Rashmika Mandanna: ರಶ್ಮಿಕಾ ನಟನೆಯ ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರ ನಾನು ಚೆನ್ನಾಗಿ ಮಾಡುತ್ತಿದ್ದೆ- ಖ್ಯಾತ ನಟಿಯೋರ್ವಳ ಮಾತು

I would have been a better Srivalli in Pushpa than Rashmika Mandanna

Rashmika Mandanna: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಮುಖ್ಯವಾಗಿ ರಶ್ಮಿಕಾ ಮಂದಣ್ಣ ಮಾಡಿದ ಶ್ರಿವಲ್ಲಿ (Srivalli) ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರ ಪಾತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಟಾಲಿವುಡ್​ ನಟಿಯೊಬ್ಬರು ರಶ್ಮಿಕಾ ಮಂದಣ್ಣ ಬಗ್ಗೆ ಕೊಂಕು ತೆಗೆದಿದ್ದಾರೆ.

 

ಸದ್ಯ ತೆಲುಗು ಬ್ಯೂಟಿ ಐಶ್ವರ್ಯ ರಾಜೇಶ್ ತೆಲುಗು ಸಿನೆಮಾ ತಮಿಳು ಸಿನೆಮಾಗಳಲ್ಲೇ ನಟಿಸಿ ಜನರ ಮನಸು ಗೆದ್ದಿದ್ದಾರೆ. ಅದಲ್ಲದೆ ಕಾಲಿವುಡ್ ನಲ್ಲಿಯೇ ಸ್ಟಾರ್ ಇಮೇಜ್ ಅನ್ನು ಸ್ವಂತ ಮಾಡಿಕೊಂಡಿದ್ದಾರೆ. ಇದೀಗ ಆಕೆ ಪುಷ್ಪಾ ಸಿನೆಮಾದಲ್ಲಿ ರಶ್ಮಿಕಾ ನಟಿಸಿದ ಶ್ರೀವಲ್ಲಿ ಆಕೆಗಿಂತ ಚೆನ್ನಾಗಿ ನಾನು ನಟಿಸುತ್ತಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ.

ರಶ್ಮಿಕಾ ಪಾತ್ರದ ಬಗ್ಗೆ ಐಶ್ವರ್ಯಾ ಕೊಂಕು ತೆಗೆದಿದ್ದು ಅಭಿಮಾನಿಗಳಿಗೆ ಶಾಕ್ ಆಗಿದೆ. ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇರುವ ನಟಿಯರ ಪೈಕಿ ರಶ್ಮಿಕಾ ಮುಂಚೂಣಿಯಲ್ಲಿದ್ದಾರೆ. ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ‘ಪುಷ್ಪ’ ಚಿತ್ರದ ಶ್ರೀವಲ್ಲಿ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಈ ಚಿತ್ರದ ಹಾಡಿನಲ್ಲಿ ಹಾಕಿರೋ ಸ್ಟೆಪ್ ಸಾಕಷ್ಟು ಗಮನ ಸೆಳೆದಿದೆ. ಅನೇಕ ಸೆಲೆಬ್ರಿಟಿಗಳು ಈ ಪಾತ್ರವನ್ನು ಹೊಗಳಿದ್ದಾರೆ.

ಇದೀಗ ತಮಿಳು ಸಿನಿಮಾ ಮಾಡಿ ಫೇಮಸ್ ಆಗಿರುವ ಐಶ್ವರ್ಯಾ ರಾಜೇಶ್ ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಐಶ್ವರ್ಯಾ ರಾಜೇಶ್ ನಟನೆಯ ‘ಫರ್ಹಾನಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ತಮಿಳಿನ ಈ ಸಿನಿಮಾ ಪ್ರಚಾರದಲ್ಲಿ ಐಶ್ವರ್ಯಾ ರಾಜೇಶ್ ಬ್ಯುಸಿ ಆಗಿದ್ದಾರೆ. ಅವರಿಗೆ ತೆಲುಗು ಸಿನಿಮಾ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.. ‘ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರವನ್ನು ನಾನು ಇಷ್ಟಪಟ್ಟಿದ್ದೆ. ರಶ್ಮಿಕಾ ಉತ್ತಮವಾಗಿ ನಟಿಸಿದ್ದಾರೆ. ಆದರೆ, ಅವರಿಗಿಂತ ಉತ್ತಮವಾಗಿ ನಾನು ನಟಿಸುತ್ತಿದ್ದೆ’ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ.

ಸದ್ಯ ಈ ಕುರಿತು ರಶ್ಮಿಕಾ ಅಭಿಮಾನಿಗಳು ಐಶ್ವರ್ಯಾ ಅವರನ್ನು ಟೀಕೆ ಮಾಡುತ್ತಿದ್ದು, ಆ ಪಾತ್ರಕ್ಕೆ ರಶ್ಮಿಕಾ ಸೂಕ್ತ ಎಂದು ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:Man killed Brothers: ಮದುವೆ ಮನೆಯಲ್ಲಿ ಪತ್ನಿ ಜೊತೆ ಸಹೋದರ ಡ್ಯಾನ್ಸ್! ಸಿಟ್ಟಿಗೆದ್ದ ಪತಿ ಮಾಡಿದ ಎರಡು ಕೊಲೆ!

Leave A Reply

Your email address will not be published.