Karnataka Assembly election -ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಬೀಗಿದ, ಸೋತು ಬಾಗಿದ ತಂದೆ-ಮಕ್ಕಳು ಹಾಗೂ ಸಂಬಂಧಿಗಳು ಯಾರ್‍ಯಾರು ಗೊತ್ತಾ?

Assembly election:ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Assembly election) ಹೊರಬಿದ್ದಿದ್ದು ಕಾಂಗ್ರೆಸ್​(Congress) ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಕುಟುಂಬ ರಾಜಕಾರಣ ಹೆಚ್ಚು ಸದ್ದು ಮಾಡಿದೆ.

ಅಂದಹಾಗೆ ಈ ಚುನಾವಣೆಲ್ಲಿ ಅಚ್ಚರಿ ಎಂಬಂತೆ ಹಲವಾರು ಅಪ್ಪ ಮಕ್ಕಳ ಜೋಡಿ ಬೇರೆ ಬೇರೆ ಪಾರ್ಟಿಗಳಿಂದ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಇವರಲ್ಲಿ ಬಹುತೇಕರು ಭರ್ಜರಿ ಜಯಭೇರಿ ಭಾರಿಸಿ, ವಿಧಾನಸಭೆಯನ್ನು ಪ್ರವೇಶಿಸಲು ಮುಂದಾದರೆ, ಇನ್ನು ಕೆಲವು ಅಪ್ಪ ಮಕ್ಕಳ ಜೋಡಿಯಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಹೀಗಾಗಿ ಇಂತಹ ಅಪರೂಪದ ಅಪ್ಪ ಮಕ್ಕಳು ಯಾರ್ಯಾರು, ಎಲ್ಲೆಲ್ಲಿ ಸ್ಪರ್ಧಿಸಿದ್ದರು, ಎಷ್ಟು ಮತಗಳಿಂದ ಸೋಲುಂಡರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಉತ್ತರ-ದಕ್ಷಿಣದಲ್ಲಿ ತಂದೆ ಮಗನದ್ದೇ ಆರ್ಭಟ

ಲಿಂಗಾಯತ ಪ್ರಬಲ ನಾಯಕರಾದ ಶಾಮನೂರು ಶಿವಶಂಕರಪ್ಪ(Shamanuru Shivshankarappa) ದಾವಣಗೆರೆ ದಕ್ಷಿಣದಲ್ಲಿ(Davangere South) ಜಯ ಸಾಧಿಸಿದರೆ, ಮಗ ಎಸ್​ಎಸ್​ ಮಲ್ಲಿಕಾರ್ಜುನ(SS Mallikarjun) ಉತ್ತರ ಕ್ಷೇತ್ರದಲ್ಲಿ(Davangere north) ಜಯ ಸಾಧಿಸಿದ್ದಾರೆ. ಮಲ್ಲಿಕಾರ್ಜುನ 78,345 ಮತಗಳನ್ನು ಪಡೆಯುವ ಗೆಲುವು ಸಾಧಿಸಿದ್ದರೆ, ಮತ್ತೊಂದೆಡೆ ದಕ್ಷಿಣದಲ್ಲಿ ತಂದೆ ಶಾಮನೂರು ಶಿವಶಂಕರಪ್ಪ 83,839 ಅವರು ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 53,428 ಮತಗಳನ್ನು ಪಡೆಯುವ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಸೋಲುಂಡಿದ್ದು, ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ್‌ಕುಮಾರ್ 56,052 ಮತ ಪಡೆದು ಸೋಲುಂಡಿದ್ದಾರೆ‌.

ಡಿರ್ಫೆಂಟ್ ಪಾರ್ಟಿಗಳಿಂದ ಗೆದ್ದು ಬೀಗಿದ ಅಪ್ಪ-ಮಗ

ಅರಕಲಗೂಡು(Arakalagudu) ವಿಧಾನಸಭಾ ಕ್ಷೇತದಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಮಾಜಿ ಸಚಿವ ಎ. ಮಂಜು(A manju) ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿಗಳ ವಿರುದ್ಧ 19,605 ಸಾವಿರ ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. 2021ರಲ್ಲಿ ಮಡಿಕೇರಿ ಕ್ಷೇತ್ರಕ್ಕೆ ನಡೆದ ವಿಧಾನಪರಿಷತ್​ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಎ.ಮಂಜು ಪುತ್ರ ಮಂಥರ್​ ಗೌಡ(Manthar Gowda) ಬಿಜೆಪಿಯ ಅಪ್ಪಚ್ಚು ರಂಜನ್​​(Appacchu Ranjan)ಗೆ ವಿರುದ್ಧ 4,402 ಸಾವಿರ ಮತಗಳ ಅಂತರದಲ್ಲಿ ಜಯದ ನಗೆ ಬೀರಿದ್ದಾರೆ. ಈ ಇಬ್ಬರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಜಯ ಸಾಧಿಸಿರುವುದು ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಜೆಡಿಎಸ್​ ಗೆ ಜೈ ಎಂದ ತಂದೆ-ಮಗ

ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್​(JDS) ಪಕ್ಷಕ್ಕೆ ಈ ಚುನಾವಣೆ ಪ್ರಾಬಲ್ಯ ಹಾಗೂ ಅಸ್ತಿತ್ವದ ಪ್ರಶ್ನೆಯಾಗಿತ್ತು. ಕ್ರಮವಾಗಿ ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್​ನತ್ತ ಮುಖ ಮಾಡಿದ್ದ ಜಿ.ಟಿ. ದೇವೇಗೌಡ(G T Dhevegowda) ಹಾಗೂ ಅವರ ಪುತ್ರ ಹರೀಶ್​ಗೌಡರನ್ನು ಉಳಿಸಿಕೊಳ್ಳುವಲ್ಲಿ ದೊಡ್ಡಗೌಡರು ಯಶಸ್ವಿಯಾಗಿದ್ದರು. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ಟಿ. ದೇವೇಗೌಡ ಕಾಂಗ್ರೆಸ್​ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ 25,500 ಸಾವಿರ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಹುಣಸೂರು(Hunsuru) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಟಿಡಿ ಪುತ್ರ ಹರೀಶ್​ ಗೌಡ(Harish Gowda) ಕಾಂಗ್ರೆಸ್​ ಅಭ್ಯರ್ಥಿ ಹೆಚ್​.ಪಿ. ಮಂಜುನಾಥ್​ ವಿರುದ್ಧ 2,412 ಸಾವಿರ ಮತಗಳ ಅಂತದರಲ್ಲಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್​ ಪಕ್ಷದ ಮಾನ ಮರ್ಯಾದೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯದ ಮಾಲೆ ಹಾಕಿಸಿಕೊಂಡ ಕೃಷ್ಣಪ್ಪ- ಪ್ರಿಯ

ಬೆಂಗಳೂರಿನ ವಿಜಯ ನಗರದಲ್ಲಿ ಕ್ಷೇತ್ರದಲ್ಲಿ ಟಿಕೆಟ್ ಪಡೆದಿದ್ದ ಕೃಷ್ಣಪ್ಪ(Krishnappa) ಗೆಲುವು ಸಾಧಿಸಿದ್ದರೆ, ಮಗ ಪ್ರಿಯಕೃಷ್ಣ(Priya Krishna) ಗೋವಿಂದ ರಾಜ ನಗರದಲ್ಲಿ ಜಯ ಸಾಧಿಸಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಂ.ಕೃಷ್ಣಪ್ಪ ಬಿಜೆಪಿ ಅಭ್ಯರ್ಥಿ ಹೆಚ್​. ರವೀಂದ್ರ ವಿರುದ್ಧ 8,900 ಅಂತರದಲ್ಲಿ ಜಯದ ನಗೆ ಬೀರಿದ್ದಾರೆ. ಗೋವಿಂದರಾಜನಗರದಲ್ಲಿ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿದ್ದ ಪ್ರಿಯಾಕೃಷ್ಣ ಬಿಜೆಪಿ ಪಕ್ಷದ ಹುರಿಯಾಳು ಮಾಜಿ ಕಾರ್ಪೋರೇಟರ್​ ಉಮೇಶ್​ ಶೆಟ್ಟಿ ವಿರುದ್ಧ 12,516 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

