ಗೆಲುವಿನ ನಿರೀಕ್ಷೆಯಲ್ಲಿ‌ ಮಕ್ಕಳೊಂದಿಗೆ ಕ್ರಿಕೆಟ್‌ ಆಡಿದ ಯುಟಿ ಖಾದರ್..!

ಮಂಗಳೂರು : ಮೇ.10ರಂದು ಕರ್ನಾಟಕ ವಿಧಾನ ಸಭೆ ಚುನಾವಣಾ ಮತ ಏಣಿಕೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಬಹುಮತದ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ. ಖಾದರ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ ಎಂದು ವರದಿಯಾಗಿದೆ.

ಸದಾ ಗೆಲುವಿನ ಹಾದಿಯಲ್ಲೇ ಸಾಗುವ ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ. ಖಾದರ್ ಚುನಾವಣಾ ಫಲಿತಾಂಶದ ಟೆನ್ಷ್ಯನ್‌ ಬಿಟ್ಟು ರಿಲ್ಯಾಕ್ಸ್‌ ಆಗಿ ಉಲ್ಲಾಳದ ಭಾರತ್ ಗ್ರೌಂಡ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದಾರೆ. ಯುಟಿ ಖಾದರ್‌ ಈ ಬಾರಿಯೂ ಭಾರೀ ಬಹುಮತದೊಂದಿಗೆ ಗೆಲುವಿನ ನಿರೀಕ್ಷೆಯನ್ನು ಹೊಂದಿದ್ದಾರೆ. ರಾಜ್ಯ ರಾಜಕೀಯ ಭವಿಷ್ಯ ನಿರ್ಧಾರ ಪಕ್ಕಾ ಅನ್ನೋದರ ಬಗ್ಗೆ ಯಾವುದೇ ಚಿಂತೆ ಇಲ್ಲದೇ ಮಕ್ಕಳೊಂದಿಗೆ ಕಾಲಕಾಳೆಯುತ್ತಿರೋದುವ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಂಗಳೂರು ಉಳ್ಳಾಲ ಕ್ಷೇತ್ರದ ಮತದಾನ ಎಣಿಕೆ ನಾಲ್ಕನೇ ಸುತ್ತು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಮುಗಿದಿದ್ದು ಕಾಂಗ್ರೆಸ್‌ ನ ಯುಟಿ ಖಾದರ್ 19204 ಮತ ಪಡೆದಿದ್ದಾರೆ.ದ್ಯ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ಯುಟಿ ಖಾದರ್ 19204 ಮತ ಪಡೆದಿದ್ದಾರೆ. ಇನ್ನು ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಂಪಲ 9981 ಮತಗಳನ್ನು ಪಡೆದಿದ್ದಾರೆ. ಸದ್ಯಕ್ಕೆ ಖಾದರ್ ಅವರು 9223 ವೋಟ್ ಗಳ ಮುನ್ನಡೆ ಪಡೆದಿದ್ದಾರೆ.

Leave A Reply

Your email address will not be published.