New Parliament building: ಉದ್ಘಾಟನೆಗೆ ಸಿದ್ಧವಾಯ್ತು ನೂತನ ಸಂಸತ್ ಭವನ! ಇದೇ ಮೇ 28ಕ್ಕೆ ಪ್ರಧಾನಿಯಿಂದ ಲೋಕಾರ್ಪಣೆ!!

PM Narendra Modi inaugurate new Parliament building

New Parliament building: ಸೆಂಟ್ರಲ್ ವಿಸ್ಟಾ(Central Vista) ಮರು ಅಭಿವೃದ್ಧಿ ಯೋಜನಯಡಿ ನಿರ್ವಣವಾಗಿರುವ ಸಂಸತ್ತಿನ ಹೊಸ ಕಟ್ಟಡ ಮೇ 28 ಪ್ರಧಾನಿ ನರೇಂದ್ರ ಮೋದಿ(PM Modi) ಲೋಕಾರ್ಪಣೆಗೊಳಿಸುತ್ತಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೂತನ ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ.

 

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು (New Parliament Building) ಮೇ 28 ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ ತಿಳಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿಯವರನ್ನು ಭೇಟಿ ಮಾಡಿದ ಅವರು, ನೂತನ ಸಂಸತ್ ಭವನ(Parliament House) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಮಧ್ಯೆ, ಹೊಸ ಸಂಸತ್ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಹೊಸ ಕಟ್ಟಡವು ಸ್ವಾವಲಂಬಿ ಭಾರತದ ಚೈತನ್ಯವನ್ನು ಸಂಕೇತಿಸುತ್ತದೆ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ.

2021ರ ಜನವರಿಯಲ್ಲಿ ತ್ರಿಕೋನಾಕೃತಿಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು. 75ನೇ ಸ್ವಾತಂತ್ರ್ಯೋತ್ಸವದ(75th Independence day) ಹೊತ್ತಿಗೆ ಅಂದರೆ 2022ರ ಆಗಸ್ಟ್​ನಲ್ಲಿ ಮುಗಿಸುವ ಯೋಜನೆಯಿತ್ತು. ಆದರೆ, 9 ತಿಂಗಳು ವಿಳಂಬವಾಗಿದೆ.

ಸಂಸತ್‌ ಭವನದ ಹಲವು ವೈಶಿಷ್ಟ್ಯ:
ತ್ರಿಕೋನಾಕಾರದ ಈ ಸಂಸತ್‌ ಕಟ್ಟಡದ ನಿರ್ಮಾಣ 2021ರ ಜನವರಿ 15ರಂದು ಆರಂಭವಾಗಿತ್ತು. 1224 ಸಂಸದರು ಕೂಡಬಲ್ಲ ಸಂಸತ್ತು ಇದಾಗಿದ್ದು, 64,500 ಚದರ ಮೀಟರ್‌ ವ್ಯಾಪ್ತಿಯಲ್ಲಿ ತಲೆಯೆತ್ತಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಹಾಗೂ ಕರ್ಮ ದ್ವಾರ ಎಂಬ 3 ಪ್ರವೇಶ ದ್ವಾರಗಳನ್ನು ಇದು ಹೊಂದಿದೆ. ಸಂಸದರು, ಗಣ್ಯರು ಹಾಗೂ ಸಂದರ್ಶಕರಿಗೆ 3 ಪ್ರತ್ಯೇಕ ದ್ವಾರಗಳಿವೆ.

ಸಾಂವಿಧಾನಿಕ ಹಾಲ್‌ ಎಂಬ ವಿಶಿಷ್ಟವಿಭಾಗವು ಇದರಲ್ಲಿದ್ದು, ದೇಶದ ಶ್ರೀಮಂತ ಪ್ರಜಾಸತ್ತಾತ್ಮಕ ಪರಂಪರೆಯನ್ನು ಇದರಲ್ಲಿ ಪ್ರದರ್ಶಿದಲಾಗಿದೆ. ಸಂವಿಧಾನದ ಮೂಲ ದಾಖಲೆಯ ಪ್ರತಿಯನ್ನೂ ಇಲ್ಲಿ ಇರಿಸಲಾಗಿದೆ. ಗ್ರಂಥಾಲಯ, ಸಮಿತಿಗಳ ಕೋಣೆಗಳು ಹಾಗೂ ಭೋಜನಾಲಯವು ಇದರಲ್ಲಿದೆ. ಮಹಾತ್ಮಾ ಗಾಂಧೀಜಿ, ನೆಹರೂ, ಸುಭಾಷ್‌ ಚಂದ್ರ ಬೋಸ್‌ ಹಾಗೂ ದೇಶದ ಈವರೆಗಿನ ಪ್ರಧಾನಿಗಳ ಚಿತ್ರಗಳು ನೂತನ ಸಂಸತ್‌ ಭವನದಲ್ಲಿವೆ. ಅಂದಹಾಗೆ ಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಯು ರಾಷ್ಟ್ರೀಯ ಫ್ಯಾಷನ್‌ ಟೆಕ್ನಾಲಜಿ ಸಂಸ್ಥೆ ವಿನ್ಯಾಸ ಮಾಡಿರುವ ನೂತನ ಸಮವಸ್ತ್ರ ಧರಿಸಲಿದ್ದಾರೆ.

ಹೊಸ ಭವನದಲ್ಲೇ ಮುಂಗಾರು ಅಧಿವೇಶನ?:
ಜುಲೈನಲ್ಲಿ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನವನ್ನು ಹೊಸ ಭವನದಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದ ಕೊನೆಯಲ್ಲಿ ನಡೆಯಬೇಕಿರುವ ಜಿ-20 ದೇಶಗಳ ಸ್ಪೀಕರ್​​ಗಳ ಸಭೆಯನ್ನು ಹೊಸ ಕಟ್ಟಡದಲ್ಲಿ ಆಯೋಜಿಸುವ ಸಂಭವವಿದೆ.

ಇದನ್ನೂ ಓದಿ:Farhana: ‘ದಿ ಕೇರಳ ಸ್ಟೋರಿ’ ಬೆನ್ನಲ್ಲೇ ವಿವಾದಕ್ಕೆ ಗುರಿಯಾಯ್ತು ತಮಿಳಿನ ಈ ಚಿತ್ರ! ಅಷ್ಟಕ್ಕೂ ಸಿನಿಮಾದಲ್ಲಿ ಏನಿದೆ ಗೊತ್ತಾ?

Leave A Reply

Your email address will not be published.