Assam: ವಿವಾದಿತ ಮಹಿಳಾ ಪೊಲೀಸ್ ಅಧಿಕಾರಿ ರಸ್ತೆ ಅಪಘಾತದಲ್ಲಿ ಸಾವು
Controversial Female police officer dies in road accident in Assam
Assam : ಪೊಲೀಸ್ ಇಲಾಖೆಯಲ್ಲಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿದ್ದ ಅಸ್ಸಾಂ(Assam) ಪೊಲೀಸ್ ಇಲಾಖೆಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಜುನ್ನೋನಿ ರಭಾ ಇಹಲೋಕ ತ್ಯಜಿಸಿದ್ದಾರೆ.
ಜುನ್ನೋನಿ ರಭಾ ಅವರು ಪ್ರಯಾಣಿಸುತ್ತಿದ್ದ ಕಾರು ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ.
ಎರಡು ಜನಪ್ರಿಯ ಪೊಲೀಸ್ ಚಲನಚಿತ್ರಗಳು ತೆರೆ ಕಂಡ ಬಳಿಕ ‘ಲೇಡಿ ಸಿಂಗಂ’ ಅಥವಾ ‘ದಬಾಂಗ್ ಕಾಪ್’ ಎಂದು ಕರೆಸಿಕೊಂಡಿದ್ದ ಜುನ್ನೋನಿ, ಅಪಘಾತ ನಡೆದಾಗ ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಇಲಾಖಾ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಹೇಳಲಾಗಿದ್ದು,ಅಸ್ಸಾಂನ ಕಾಳಿಬೋರ್ ಉಪವಿಭಾಗದ ಸರ್‌ಭುಗಿಯಾ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಜುನ್ನೋನಿ ರಭಾ ಅವರು ಪೊಲೀಸ್ ಇಲಾಖೆ , ಕುಟುಂಬಕ್ಕೆ ಯಾವುದೇ ಮಾಹಿತಿ ನೀಡದೇ ಖಾಸಗಿ ಕಾರಿನಲ್ಲಿ ಉತ್ತರ ಅಸ್ಸಾಂಗೆ ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಮೊರಿಕೊಲಾಂಗ್ ಹೊರಠಾಣೆಯ ಹೊಣೆ ಹೊಂದಿದ್ದ ರಭಾ, ಹಣಕಾಸು ಅವ್ಯವಹಾರಗಳಲ್ಲಿ ಷಾಮೀಲಾಗಿದ್ದವರಿಗೆ ಹಾಗೂ ಇತರ ಅಪರಾಧಿಗಳಿಗೆ ಸಿಂಹಸ್ವಪ್ನ ಎನಿಸಿದ್ದರು.
ಕಳೆದ ಜೂನ್‌ನಲ್ಲಿ ಲಂಚ ಆರೋಪದಿಂದ ಇವರನ್ನು ಬಂಧಿಸಿ, ಸೇವೆಯಿಂದ ಅಮಾನತು ಮಾಡಲಾಗಿತ್ತು. ಅಮಾನತು ರದ್ದಾದ ಬಳಿಕ ಅವರು ಮತ್ತೆ ಸೇವೆಗೆ ಸೇರಿದ್ದರು. 2022ರ ಜನವರಿಯಲ್ಲಿ ಬಿಜೆಪಿ ಶಾಸಕ ಅಮಿಯ ಕುಮಾರ್ ಭುಯಾನ್ ಜತೆಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದ ಸಂದರ್ಭದಲ್ಲಿ ಮತ್ತೆ ವಿವಾದದಲ್ಲಿ ಸಿಲುಕಿದ್ದರು.
ಇದನ್ನೂ ಓದಿ:ಅಕ್ರಮ ಪಟಾಕಿ ಘಟಕದಲ್ಲಿ ತೀವ್ರ ಸ್ಫೋಟ! ಐವರು ಸಾವು, ಏಳು ಮಂದಿ ಗಂಭೀರ