ಬೆಂಗಳೂರಿನಲ್ಲಿ ಹವಾ ಕ್ರಿಯೇಟ್ ಮಾಡಿದ ತಂದೆ ಮಗಳು

ಕಾಂಗ್ರೆಸ್​ ಹಿರಿಯ ನಾಯಕ ರಾಮಲಿಂಗ ರೆಡ್ಡಿ(Ramalinga Reddy) ಬಿಟಿಎಂ ಲೇಔಟ್​ನಲ್ಲಿ ಹಾಗೂ ಅವರು ಮಗಳು ಜಯ ನಗರದಲ್ಲಿ ಜಯ ಸಾಧಿಸಿದ್ದಾರೆ. ಬಿಟಿಎಂ ಲೇಔಟ್​ ಹಾಗೂ ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಬಿಜೆಪಿ ಅಭ್ಯರ್ಥಿ ಶ್ರೀಧರ್​ ರೆಡ್ಡಿ ವಿರುದ್ಧ 9,222 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಎರಡನೇ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಸೌಮ್ಯ ರೆಡ್ಡಿ(Sowmya Reddy) ಬಿಜೆಪಿಯ ಸಿ.ಕೆ. ರಾಮಮೂರ್ತಿ ವಿರುದ್ಧ 150 ಮತಗಳ ಅಂತರದಲ್ಲಿ ಪ್ರಯಾಸಕರ ಗೆಲುವು ಸಾಧಿಸಿದ್ದಾರೆ. ಈ ಇಬ್ಬರು ನಾಯಕರು ತಂದೆ ಮಗಳು ಎನ್ನುವುದು ವಿಶೇಷ.

ಕೆಎಚ್​ ಮುನಿಯಪ್ಪ – ರೂಪ ಶಶೀಧರ್​ಗೆ ಗೆಲುವು

ಜೆಡಿಎಸ್ ಪ್ರಾಬಲ್ಯ ಹೊಂದಿದ್ದ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ(Muniyappa) 4631 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಕೆಜಿಎಫ್ ಕ್ಷೇತ್ರದಲ್ಲಿ ಅವರ ಮಗಳು ರೂಪಾ ಶಶಿಧರ್(Roopa Shashidhar) ಗೆಲುವಿನ ನಗೆ ಬೀರಿದ್ದಾರೆ.

ಗೆದ್ದು ಭೀಗಿದ ತಂದೆ, ಸೋತು ಭಾಗಿದ ಮಗ

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ(HD kumaraswamy) ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ನಡುವಿನ ಜಿದ್ದಾಜಿದ್ದಿನ ಕಣ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಚನ್ನಪಟ್ಟಣದಲ್ಲಿ ಮತ ಎಣಿಕೆ ಮುಕ್ತಾಯದ ವೇಳೆ 15,974 ಮತಗಳ ಅಂತರದಿಂದ ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಬಿಜೆಪಿಯ ಸಿಪಿ ಯೋಗೇಶ್ವರ್‌ ವಿರುದ್ಧ ಗೆಲುವು ಕಂಡಿದ್ದಾರೆ. ಅಂದಹಾಗೆ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ(Nikhil Kumarswamy) ಸ್ಪರ್ಧೆಯಿಂದಾಗಿ ಭಾರೀ ಕುತೂಹಲ ಕೆರಳಿಸಿದ್ದ ರಾಮನಗರ ಕ್ಷೇತ್ರದಲ್ಲಿ ಅವರು ಹೀನಾಯ ಸೋಲು ಕಂಡಿದ್ದಾರೆ. ಇಲ್ಲಿ ನಿಖಿಲ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್‌ನ ಇಕ್ಬಾಲ್‌ ಹುಸೇನ್‌ ಗೆಲುವು ಕಂಡಿದ್ದಾರೆ. ಈ ಮೂಲಕ ತಮ್ಮ ತಂದೆಯ ಭದ್ರಕೋಟೆಯಲ್ಲಿಯೇ ನಿಖಿಲ್‌ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ.

ಗೆಲುವಿನ ನಗೆ ಬೀರಿದ ಗಂಡ, ಸೋತು ಸುಮ್ಮನಾದ ಹೆಂಡತಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ(Janrdhan reddy) 8268 ಮತಗಳಿಂದ ಗೆಲುವಿನ ಗೋಲು ಹೊಡೆದಿದ್ದಾರೆ. ರೆಡ್ಡಿ ಒಟ್ಟು 65791 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 57674 ಹಾಗೂ‌ ಬಿಜೆಪಿಯ ಪರಣ್ಣ ಮುನವಳ್ಳಿ 29918 ಮತಗಳನ್ನು ಗಳಿಸಿದರು. ಇನ್ನು ಬಳ್ಳಾರಿ ನಗರದಲ್ಲಿ ಸ್ಪರ್ಧಿಸಿದ್ದ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ(ಕೆಆರ್‌ಪಿಪಿ) ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ವಿರುದ್ಧ ಸೋಲುಂಡಿದ್ದಾರೆ.

ಮಾವ- ಅಳಿಯರ ಗೆಲುವು

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡ(Sharath Bacchegowda) ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಅಂದಹಾಗೆ ಅವರ ಮಾವ ಪುಟ್ಟಸ್ವಾಮಿ ಗೌಡ(Puttaswamy Gowda) ಗೌರಿಬಿದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.

Leave A Reply

Your email address will not be published.