Google Facts: ಗೂಗಲ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಸಂಗತಿಗಳು!!
How much do you know about Google Facts
Google Facts: ಗೂಗಲ್ (Google) ಪ್ರತಿಯೊಬ್ಬರು ಬಳಸುತ್ತೀರಾ! ಜಗತ್ತಿನ ಆಗು-ಹೋಗುಗಳ, ಕೆಲವೊಂದು ಮಾಹಿತಿಗಳನ್ನು ತಿಳಿಯಲು ಹೆಚ್ಚಾಗಿ ಗೂಗಲ್ ಬಳಸುತ್ತಾರೆ. ಆದರೆ, ಗೂಗಲ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ವಿಶ್ವದ ಬಹುತೇಕ ಎಲ್ಲಾ ಮಾಹಿತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ ‘ಗೂಗಲ್’ (Google Facts) ಕುರಿತಾದ ಇಂಟೆರೆಸ್ಟಿಂಗ್ ಸಂಗತಿಗಳು!!
ನಮಗೆ ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕೆಂದಲ್ಲಿ ಕೂಡಲೇ ಗೂಗಲ್ನಲ್ಲಿ ಹುಡುಕುತ್ತೇವೆ. ಅಡ್ರೆಸ್, ವೆಬ್ಸೈಟ್ಸ್, ಮೂವೀಸ್ ಹೀಗೆ ಯಾವುದರ ಬಗ್ಗೆ ಬೇಕಾದರೂ ಗೂಗಲ್ ಸರ್ಚ್ ಮಾಡುತ್ತೇವೆ. ಹೀಗಾಗಿ ಇಂಟರ್ನೆಟ್ನಲ್ಲಿ ಗೂಗಲ್ ಸರ್ಚ್ ನಮ್ಮ ಬೆಸ್ಟ್ ಫ್ರೆಂಡ್ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಗೂಗಲ್ ವಿಶ್ವದ ಅತ್ಯಂತ ಜನಪ್ರಿಯ ವೆಬ್‌ಸೈಟ್. ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್ ಅವರು ಗೂಗಲ್ ಅನ್ನು ಸೆಪ್ಟೆಂಬರ್ 4 1998 ರಂದು ಹುಟ್ಟುಹಾಕಿದರು. ಆರಂಭದಲ್ಲಿ ಗೂಗಲ್ ಕಂಪನಿಗೆ ಬ್ಯಾಕ್ ರಬ್ (BackRub) ಎಂದು ಹೆಸರಿಡಲಾಗಿತ್ತು. ನಂತರ ‘ಗೂಗಲ್’ ಎಂದು ಪ್ರಖ್ಯಾತವಾಯಿತು.
ಗಣಿತ ಶಾಸ್ತ್ರದ ನೂರು ಶೂನ್ಯಗಳನ್ನು ಹೊಂದಿರುವ ಒಂದನ್ನು Google ಎಂದು ಹೇಳಲಾಗುತ್ತದೆ. ಇದನ್ನೇ ಆಧರಿಸಿ ಗೂಗಲ್ ಕಂಪನಿಗೆ ಆ ಹೆಸರು ಬಂತು ಎನ್ನಲಾಗುತ್ತದೆ. ಗೂಗಲ್ ನ ಫುಲ್ ಫಾರ್ಮ್ ‘ಗ್ಲೋಬಲ್ ಆರ್ಗನೈಝೇಶನ್ ಆಫ್ ಓರಿಎಂಟೆಡ್ ಗ್ರೂಪ್ ಲ್ಯಾಂಗ್ವೇಜ್ ಆಫ್ ಅರ್ಥ್ (Global Organisation of Oriented Group Language of Earth) ಆಗಿದೆ.
ಒಂದು ಕಾಲದಲ್ಲಿ ಕೇವಲ 1 ಮಿಲಿಯನ್ ಡಾಲರಿಗೆ ಮಾರಾಟ ಆಗಿಬಿಡಲಿದ್ದ ಗೂಗಲ್ ಇಂದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ಕಂಪೆನಿಯಾಗಿದೆ.
ಒಂದು ವರ್ಷಕ್ಕೆ 20 ಲಕ್ಷಕ್ಕೂ ಹೆಚ್ಚಿನ ಮಂದಿ ಇಲ್ಲಿ ಕೆಲಸಮಾಡಲು ಅರ್ಜಿ ಹಾಕುತ್ತಾರೆ. ಅಂದಾಜೂ $ 120.9 ಬಿಲಿಯನ್‌ಗಿಂತಲೂ ಹೆಚ್ಚು ಒಟ್ಟು ಮೌಲ್ಯವನ್ನು ಗೂಗಲ್ ಒಡೆತನದ ಆಲ್ಫಾಬೀಟ್ ಸಂಸ್ಥೆ ಹೊಂದಿದೆ.
ಇದನ್ನು ಓದಿ: Dhana Yoga: ಧನ ರಾಜಯೋಗ ಬಂದೇ ಬಿಡ್ತು, ಈ ರಾಶಿಯವರ ಲೈಫ್ನಲ್ಲಿ ಫುಲ್ ದುಡ್ಡು!