D K Shivkumar: ಸಿದ್ದು ಸಿಎಂ ಆದ್ರೂ ನೂತನ ಸರ್ಕಾರದಲ್ಲಿ ಡಿಕೆಶಿ ಯೇ ಪವರ್ ಫುಲ್ ಮ್ಯಾನ್! ಯಾಕೆ ಗೊತ್ತಾ?

DK Shivakumar most Powerful leader in CM Siddaramaiha cabinet

D K Shivkumar :ಕರ್ನಾಟಕದಲ್ಲಿ(Karnataka) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್(D K Shivkumar) ಇಬ್ಬರೂ ಮೇರು ನಾಯಕರು ತಮಗೇ ಸಿಎಂ ಪಟ್ಟ ಬೇಕೆಂದು ಪಟ್ಟು ಹಿಡಿದು ಕೂತಿದ್ದರು. ಆದರೀಗ ಈ ಎಲ್ಲಾ ಸಮಸ್ಯೆಗಳೂ ಬಗೆಹರಿದಿದ್ದು, ಸಿದ್ದರಾಮಯ್ಯ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಡಿ ಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ನೂತನ ಸರ್ಕಾರದಲ್ಲಿ ಸಿದ್ದು ಸಿಎಂ ಆದರೂ ಡಿಕೆಶಿ ಯೇ ಪವರ್ ಫುಲ್(Power Full) ಆಗಿದ್ದಾರೆ.

ಹೌದು, ಕರ್ನಾಟಕದಲ್ಲಿ ಇನ್ನೇನು ಬರುವ ಶನಿವಾರ(Saturday) ನೂತನ ಕಾಂಗ್ರೆಸ್(Congress) ಸರ್ಕಾರ ರಚನೆಯಾಗಲಿದೆ. ಈ ನೂತನ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯಗಿಂತ ಮೋಸ್ಟ್ ಪವರ್ ನಾಯಕ ಎಂದರೆ ಡಿಕೆ ಶಿವಕುಮಾರ್ . ಸಿದ್ದುಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದರೆ, ಡಿಕೆ ಶಿವಕುಮಾರ್‌ಗೆ ಉಪ ಮುಖ್ಯಮಂತ್ರಿ(DCM) ಜೊತೆಗೆ ಮತ್ತೊಂದು ಮಹತ್ತರ ಜವಾಬ್ದಾರಿಯೂ ಇರಲಿದೆ.

ಯಾಕೆಂದರೆ ಡಿಕೆ ಶಿವಕುಮಾರ್‌ಗೆ ಕೇವಲ ಡಿಸಿಎಂ(DCM) ಜವಾಬ್ದಾರಿ ಮಾತ್ರವಲ್ಲ, ಈಗಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ಡಿಕೆಶಿ ಕೈಯಲ್ಲೇ ಇರಲಿದೆ. ಹೀಗಾಗಿ ಸಿದ್ದುಗಿಂತ ನೂತನ ಸರ್ಕಾರದಲ್ಲಿ ಡಿಕೆ ಶಿವಕುಮಾರ್(D K Shivkumar) ಮೋಸ್ಟ್ ಪವರ್ ಪುಲ್ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಾಪಾಲ್(K C Venugopal), ಡಿಕೆ ಶಿವಕುಮಾರ್ ಗೆ ನೀಡಿರುವ ಎರಡು ಜವಾಬ್ದಾರಿ ಕುರಿತು ವಿವರಣೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆ(Parliament) ವರೆಗೆ ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಡಿಕೆ ಶಿವಕುಮಾರ್‌ಗೆ ಡಿಸಿಎಂ ಪಟ್ಟದ ಜೊತಗೆ ಪ್ರಬಲ ಖಾತೆಗಳನ್ನು ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇಂಧನ, ನೀರಾವರಿ ಸೇರಿದಂತೆ ಇತರ ಪ್ರಬಲ ಖಾತೆಗಳು ಡಿಕೆಶಿಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ.

ಅಂದಹಾಗೆ ಇದೇ ತಿಂಗಳು 20ರಂದು, ಅಂದರೆ ಬರುವ ಶನಿವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ(Kantirava Stadium) ನೂತನ ಸರ್ಕಾರದ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಮೊದಲ ಹಂತದ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಸಚಿವ ಸ್ಥಾನಕ್ಕೆ ಈಗಿಂದಲೇ ಲಾಭಿಗಳು ಶುರುವಾಗಿದ್ದು, ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪ್ರಮಾಣವಚನಕ್ಕೆ ಭರ್ಜರಿ ಸಿದ್ದತೆ !! ಕಂಠೀರವ ಸ್ಟೇಡಿಯಂ ಕಟೌಟ್‌ ಅಳವಡಿಕೆ!

Leave A Reply

Your email address will not be published.