Home Interesting Mobile Phone Track: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚಲು “ಸಿಇಐಆರ್” ವ್ಯವಸ್ಥೆ ಶೀಘ್ರದಲ್ಲಿ ಜಾರಿ!

Mobile Phone Track: ಕಳೆದು ಹೋದ ಮೊಬೈಲ್ ಪತ್ತೆ ಹಚ್ಚಲು “ಸಿಇಐಆರ್” ವ್ಯವಸ್ಥೆ ಶೀಘ್ರದಲ್ಲಿ ಜಾರಿ!

Mobile Phone Track
Image source: Asianet suvarna news

Hindu neighbor gifts plot of land

Hindu neighbour gifts land to Muslim journalist

Mobile Phone Track: ಕಳೆದು ಹೋದ ಮೊಬೈಲ್‌ ಫೋನ್‌ಗಳನ್ನು (Mobile Phone Track) ಪತ್ತೆ ಮಾಡಲು ಹಾಗೂ ಅವುಗಳ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ, ಕಳವಾದ ತಮ್ಮ ಮೊಬೈಲ್ ಫೋನ್‌ಗಳ ಜಾಡು ಹಿಡಿಯಲು ಹಾಗೂ ಅವುಗಳನ್ನು ಬ್ಲಾಕ್ ಮಾಡಲು ಜನರಿಗೆ ಸಾಧ್ಯವಾಗುವಂತೆ ಕೇಂದ್ರ ಸರ್ಕಾರವು ಮೇ 17 ರಂದು ಭಾರತಾದ್ಯಂತ ‘ಸಿಐಐಆರ್’ ಟ್ರ್ಯಾಕಿಂಗ್ ಸ್ಥಾಪನೆಗೆ ತರಲಿದೆಯೆಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದುಹೋದ ಆಪಲ್ ಮೊಬೈಲ್ ಫೋನ್ ತನ್ನ ಆಪಲ್ ಐಡಿ ಮೂಲಕ ಲಭ್ಯವಿರುವುದನ್ನು ಹೊಂದಿದೆ. ಆದರೆ ಆಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಇಂತಹ ವ್ಯವಸ್ಥೆ ಇರುವುದಿಲ್ಲ. ಇನ್ನು ಮುಂದೆ ರಾಷ್ಟ್ರಾದ್ಯಂತ ಸಿಐಆರ್ ವ್ಯವಸ್ಥೆಯಿಂದಾಗಿ ಪ್ರಯೋಜನ ಆಗಲಿದೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಶಾನ್ಯ ಪ್ರಾಂತ ಸೇರಿದಂತೆ ಕೆಲವು ಟೆಲಿಕಾಂ ವರ್ತುಲಗಳಲ್ಲಿ ದೂರಸಂಪರ್ಕ ಇಲಾಖೆ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವು (ಸಿಡಾಟ್) ಸಿಐಐಆರ್ ವ್ಯವಸ್ಥೆಯ ಮೇಲುಸ್ತುವಾರಿ ವಹಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸಿಐಐಆರ್ ವ್ಯವಸ್ಥೆಯು ಮೇ 17ರಂದು ಅಖಿಲ ಭಾರತ ಮಟ್ಟದಲ್ಲಿ ಪ್ರಾರಂಭವಾಗಲಿದೆ” ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ ಸಿಡಾಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಜೆಕ್ಟ್ ಬೋರ್ಡ್ನ ಚೇರ್ಮನ್ ರಾಜಕುಮಾರ್ ಉಪಾಧ್ಯಾಯ ಅವರು ಸಿಐಐಆರ್ ವ್ಯವಸ್ಥೆಯ ಪ್ರಾರಂಭದ ದಿನಾಂಕವನ್ನು ದೃಢಪಡಿಸಲಿಲ್ಲ. ಆದಾಗ್ಯೂ ಈ ತಂತ್ರಜ್ಞಾನವು ಅಖಿಲ ಭಾರತ ಮಟ್ಟದಲ್ಲಿ ನಿಯೋಜನೆಗೆ ಸಿದ್ಧವಾಗಿದೆ ಎಂದು ವರದಿಯಾಗಿದೆ.

