Home Karnataka State Politics Updates Karnataka election: ಫಲಿತಾಂಶ ಮುಂಚಿತವಾಗೇ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು! ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದರಾಮಯ್ಯ ಕರೆ!...

Karnataka election: ಫಲಿತಾಂಶ ಮುಂಚಿತವಾಗೇ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು! ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾಗೆ ಸಿದ್ದರಾಮಯ್ಯ ಕರೆ! ಏನಂದ್ರು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Karnataka election: ರಾಜ್ಯ ವಿಧಾನಸಭೆ ಚುನಾವಣೆಯ(Assembly karnataka election) ಫಲಿತಾಂಶ (Result) ಇಂದು ಹೊರಬೀಳಲಿದ್ದು ಕೆಲವೇ ಗಂಟೆಗಳಲ್ಲಿ ರಾಜ್ಯ ರಾಜಕೀಯದ ಭವಿಷ್ಯ ತೀರ್ಮಾನ ಆಗಲಿದ. ಆದರೆ ಈ ನಡುವೆಯೇ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆಗಳು ಆಗುತ್ತಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಮತದಾನೋತ್ತರ ಸಮೀಕ್ಷೆಗಳನ್ನು ಆಧರಿಸಿ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಾರ್ಟಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಕೂಡ ಈ ಬಗ್ಗೆ ಅವರಲ್ಲೇ ಒಮ್ಮತದ ಅಭಿಪ್ರಾಯವಾಗಲಿ, ಧೈರ್ಯವಾಗಲಿ ಅಥವಾ ನಂಬಿಕೆಯಾಗಲಿ ಇಲ್ಲವೆನ್ನಬಹುದು. ಹೀಗಾಗಿ ಒಂದುವೇಳೆ ಮ್ಯಾಜಿಕ್ ನಂಬರ್ ನಮ್ಮದಾಗಲಿಲ್ಲ ಅಂದ್ರೆ ಏನು ಮಾಡಬೇಕೆಂದು ಈಗಿಂದಲೇ ಎಲ್ಲರೂ ಮಾಸ್ಟರ್ ಪ್ಲಾನ್(Master plan) ಹಾಕುತ್ತಿದ್ದಾರೆ.

ಅಂತೆಯೇ ಇದೀಗ ದೊರೆತ ಮಾಹಿತಿ ಪ್ರಕಾರ ಚುನಾವಣಾ ಫಲಿತಾಂಶದ ಮುನ್ನದಿನವಾದ ಶುಕ್ರವಾರ ಅಂದರೆ ನಿನ್ನೆ ದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiha) ಅವರು, ವಿಜಯನಗರ(Vijayanagar) ಜಿಲ್ಲೆಯ ಹರಪನಹಳ್ಳಿ(Harapanalli) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ(Independent Candidate) ಎಂ.ಪಿ.ಲತಾ(M P Latha) ಅವರಿಗೆ ಫೋನ್ ಕರೆ ಮಾಡಿರುವುದು ಜಿಲ್ಲೆಯ ರಾಜಕಾರಣದಲ್ಲಿ ಮಹತ್ವ ಪಡೆದಿದೆ.

ಲತಾ ಅವರಿಗೆ ಕರೆ ಮಾಡಿದ ಸಿದ್ದು, ಚುನಾವಣೆಯಲ್ಲಿ ತಮಗೆ ಗೆಲುವಾಗಲಿದ್ದು, ಕಾಂಗ್ರೆಸ್(Congress) ಪಕ್ಷವನ್ನು ಬೆಂಲಿಸುವAತೆ ಕೋರಿದ್ದಾರೆ ಎಂಬ ವಿಚಾರ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ ಈ ಕುರಿತಾಗಿ ಪ್ರತಿಕ್ರಿಯಿಸಿದ ಪಕ್ಷೇತರ ಅಭ್ಯರ್ಥಿ ಎಂ.ಪಿ.ಲತಾ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ತಂದೆ ಎಂ.ಪಿ.ಪ್ರಕಾಶ್(M P Prakash) ಕಾಲದಿಂದಲೂ ನಮ್ಮ ಕುಟುಂಬದ ಆಪ್ತರಾಗಿದ್ದರು. ಮಗಳೆಂಬ ಭಾವನೆಯಿಂದ ಆಗಾಗ ನಮಗೆ ಕರೆ ಮಾಡಿ, ಕುಶಲೋಪರಿ ವಿಚಾರಿಸುತ್ತಾರೆ ಎಂದಿದ್ದಾರೆ.

ಅಂದಹಾಗೆ ಬಳ್ಳಾರಿ(Ballari) ಮತ್ತು ನೂತನ ವಿಜಯನಗರ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರೋ ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಎಂ.ಪಿ.ಲತಾ ಮತ್ತು ಎಂ.ಪಿ.ವೀಣಾ ಸಹೋದರಿಯರು ಕಳೆದ ಎರಡು ವರ್ಷಗಳಿಂದ ನಿರಂತರ ಪಕ್ಷ ಸಂಘಟನೆ ಮತ್ತು ಜನ ಸೇವೆಯಲ್ಲಿ ತೊಡಗಿದ್ದರು. ಆದರೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ವರಿಷ್ಠರು ಎನ್.ಕೊಟ್ರೇಶಿ ಅವರಿಗೆ ಮಣೆ ಹಾಕಿದರು. ಇದರಿಂದ ಆಕ್ರೋಶಗೊಂಡಿದ್ದ ಇಬ್ಬರೂ ಸಹೋದರಿಯರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು.

ಆದರೆ ಮುಂದೆ ಎಂ.ಪಿ.ವೀಣಾ ನಾಮಪತ್ರ ವಾಪಸ್ ಪಡೆದು, ಲತಾಗೆ ಬೆಂಬಲವಾಗಿ ನಿಂತರು. ಅಪಾರ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ನಡೆಸಿರುವ ಪಕ್ಷೇತರ ಅಭ್ಯರ್ಥಿ ಎಂ.ಪಿ.ವೀಣಾ, ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಮತದಾನೋತ್ತರ ವಿವಿಧ ಸಮೀಕ್ಷೆಗಳಲ್ಲಿ ಹರಪನಹಳ್ಳಿಯಲ್ಲಿ ಎಂ.ಪಿ.ಲತಾ ಗೆಲುವಿನ ಸಾಧ್ಯತೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಕೆಲ ಸ್ಥಾನಗಳ ಕೊರತೆಯಾಗುವ ಬಗ್ಗೆ ಮುನ್ಸೂಚನೆ ನೀಡಿವೆ.