Karnataka Assembly election 2023- ಚುನಾವಣೆಯಲ್ಲಿ ಸೋಲು-ಗೆಲುವಿನ ಭೀತಿ! ಎಲ್ಲಾ ಬಿಟ್ಟು ‘ಚೊಂಬೇಶ್ವರ’ ಎನ್ನುತ್ತಾ ಚೊಂಬು ಶಾಸ್ತ್ರದ ಮೊರೆ ಹೋದ ಕಾರ್ಯಕರ್ತರು!

Karnataka Assembly election 2023: ರಾಜ್ಯ ರಾಜಕೀಯ ಭವಿಷ್ಯ (Karnataka Assembly election 2023) ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಈ ನಡುವೆ ಸೋಲು-ಗೆಲುವಿನ ಲೆಕ್ಕಾಚಾರಗಳು, ಭೀತಿ ಎಲ್ಲವೂ ಜೋರಾಗಿದೆ. ತಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಅನೇಕರು ಲಕ್ಷ ಲಕ್ಷ ಬೆಟ್ಟಿಂಗ್(Betting) ಕಟ್ಟುತ್ತಿದ್ದರೆ, ಕೆಲವರು ದೇವರು ದಿಂಡಿರ ಮೊರೆ ಹೋಗುತ್ತಿದ್ದಾರೆ. ಅತ್ತ ಕಾವಿಧಾರಿ ಸ್ವಾಮಿಗಳು ಭವಿಷ್ಯವಾಣಿ ನುಡಿಯುತ್ತಿದ್ದಾರೆ. ಆದರೆ ಈ ನಡುವೆ ಇಲ್ಲೊಂದೆಡೆ ಪ್ರಮುಖ ಪಕ್ಷಗಳ ಕಾರ್ಯಕರ್ತರು ಚೊಂಬು ಶಾಸ್ತ್ರದ ಮೊರೆ ಹೋಗಿದ್ದಾರೆ.

ಹೌದು, ಆನೇಕಲ್(Anekal) ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಕಾರ್ಯಕರ್ತರು ಚೊಂಬು ಶಾಸ್ತ್ರದ ಮೊರೆ ಹೋಗಿದ್ದಾರೆ. ಅಂದಹಾಗೆ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ (Congress- BJP) ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವಣ್ಣ(B Shivanna) ಹಾಗೂ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಶ್ರೀನಿವಾಸ್(Hullalli Shrinivas) ನಡುವೆ ಜಿದ್ದಾಜಿದ್ದಿ ಶುರಶಾಗಿದ್ದು ಇಂದು ಹೊರ ಬೀಳುವ ಫಲಿತಾಂಶದಲ್ಲಿ ಯಾರು ಜಯ ಸಾಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಫಲಿತಾಂಶಕ್ಕೂ ಮುನ್ನ ಕಾರ್ಯಕರ್ತರು ಚೊಂಬು ಶಾಸ್ತ್ರ ಕೇಳಿದ್ದಾರೆ.

ಸದ್ಯ ಕಾಂಗ್ರೆಸ್(Congress) ಮೇಲುಗೈ ಸಾಧಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಚೊಂಬು ಶಾಸ್ತ್ರ ಕೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಶಾಸ್ತ್ರದ ಭವಿಷ್ಯ ನಿಜವಾಗುತ್ತದೆಯೋ ಎಂದು ಇನ್ನು ಕೆಲವೇ ಗಂಟೆಗಳಲ್ಲಿ ಹರಬೀಳಲಿದ್ದು, ಇದರ ಸತ್ಯಾ ಸತ್ಯತೆ ತಿಳೆಯಲಿದೆ.

Leave A Reply

Your email address will not be published.