“ಸಿಐಆರ್ ವ್ಯವಸ್ಥೆಯು ಕಾರ್ಯನಿರ್ವಹಣೆಗೆ ಸಿದ್ಧವಾಗಿದೆ ಹಾಗೂ ಈ ತ್ರೈಮಾಸಿಕದಲ್ಲಿ ಅದು ಭಾರತದಾದ್ಯಂತ ನಿಯೋಜಿತ ಕಾರ್ಯಕ್ರಮ ಆಗಲಿದೆ . ಇದು ಜನರು ತಮ್ಮ ಕಳೆದುಹೋದ ಮೊಬೈಲ್ ಫೋನನ್ನು ಬ್ಲಾಕ್ ಮಾಡಲು ಮತ್ತು ಅವುಗಳ ಜಾಡು ಹಿಡಿಯಲು ನೆರವಾಗಲಿದೆ” ಎಂದು ಉಪಾಧ್ಯಾಯ ಸೂಚಿಸಿದರು.

ಮೊಬೈಲ್ ಉಪಕರಣದಲ್ಲಿರುವ 15 ಅಂಕಿಗಳ ಐಎಂಐಐಯನ್ನು ಅವುಗಳ ಮಾರಾಟಕ್ಕೆ ಮೊದಲು ಮೊಬೈಲ್ ನೆಟ್‌ವರ್ಕ್‌ಗಳಿಗೆ ತೋರಿಸುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ.

ಸಿಐಐಆರ್ ವ್ಯವಸ್ಥೆಯ ಮೂಲಕ ಮೊಬೈಲ್ ಫೋನ್‌ಗಳ ಐಎಂಐಐ ಸಂಖ್ಯೆ ಮತ್ತು ಅದರ ಜೊತೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ವೀಕ್ಷಿಸಲಾಗುತ್ತದೆ.

ಕಳೆದುಹೋದ ಮೊಬೈಲ್ ಫೋನ್‌ಗಳ ಐಎಂಐ ಸಂಖ್ಯೆಯನ್ನು ಕಿಡಿಗೇಡಿಗಳು ಬದಲಾಯಿಸುವುದು ಸಾಮಾನ್ಯವಾಗಿದ್ದು, ಇಂತಹ ಹ್ಯಾಂಡ್‌ಸೆಟ್‌ಗಳನ್ನು ಕಂಡುಹಿಡಿಯುವುದನ್ನು ಅಥವಾ ಅದನ್ನು ಬ್ಲಾಕ್ ಮಾಡುವುದನ್ನು ತಡೆಯುತ್ತದೆ. ಇದೊಂದು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ.

ಕಳವಾದ ಹಾಗೂ ಕಳೆದುಹೋದ ಮೊಬೈಲ್ ಫೋನ್‌ಗಳ ಬಗ್ಗೆ ದೂರು ನೀಡುವುದನ್ನು ಸುಗಮಗೊಳಿಸುವುದು ಸಿಐಆರ್‌ನ ಮುಖ್ಯ ಉದ್ದೇಶವಾಗಿದೆ ಮತ್ತು ಇದೊಂದು ರಾಷ್ಟ್ರೀಯ ಭದ್ರತಾ ವಿಚಾರವೆಂದು ಅವರು ಹೇಳಿದರು.

ಇತ್ತೀಚೆಗೆ ಕರ್ನಾಟಕ ಸಿಐಐಆರ್ ವ್ಯವಸ್ಥೆ, 2500ಕ್ಕೂ ಅಧಿಕ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ, ಅವರು ಮಾಲಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದೆ ಎಂದು ರಾಜಕುಮಾರ್ ಉಪಾಧ್ಯಯ ಹೇಳಿದ್ದಾರೆ.

 

ಇದನ್ನು ಓದಿ:  Congress: ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಬಿಲ್ ಕಲೆಕ್ಟರ್ ಮುಂದೆ ಪಟ್ಟು ಹಿಡಿದು ಕೂತ ಗ್ರಾಮಸ್ಥರು !