ಜೀಕನ್ನಡ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳು ಶೀಘ್ರ ಮುಕ್ತಾಯ!!!
These serials airing on Zee Kannada and Colors Kannada will end soon
Zee Kannada- Colors Kannada : ಜನಪ್ರಿಯ ಎಂಟರ್ಟೈನ್ಮೆಂಟ್ ಮೀಡಿಯಾ ಕಲರ್ಸ್ ಕನ್ನಡ(Colors Kannada) ಹಾಗೂ ಜೀ ಕನ್ನಡ (Zee Kannada) ಮಧ್ಯೆ ಈಗ ಹೆಚ್ಚಿನ ಕಾಂಪಿಟೇಷನ್ ಇದೆ. ಜನ ಮೆಚ್ಚುವಂತಹ ಸೀರಿಯಲ್ಗಳು ಈ ಎರಡೂ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಹಾಗೆನೇ ಹೊಸ ಹೊಸ ಧಾರವಾಹಿ ಪ್ರಸಾರ ಆಗಬೇಕೆಂದರೆ ಹಳೇ ಧಾರಾವಾಹಿಗಳು ಮುಗಿಯಲೇಬೇಕು. ಹಾಗಾಗಿ ಜನರಿಗೆ ಬಹಳ ಪ್ರಿಯವಾದದಂತಹ ಎರಡು ಪ್ರಮುಖ ಧಾರಾವಾಹಿಗಳು ಸದ್ಯದಲ್ಲೇ ಕೊನೆಗೊಳ್ಳಲಿದೆ. ಈ ವಿಚಾರ ನಿಜಕ್ಕೂ ಕಿರುತೆರೆ ವೀಕ್ಷಕರಿಗೆ ಬೇಸರ ಮೂಡಿಸಬಹುದು. ಇದರ ಬಗ್ಗೆ ಇಲ್ಲಿದೆ ಮಾಹಿತಿ.
ʼಜೊತೆ ಜೊತೆಯಲಿʼ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಒಂದು ಮಟ್ಟದಲ್ಲಿ ಕಿರುತೆರೆ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಧಾರಾವಾಹಿ ಎಂದರೆ ತಪ್ಪಾಗಲಾರದು. ಈ ಧಾರಾವಾಹಿ ಮೇ.19ರಂದು ಕೊನೆಗೊಳ್ಳಲಿದೆ. ಈಗಾಗಲೇ ಶೂಟಿಂಗ್ ಮುಗಿದು, ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಮೇಘಾ ಶೆಟ್ಟಿ, ಹರೀಶ್ ರಾಜ್ ಅಭಿನಯದ ಈ ಧಾರಾವಾಹಿ ಕೊನೆಗೊಳ್ಳಲಿದೆ. ಇಲ್ಲಿ ಆರ್ಯನ ಪಾತ್ರ ಮಾಡುತ್ತಿದ್ದ ಅನಿರುದ್ಧ ಜತ್ಕರ್ ಅವರ ಕೆಲವೊಂದು ನಡೆಯಿಂದ ಶೂಟಿಂಗ್ ತಂಡ ಬೇಸರಗೊಂಡಿದ್ದು, ಅನಂತರ ದೂರುಗಳೆಲ್ಲ ನಡೆದಿದ್ದು, ನಂತರ ಅನಿರುದ್ಧ ಜತ್ಕರ್ ಈ ಧಾರಾವಾಹಿಯಿಂದ ಹೊರಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾವಿರ ಎಪಿಸೋಡ್ ಪೂರ್ಣಗೊಳಿಸಬೇಕೆಂಬ ಈ ಧಾರಾವಾಹಿ ತಂಡದ ಉದ್ದೇಶ ಆಗಿತ್ತು. ಆದರೆ ಅದು ನೆರವೇರದೆ ಇದೀಗ ಮುಕ್ತಾಯವಾಗಲಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ʼಗಿಣಿರಾಮʼ ಧಾರಾವಾಹಿ ಕೂಡಾ ಬಹಳ ಮೆಚ್ಚುಗೆ ಪಡೆದಂತಹ ಸೀರಿಯಲ್. ಮಹತಿ, ರಿಶ್ವಿಕ್ ಅವರ ಅಭಿನಯದಲ್ಲಿ ಭರಪೂರ ಮನರಂಜನೆಯನ್ನು ನೀಡಿದ ಧಾರಾವಾಹಿಯಾಗಿತ್ತು. ಈ ಧಾರಾವಾಹಿ ಈಗ ತನ್ನ ಟಿಆರ್ಪಿ ಕಳೆದುಕೊಂಡಿದ್ದು, ಹೀಗಾಗಿ ಧಾರಾವಾಹಿ ಕೊನೆಗೊಳ್ಳುತ್ತಿದೆ.
Smart TV: ಫ್ರೀ ಫ್ರೀ ಫ್ರೀ! ಒಂದು ರೂಪಾಯಿಯೂ ಖರ್ಚಾಗಲ್ಲ, 55-ಇಂಚಿನ ಸ್ಮಾರ್ಟ್ ಟಿವಿ ಫ್ರೀ! ಇಲ್ಲಿದೆ ಮಾಹಿತಿ