Viral post: ಕಟೀಲರನ್ನು ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ, ಆದ್ರೆ ದಕ್ಷಿಣ ಕನ್ನಡದ ಎಂಪಿ ಮಾಡ್ಬೇಡಿ: ಶ್ರದ್ಧಾಂಜಲಿ ಬ್ಯಾನರ್ ಬೆನ್ನಲ್ಲೇ ನಳಿನ್ ವಿರುದ್ಧ ಮತ್ತೊಂದು ಪೋಸ್ಟರ್ !

Tribute banner and another poster against Nalin Kumar Kateel

Nalin Kumar Kateel: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(karnataka Assembly election) ಕರ್ನಾಟಕದ ಜನತೆ ಆಡಳಿತ ರೂಡ ಬಿಜೆಪಿ(BJP)ಯನ್ನು ಹೀನಾಯವಾಗಿ ಸೋಲಿಸಿ, ಕಾಂಗ್ರೆಸ್(Congress) ಕೈಗೆ ಅಧಿಕಾರದ ಗದ್ದುಗೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ, ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಬಿಜೆಪಿ ಮುಗ್ಗರಿಸಿಬಿಟ್ಟಿದೆ. ಬಿಜೆಪಿಯ ಈ ಸೋಲಿನ ಹೊರೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel) ಇಬ್ಬರೂ ತಾವು ಹೊರುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಈ ಬೆನ್ನಲ್ಲೇ ಮಂಗಳೂರಲ್ಲಿ(Mangalore) ನಳೀನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದೆ.

ಹೌದು, ಮಂಗಳೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಪಕ್ಷದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ವಿವಿಧ ರೀತಿಯ ಪೋಸ್ಟರ್(Poster) ನಳೀನ್ ಕಾಲೆಳೆಯಲು ಕಾರ್ಯಕರ್ತರೇ ಮುಂದಾಗಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಅವರನ್ನು ಬೇಕಾದರೆ ರಾಜ್ಯಸಭಾ ಸದಸ್ಯರಾಗಿ(Rayasabha member) ಮಾಡಿ, ಯಾವುದೋ ರಾಜ್ಯದ ರಾಜ್ಯಪಾಲರಾಗಿ(Governor) ಮಾಡಿ, ಉಪರಾಷ್ಟ್ರಪತಿ ಮಾಡಿ, ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ, ಸಂಪೂರ್ಣ ಸೌರ ಮಂಡಲದ ಅಧ್ಯಕ್ಷರನ್ನಾಗಿ ಮಾಡಿ, ಅಷ್ಟೇ ಅಲ್ಲದೆ ಸಂಪೂರ್ಣ ಬ್ರಹ್ಮಾಂಡದ ಮುಖ್ಯಸ್ಥರನ್ನಾಗಿ ಮಾಡಿ. ಆದರೆ ದಯವಿಟ್ಟು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರನ್ನಾಗಿ ಮಾತ್ರ ಮಾಡಬೇಡಿ” ಎನ್ನುವ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್‌ ಕೆಳಗಡೆ ಜೈ ಮೋದಿಜಿ(Jai BJP), ಜೈ ಬಿಜೆಪಿ ಅಂತಲೂ ಬರೆದುಕೊಂಡಿದ್ದಾರೆ.

ಅಲ್ಲದೆ ಪುತ್ತೂರಿ(Putturu)ನಲ್ಲಿ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆ ಹಿಂದೂ ಮುಖಂಡ ಅರುಣ್ ಪುತ್ತಿಲ(Arun kumar Puttila) ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ ವಿರುದ್ದ 4 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದರು. ಚುನಾವಣೆ ಮುಂಚೆ ಪುತ್ತೂರಿಗಷ್ಟೇ ಸೀಮಿತವಾಗಿದ್ದ ಅರುಣ್ ಕುಮಾರ್ ಅಭಿಮಾನಿ ಬಳಗ ಈಗ ಇಡೀ ಜಿಲ್ಲೆಗೆ ಹಬ್ಬಿದ್ದು ಮುಂದಿನ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಅವರೇ ಆಯ್ಕೆಯಾಗಲಿ, ಅವರನ್ನೇ ಬಿಜೆಪಿ ಕಣಕ್ಕಿಳಿಸಲಿ ಎಂಬ ಕೂಗು ಜೋರಾಗಿದೆ.

ಅಂದಹಾಗೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ಪಡೆದ ಅತೀ ಹೆಚ್ಚಿನ ಮತದ ದಾಖಲೆ ಪುತ್ತಿಲರದ್ದಾಗಿದ್ದು, ಕಾಂಗ್ರೆಸ್ ವಿರುದ್ದ ಕೇವಲ 4 ಸಾವಿರದಷ್ಟು ಮತದ ಅಂತರದ ಸೋಲು ಕಂಡಿದ್ದಾರೆ. ಬಿಜೆಪಿ ಬಾವುಟದ ವಿರುದ್ದ ಭಗವಾಧ್ವಜದಡಿ ಸೆಣಸಾಡಿ ಪುತ್ತಿಲ ಗೆದ್ದಿದ್ದಾರೆ. ಪಕ್ಷೇತರನಾಗಿ ನಿಂತು 62,458 ಮತ ಪಡೆದು ಅರುಣ್ ಪುತ್ತಿಲ ಇತಿಹಾಸ ಬರೆದಿದ್ದು, ಹಿಂದುತ್ವದ ಭದ್ರಕೋಟೆಯಲ್ಲಿ ಪುತ್ತಿಲ ಭರ್ಜರಿ ಸೆಣಸಾಟ ನಡೆಸಿದ್ದರು.ಪಕ್ಷೇತರನಾಗಿ ಸ್ಪರ್ಧಿಸಿ ಪುತ್ತಿಲ ವಿರೋಚಿತ ಸೋಲು ಕಂಡರೂ ಬಿಜೆಪಿ ಭದ್ರಕೋಟೆಯಲ್ಲಿ ಕೊನೆಗೂ ಪುತ್ತಿಲ ಪರ ಅಲೆ ಸಾಬೀತಾಗಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ತವರಲ್ಲೇ ತೊಡೆ ತಟ್ಟಿದ್ದ ಪುತ್ತಿಲ ಹೊಸ ದಾಖಲೆ ಬರೆದಿದ್ದಾರೆ.

ಇನ್ನು ಇದೇ ಪುತ್ತೂರಲ್ಲಿ ಬಿಜೆಪಿ ಸೋಲಿನಿಂದ ಬೇಸತ್ತ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹಾಗೂ ಡಿ.ವಿ.ಸದಾನಂದ(Sadananda Gowda) ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬಸ್‌ ನಿಲ್ದಾಣದ ಬಳಿ ನಡೆದಿದೆ.

 

ಇದನ್ನು ಓದಿ: Mobile Phone Track: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚಲು “ಸಿಇಐಆರ್” ವ್ಯವಸ್ಥೆ ಶೀಘ್ರದಲ್ಲಿ ಜಾರಿ! 

Leave A Reply

Your email address will not be published.