ್ಬರು ಪೋಲೀಸರನ್ನು ಅಮಾನತು ಮಾಡಿದ್ದಾರೆ. ಘಟನೆಗೆ ಮೂಲ ಕಾರಣವಾದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು” ಎಂದು ಪ್ರಭಾಕರ ಭಟ್ ರವರು ಒತ್ತಾಯಿಸಿದ್ದಾರೆ.
“ಪೋಲೀಸರು ನಮಗೆ ಒತ್ತಡ ಇತ್ತು ಎನ್ನುತ್ತಾರೆ, ಯಾರ ಒತ್ತಡ ಇದೆ ಅನ್ನೋದನ್ನ ಹೇಳಲಿ. ಬೇರೆ ಯಾರು ಒತ್ತಡ ಮಾಡುತ್ತಾರೆ ? ಈಗಿನ ಕಾಂಗ್ರೆಸ್ ಸರಕಾರವೇ ಒತ್ತಡ ಹಾಕಬೇಕು. ಬಿಜೆಪಿಯವರು ಪೋಲೀಸರ ಮೇಲೆ ಒತ್ತಡ ಹಾಕಲು ಈಗ ಆಗುತ್ತಾ? ಸಣ್ಣಪುಟ್ಟ ವ್ಯತ್ಯಾಸ ಆಗಿದೆ ನಿಜ, ಆದರೆ ಇದಕ್ಕೆ ಇಷ್ಟು ದೊಡ್ಡ ಶಿಕ್ಷೆಯ ಅಗತ್ಯವಿಲ್ಲ. ಪೊಲೀಸರು ಹೀಗೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾದೀತು ” ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಸಿದರು.
ಇದನ್ನೂ ಓದಿ:Gold-Silver Price today: ಚಿನ್ನಾಭರಣ ಪ್ರಿಯರಿಗೆ ಮತ್ತೊಮ್ಮೆ ಖುಷಿಯ ಸುದ್ದಿ! ಚಿನ್ನದ ದರದಲ್ಲಿ ಭಾರೀ ಇಳಿಕೆ!