CET EXAM: ಸಿಇಟಿ ವಿದ್ಯಾರ್ಥಿಗಳೇ, ಅರ್ಜಿ ತಿದ್ದುಪಡಿಗೆ ಕೊನೆ ಅವಕಾಶ ; ಸಂಪೂರ್ಣ ಮಾಹಿತಿ ಇಲ್ಲಿದೆ

CET EXAM Updates in Kannada

CET Exam: ಕೆಇಎ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಸರ್ಕಾರದ ನಿರ್ದೇಶನದಂತೆ 2023ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಿಇಟಿ-2023 ಪರೀಕ್ಷೆಯನ್ನು (CET Exam) ನಿಗದಿತ ದಿನಾಂಕದಂದು ನಡೆಸಲಾಗುವುದು. 20-05-2023 ಮತ್ತು 21-05-2023 ರಂದು ಪ್ರವೇಶ ಪರೀಕ್ಷೆಗಳನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 22-05-2023 ರಂದು ನಡೆಸಲಾಗುವುದು ಎಂದು ತಿಳಿಸಿದೆ.

ಇದೀಗ ಸಿಇಟಿಗೆ ಆನ್’ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊನೆಯ ಅವಕಾಶ ಕಲ್ಪಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 21ರ ಸಂಜೆ 6 ಗಂಟೆಯಿಂದ ಮೇ 24ರ ರಾತ್ರಿ 11:59ರ ವರೆಗೆ ದಾಖಲಿಸಿರುವ ಯಾವುದೇ ಮಾಹಿತಿಯಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಮಾಡಬಹುದಾಗಿದೆ.

ವೆಬ್ಸೈಟ್ –https://kea.kar.nic.in

ಇದನ್ನೂ ಓದಿ:SBI Customers Alert : ‘ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ’ ಎಂಬ ಸಂದೇಶ ನಿಮಗೂ ಬಂದಿದೆಯಾ? ಹಾಗಾದ್ರೆ ಎಚ್ಚರ!! ಸೈಬರ್ ವಂಚನೆಯ ಸಂದೇಶಕ್ಕೆ ಏನು ಮಾಡಬೇಕು?

Leave A Reply

Your email address will not be published.